ಮಂಜೇಶ್ವರ: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮಂಜೇಶ್ವರ ಅವರು ಮಂಜೇಶ್ವರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಗಣೇಶನ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ನ್ಯಾ. ನವೀನ್ ರಾಜ್, ಪದ್ಮನಾಭ ಕಡಪರ, ಅವಿನಾಶ್ ಹೆಗ್ಡೆ, ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ವಕೀಲರಾಗಿ ಕಾಣಿಸಿಕೊಂಡಿರುವ ಅರುಣ್ ಶ್ಯಾಮ್ ಮಂಜೇಶ್ವರ ಅವರ ಗಣೇಶೋತ್ಸವ ಕಾರ್ಯಕ್ರಮದ ಭಾಗವಹಿಸುವಿಕೆ ಸ್ಥಳೀಯವಾಗಿ ಗಮನ ಸೆಳೆಯಿತು.


