ಒಂದೇ ನೋಂದಣಿ ಸಂಖ್ಯೆಯೊಂದಿಗೆ ಸಂಚರಿಸುತ್ತಿದ್ದ ಟಾರ್ ವಾಹನಗಳು: ಕಳ್ಳಾಟ ಬಯಲು ಮಾಡಿದ ಮಂಜೇಶ್ವರ ಪೊಲೀಸರು

​ಮಂಜೇಶ್ವರ:ಉಪ್ಪಳದಲ್ಲಿ ಒಂದೇ ರೀತಿಯ ನೋಂದಣಿ ಸಂಖ್ಯೆ ಯನ್ನು ಅಳವಡಿಸಿಕೊಂಡು ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದ ಎರಡು ಟಾರ್ ವಾಹನಗಳನ್ನು ಮಂಜೇಶ್ವರ ಪೊಲೀಸರು ಇಂದಿನ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.

​ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ವಿಷ್ಣು ಹಾಗೂ ಎಸ್‌ಐ ಶಬರಿ ಅವರ ನೇತೃತ್ವದ ಪೊಲೀಸ್ ತಂಡವು ಇಂದು ಬೆಳಿಗ್ಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ರೋಚಕ ನಕಲಿ ಜಾಲದ ಕಳ್ಳಾಟ ಬೆಳಕಿಗೆ ಬಂದಿದೆ.

ಎರಡು ವಾಹನಗಳಿಗೂ ಒಂದೇ ನೋಂದಾವಣೆ ಸಂಖ್ಯೆ ಇರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಟಾರ್ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಟಾರ್ ವಾಹನದ ಮಾಲೀಕರು ಈಗಾಗಲೇ ಮಂಜೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆದರೆ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಲಾಯಿಸುತ್ತಿದ್ದವರಿಗೆ ನೋಟಿಸ್ ಜಾರಿಗೊಳಿಸಿದ್ದರೂ ಅವರು ಠಾಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿದವರ ವಿರುದ್ಧ ಬಿಎನ್‌ಎಸ್ ಹಾಗೂ ಕೇರಳ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಜೇಶ್ವರ ಠಾಣೆಯ ಎಸ್‌ಐ ಶಬರಿ ಅವರು ಮಾಹಿತಿ ನೀಡಿದ್ದಾರೆ.

SHARE
Loading spinner

2 thoughts on “ಒಂದೇ ನೋಂದಣಿ ಸಂಖ್ಯೆಯೊಂದಿಗೆ ಸಂಚರಿಸುತ್ತಿದ್ದ ಟಾರ್ ವಾಹನಗಳು: ಕಳ್ಳಾಟ ಬಯಲು ಮಾಡಿದ ಮಂಜೇಶ್ವರ ಪೊಲೀಸರು

Leave a Reply

Your email address will not be published. Required fields are marked *

error: Content is protected !!