ಕಾಸರಗೋಡು : ಇಲ್ಲಿಯ ಕಡಪ್ಪುರ ನಿವಾಸಿ, ಬೀರಂತಬೈಲು ತ್ಸುನಾಮಿ ಫ್ಲ್ಯಾಟ್ನಲ್ಲಿ ವಾಸವಿದ್ದ ಮೀನು ಕಾರ್ಮಿಕ ಶರತ್ (36) ಎಂಬವರು ಮನೆಯ ಬೆಡ್ರೂಂನ ಕಿಟಿಕಿ ಸರಳಿನಲ್ಲಿ ನೇಣುಬಿಗಿದು ಸಾವಿಗೀಡಾಗಿದ್ದಾರೆ.

ಬಾನುವಾರ ರಾತ್ರಿ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

