ಕಾಸರಗೋಡು: ಬಸ್ ಪ್ರಯಾಣದ ಮಧ್ಯೆ 18 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಚೆರ್ಕಳ, ಪಾಡಿ, ಮೀತ್ತಲ್ ಎಡನೀರ್ನಲ್ಲಿರುವ ಕ್ವಾರ್ಟರ್ಸ್ ಒಂದರಲ್ಲಿ ವಾಸವಾಗಿದ್ದ ನಿರ್ಮಲ (18) ನಾಪತ್ತೆಯಾದ ಯುವತಿ.

ಈಕೆ ಹುಣಸೂರು ತಾಲೂಕಿನ ಮಂಗಳೂರು ಮಾಲ, ಹರಿಣಹಳ್ಳಿ ಮೂಲದವಳಾಗಿದ್ದಾಳೆ.
ಮೈಸೂರಿನಲ್ಲಿದ್ದ ಈ ಯುವತಿ ಭಾನುವಾರ ಮಧ್ಯಾಹ್ನ 2:30 ಕ್ಕೆ ಚೆರ್ಕಳದಲ್ಲಿರುವ ತನ್ನ ಅಜ್ಜನ ಮನೆಗೆ ಬಸ್ಸಿನಲ್ಲಿ ಹೊರಟಿದ್ದಳು. ಆದರೆ ತಲುಪಬೇಕಾದ ಸಮಯ ಮುಗಿದರೂ ಯುವತಿ ಚೆರ್ಕಳ ತಲುಪಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಅಜ್ಜ ಶರವಣ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿಯ ನಾಪತ್ತೆಯ ಹಿಂದೆ ಅನುಮಾನಗಳು ವ್ಯಕ್ತವಾಗಿವೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿದ್ದಲ್ಲಿ 9497970103, 9495776607 ಸಂಖ್ಯೆಗಳನ್ನು ಸಂಪರ್ಕಿಸುವಂತೆ ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ.


Secure and professional. I feel safe depositing my funds here and the withdrawals are lightning fast. Go to 77888betlogin.