ಕಾಸರಗೋಡು: ಸೈಬರ್ ಕ್ರಿಮಿನಲ್‌ಗಳಿಗೆ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವ ಜಾಲವನ್ನು ಭೇದಿಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಸಂಶಯಾಸ್ಪದ ವ್ಯವಹಾರ ಪತ್ತೆಹಚ್ಚಿದ್ದಾರೆ.ಉಪ್ಪಳ ಕೈಕಂಬದ ವ್ಯಕ್ತಿಯೊಬ್ಬರ ಎಸ್‌ಬಿಐ ಖಾತೆಗೆ ಆನ್‌ಲೈನ್ ಟ್ರೇಡಿಂಗ್ ವಂಚನೆಯ 9.10 ಲಕ್ಷ ರೂಪಾಯಿ ಹಣ ಜಮೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಫೆಬ್ರವರಿ 24ರಂದು 6.10 ಲಕ್ಷ ರೂ. ಹಾಗೂ ಮಾರ್ಚ್ 11ರಂದು 3 ಲಕ್ಷ ರೂ. ಈ ಖಾತೆಗೆ ವರ್ಗಾವಣೆಯಾಗಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಮೊಬೈಲ್‌ನ ವಾಟ್ಸಾಪ್ ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳು ವಂಚನೆಯ ಕೊಂಡಿಯನ್ನು ಖಚಿತಪಡಿಸಿವೆ. ಈ ಅಕ್ರಮ ಹಣವನ್ನು ಆತ ಸೈಬರ್ ಖದೀಮರಿಗೆ ಹಸ್ತಾಂತರಿಸಿದ್ದಾನೆಯೇ ಎಂಬುದರ ಕುರಿತು ನೀಲೇಶ್ವರ ಮತ್ತು ಉಪ್ಪಳ ವ್ಯಾಪ್ತಿಯಲ್ಲಿ ತನಿಖೆ ತೀವ್ರಗೊಂಡಿದೆ.


I’ve tried a few sites lately and this one really stands out. The interface is smooth and the payouts are fast. Definitely my new favorite spot for some action. Check out 32vin