ಭಜನಾ ಲಾಂಛನ ಮತ್ತು ಸಮವಸ್ತ್ರ ವಿತರಣೆ

ಉಪ್ಪಳ : ಶ್ರೀ ಜೈ ಹನುಮಾನ್ ಕುಣಿತ ಭಜನಾ ತಂಡ ಚಿಗುರುಪಾದೆ ಇದರ ಸಮವಸ್ತ್ರ ಮತ್ತು ಲಾಂಛನವನ್ನು ಇತ್ತೀಚೆಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಚಿಗುರುಪಾದೆಯಲ್ಲಿ ಬಿಡುಗಡೆ ಗೊಳಿಸಲಾಯಿತು.

ಸಭೆಯ ಅಧ್ಯಕ್ಷತೆ ಯನ್ನು ಶ್ರೀ ವಸಂತ ಮಾಷ್ಟು ತೊಟ್ಟೆತ್ತೋಡಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಸತೀಶ್ ಕುಮಾರ್ ಕಾಪು ಪ್ರಧಾನ ಸಂಚಾಲಕರು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು, ಶಂಕರ್ ಪ್ರದೀಪ್ ನಾಯಕ್, ನಾರಾಯಣ ಚಿಗುರುಪಾದೆ, ರಾಜೇಶ್ವರಿ ತೊಟ್ಟೆ ತ್ತೋಡಿ ಸದಾಶಿವ ರಾವ್, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೀವೇಶ್, ಕೀರ್ತಿಕಾ ಇವರನ್ನು ಅಭಿನಂದಿಸಲಾಯಿತು . ಕುಮಾರಿ ಪೂಜಾ, ಕೀರ್ತಿಕಾ, ಶಾನ್ವಿ ಪ್ರಾರ್ಥಿಸಿದ ಕಾರ್ಯಕ್ರಮವನ್ನು ಅಶ್ವಿತ ಸ್ವಾಗತಿಸಿ ದಾನ್ಯವಾದವಿತ್ತರು ಮನಿಷ್ ಚಿಗುರುಪಾದೆ ಕಾರ್ಯಕ್ರಮವನ್ನು ನಿರೂಪಿಸಿದರು ನಂತರ ಸಿಹಿ ತಿಂಡಿ ವಿತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!