ಕುಂಬಳೆ: ದೇವಿ ನಗರದ ರಾಜನ್ ಎಂಬುವವರ ಕಾಂಕ್ರೀಟ್ ಮನೆಗೆ ಸಿಡಿಲು ಬಡಿದು ವ್ಯಾಪಕ ಹಾನಿ ಸಂಭವಿಸಿದೆ. ಸಿಡಿಲಿನ ತೀವ್ರತೆಗೆ ಮನೆಯ ಸ್ವಿಚ್ ಬೋರ್ಡ್, ವೈರಿಂಗ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಅಷ್ಟೇ ಅಲ್ಲದೆ, ಗೋಡೆಗಳಲ್ಲಿ ಬಿರುಕು ಬಿಟ್ಟು ಸಿಮೆಂಟ್ ತುಂಡುಗಳು ಎಲ್ಲೆಡೆ ಚೆದುರಿ ಹೋಗಿವೆ.

ಘಟನೆ ನಡೆದಾಗ ಮನೆಯೊಳಗೆ ರಾಜನ್, ಪತ್ನಿ ಸುಲೋಚನ ಹಾಗೂ ಮಕ್ಕಳಾದ ದೀಪಕ್ ಮತ್ತು ದೀಕ್ಷಿತ್ ಇದ್ದರು. ಭಾರಿ ಶಬ್ದ ಕೇಳಿದ ತಕ್ಷಣವೇ ಎಚ್ಚೆತ್ತ ಎಲ್ಲರೂ ಕೂಡಲೇ ಮನೆಯಿಂದ ಹೊರಗೋಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ದಾರುಣ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿಗಳ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

