ಕಾಸರಗೋಡು: ವಾಹನ ಢಿಕ್ಕಿಯಾಗಿ ಪಾದಕ್ಕೆ ಗಾಯವಾಗಿದೆ ಎಂದು ಹೇಳಿ ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರನ್ನು ಮೂಲತಃ ಬೆಂಗಳೂರಿನವರಾಗಿದ್ದು, ಪ್ರಸ್ತುತ ಕುಂಬಳೆಯ ಕಳತ್ತೂರಿನಲ್ಲಿ ವಾಸವಾಗಿದ್ದ ಶಟರ್ ದುರಸ್ತಿ ಕೆಲಸಗಾರ ಅಸ್ಲಾಂ ಭಾಷಾ (39) ಎಂದು ಗುರುತಿಸಲಾಗಿದೆ.

ವಾಹನ ಢಿಕ್ಕಿ ಹೊಡೆದಿರುವ ಬಗ್ಗೆ ಆರಂಭದಲ್ಲಿ ಪೊಲೀಸರಿಗೆ ದೂರು ನೀಡದಂತೆ ಅಸ್ಲಾಂ ಭಾಷಾ ಮನವಿ ಮಾಡಿದ್ದರು ಎನ್ನಲಾಗಿದೆ. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ದಿಢೀರ್ ಆಗಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ನಗರ ಪೊಲೀಸರು, ಅಸ್ಲಾಂ ಭಾಷಾ ಅವರನ್ನು ಬಸ್ ನಿಲ್ದಾಣದಲ್ಲಿ ಪತ್ತೆಹಚ್ಚಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಮುಂದುವರಿದ ನಡುವೆಯೇ ರಾತ್ರಿ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನು ಅಸ್ಲಾಂ ಭಾಷಾಗೆ ಯಾವ ವಾಹನ ಢಿಕ್ಕಿ ಹೊಡೆದಿತ್ತು? ಘಟನೆ ನಿಖರವಾಗಿ ಹೇಗೆ ಸಂಭವಿಸಿತು? ಎಂಬ ಬಗ್ಗೆ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಅಸ್ಲಾಂ ಭಾಷಾ ಅವರ ಸಾವಿನ ಕುರಿತು ಕುಟುಂಬಸ್ಥರು ತೀವ್ರ ಸಂಶಯ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


Finally found a place where the login process is actually seamless. No more endless loading screens. Great experience so far with jili356comlogin.