ಪೈವಳಿಗೆ: ದೇಶಾಭಿಮಾನಿ ಲೈಬ್ರರಿ ಮತ್ತು ಬ್ಲ್ಯಾಕ್ ಕ್ಯಾಟ್ ಕ್ಲಬ್ ಬಳ್ಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಸೌಹಾರ್ದವನ್ನು ಕಾಪಾಡುವ ಉದ್ದೇಶದಿಂದ ಓಣಂ ಆಚರಣೆಯನ್ನು ಆಯೋಜಿಸಲಾಯಿತು.


ಪೈವಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬದ್ರುನ್ನಿಸಾ ಸಲೀಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಉದಯ ಸಾರಂಗ್ ಮುಖ್ಯ ಭಾಷಣ ಮಾಡಿದರು.


ಗ್ರಾಮ ಪಂಚಾಯತ್ ಸದಸ್ಯ ಬಿ.ಕೆ. ಬಲ್ಲಾಳ್, ಸಿಡಿಎಸ್ ಅಧ್ಯಕ್ಷೆ ಸುಜಾತಾ ಬಿ. ರೈ, ಪುರುಷೋತ್ತಮ ಬಾಳೂರು, ಸತ್ತಾರ್ ಬಳ್ಳೂರು, ಹಾರಿಸ್ ಬಳ್ಳೂರು ಹಾಗೂ ಥಾಮಸ್ ಬಳ್ಳೂರು ಮಾತನಾಡಿದರು.

ಧರ್ಮದ ಹೆಸರಿನಲ್ಲಿ ಮಾತ್ರ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಇಂದಿನ ಕಾಲಘಟ್ಟದಲ್ಲಿ, ಮಾನವ ಮೈತ್ರಿಯನ್ನು ಕಾಪಾಡುವ ಉದ್ದೇಶದಿಂದ ಎಲ್ಲರನ್ನೂ ಒಳಗೊಂಡಂತೆ ಓಣಂ ಆಚರಣೆಯನ್ನು ಆಯೋಜಿಸಲಾಯಿತು. ನೂರಾರು ಜನರಿಗೆ ಓಣಂ ಸದ್ಯವನ್ನು ಬಡಿಸಲಾಯಿತು.

