ಕುಂಬಳೆ: ಪಾಲಕ್ಕಾಡ್ ಡಿವಿಷನ್‌ನಿಂದ ಮಂಗಳೂರು ವಲಯವನ್ನು ಬೇರ್ಪಡಿಸುವ ಮತ್ತು ತಿರುವನಂತಪುರ ಡಿವಿಷನ್ ವಿಭಜಿಸುವ ಪ್ರಕ್ರಿಯೆಗಳು ತೀವ್ರಗೊಳ್ಳ ಬೆನ್ನಲ್ಲೇ, ಕೇರಳಕ್ಕೆ ಪ್ರತ್ಯೇಕ ರೈಲ್ವೇ ವಲಯ ಬೇಕೆಂಬ ಕೂಗು ಬಲವಾಗಿದೆ.

ದಕ್ಷಿಣ ಭಾರತದಲ್ಲೇ ಗರಿಷ್ಠ ಪ್ರಯಾಣಿಕರು ಹಾಗೂ ಆದಾಯ ತಂದುಕೊಡುವ ಕೇರಳ, ಪ್ರಸ್ತುತ ಚೆನ್ನೈ ಕೇಂದ್ರಿತ ದಕ್ಷಿಣ ರೈಲ್ವೇಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂಬ ಆಕ್ಷೇಪವಿದೆ. ವಿಶಾಖಪಟ್ಟಣಂನಲ್ಲಿ ಹೊಸ ವಲಯ ರಚನೆಯಾಗಿರುವಾಗ ಕೇರಳದ ಬೇಡಿಕೆಯೂ ನ್ಯಾಯಯುತವಾಗಿದೆ.

ಇದೇ ವೇಳೆ, ಕುಂಬಳೆ ರೈಲ್ವೇ ನಿಲ್ದಾಣದ ಬಳಿಯಿರುವ 34 ಎಕರೆ ಜಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳುವ ನಿರೀಕ್ಷೆ ಚಿಗುರಿದೆ. ಮಂಗಳೂರು ವಲಯ ಮೈಸೂರಿಗೆ ಸೇರಿದರೆ, ಉಳ್ಳಾಲದಲ್ಲಿರುವ ರೈಲ್ವೇ ಎಲೆಕ್ಟ್ರಿಕಲ್ ಟಿ.ಆರ್.ಡಿ ಘಟಕವನ್ನು ಕುಂಬಳೆಗೆ ಸ್ಥಳಾಂತರಿಸಲು ರೈಲ್ವೇ ಯೋಜಿಸುತ್ತಿದೆ.
ಇತ್ತೀಚೆಗೆ ಚೆನ್ನೈನ ಉನ್ನತ ಅಧಿಕಾರಿಗಳ ತಂಡ ಕುಂಬಳೆ ಮತ್ತು ಕಾಸರಗೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರದೇಶದ ರೈಲ್ವೇ ಅಭಿವೃದ್ಧಿಗೆ ಹೊಸ ಭರವಸೆ ಮೂಡಿಸಿದೆ.


Such a chill vibe and the bonuses for new users are actually generous. I’ve tried many sites but bet55game stands out for its honesty.