ಕಾಸರಗೋಡು: ಸ್ಕೈಬ್ಲೂ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ (R), ಪಳ್ಳಂನ 43ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 6ನೇ ಆವೃತ್ತಿಯ ಮ್ಯಾರಥಾನ್ ಓಟ ಗಮನ ಸೆಳೆಯಿತು. ಕಾಸರಗೋಡು ಜಿಲ್ಲಾ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ IAS ಅವರು ಮ್ಯಾರಥಾನ್‌ಗೆ ಚಾಲನೆ ನೀಡುವುದರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ 6 ಕಿಲೋಮೀಟರ್ ಓಡಿ ಫಿನಿಶ್ ಮಾಡಿದರು.


ಎನ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿದ್ದೀಖ್ ವೊಳಮುಗರ‍್ ಅವರು ಮ್ಯಾರಥಾನ್‌ಗೆ ಫ್ಲ್ಯಾಗ್ ಆಫ್ ಮಾಡಿದರು.

ಪ್ಯಾಲಿಯೇಟಿವ್ ಆರೈಕೆ ಕ್ಷೇತ್ರದಲ್ಲಿ ಕ್ಲಬ್‌ನ ಕಾರ್ಯಚಟುವಟಿಕೆಗಳಿಗೆ ಬೆಂಬಲವಾಗಿ ದಾನಿ ಅಬ್ದುಲ್ ಖಾದರ್ ಅರಿಯಪ್ಪಾಡಿ ಅವರು ಸ್ಕೈಬ್ಲೂ ಪ್ಯಾಲಿಯೇಟಿವ್ ಕೇರ್ ಸೊಸೈಟಿಗೆ ನೀಡಿದ ಪ್ಯಾಲಿಯೇಟಿವ್ ಉಪಕರಣಗಳನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಸೊಸೈಟಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಮ್ಯಾರಥಾನ್‌ನಲ್ಲಿ ವಿಜೇತರಾದ ಶಹೀಮ್, ಮುಆದ್ ಮತ್ತು ಮಾಯಿಸ್ ಹಾಗೂ ವಿಲೇಜ್ ಅಸಿಸ್ಟೆಂಟ್ ಆಗಿ ನೇಮಕಗೊಂಡ ವಿಶಾಲ್ ಎ. ಅವರಿಗೆ ಜಿಲ್ಲಾಧಿಕಾರಿ ಬಹುಮಾನಗಳನ್ನು ವಿತರಿಸಿದರು.
ಕಾಸರಗೋಡು ಜಿಲ್ಲೆಯಿಂದ ವರ್ಗಾವಣೆಯಾಗಿ ಕೃಷಿ ಇಲಾಖೆಗೆ ತೆರಳುತ್ತಿರುವ ಜಿಲ್ಲಾ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ IAS ಅವರಿಗೆ ಕ್ಲಬ್‌ನ ಹಿರಿಯ ಸದಸ್ಯರು ಬೀಳ್ಕೊಡುಗೆ ನೀಡಿದರು.

ಕಾರ್ಯಕ್ರಮದಲ್ಲಿ ಫಾರೂಖ್ ಪಿ. ಎಂ. ಸ್ವಾಗತಿಸಿದರು. ಪಂಚಾಯತ್ ಸದಸ್ಯ ಹಾಗೂ ಕ್ಲಬ್ ಸದಸ್ಯ ಮಜೀದ್ ಎಂ. ಎಚ್. ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಲಲಿತಾ ಸಂತೋಷ್, ಶಮ್ಸ್ ಪಾಡಲಡುಕ್ಕ, ಇಬ್ರಾಹಿಂ ಮಾಸ್ಟರ್, ಮೊಹಮ್ಮದ್ ಮೈದಾನಿ, ಮೊಹಮ್ಮದ್ ಪಾಡಲಡುಕ್ಕ, ಎಂ. ಎ. ಎಸ್. ಮಡಿಕೇರಿ, ಸಿರಾಜ್ ಎ. ಎಂ., ಮುಸ್ತಫಾ ಒಳಮುಗರ‍್, ಮಸ್ತೂಕ್, ಕಮರುದ್ದೀನ್ ಪಾಡಲಡುಕ್ಕ, ಜಾಫರ್ ಪಾಡಲಡುಕ್ಕ, ಶರೀಫ್ ವೊಳಮುಗರ‍್, ಅಜೀಜ್ ಮಾಸ್ಟರ್ ಸೇರಿದಂತೆ ಹಲವರು ಮಾತನಾಡಿದರು.

