ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವ ಪಂಚಾಯತ್ ಗಳಲ್ಲಿ ಕನ್ನಡ ಆಡಳಿತ ಭಾಷೆ -ಆದರ್ಶ ಬಿ ಎಂ

ಪೈವಳಿಕೆ: ಕೇರಳ ಸರಕಾರ ಉದ್ದೇಶ ಪೂರ್ವಕವಾಗಿ ಆಡಳಿತ ಭಾಷೆ ಮಲಯಾಳಂ ಕಡ್ಡಾಯ ಗೊಳಿಸಿ ಗಡಿನಾಡು ಭಾಷಾ ಅಲ್ಪಸಂಖ್ಯಾಕರ ಮೂಲಭೂತ ಹಕ್ಕುಗಳನ್ನು ಸದ್ದಿಲದೇ ದಮನಿಸುತ್ತಿದ್ದಾರೆ.ಪಿನರಾಯಿ ಸರಕಾರ ಆಡಳಿತ ಭಾಷೆಯಾಗಿ ಮಲಯಾಳಂ ಕಡ್ಡಾಯ ಗೊಳಿಸುವಾಗ ನಿಯಮಸಭೆಯ ಚರ್ಚೆಯಲ್ಲಿ ಭಾಗವಹಿಸದ ಮಂಜೇಶ್ವರ ಶಾಸಕರ ಬೇಜವಾಬ್ದಾರಿ ತನ ಖಂಡನಿಯ ಮಾತ್ರವಲ್ಲ ಅಕ್ಷಮ್ಯ ಅಪರಾಧ ಕೂಡ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.


ನಿಯಮ ಸಭೆಯಲ್ಲಿ ಮಲಯಾಳಂ ಕಡ್ಡಾಯ ಗೊಳಿಸುವ ಬಿಲ್ ಮೇಲೆ ಚರ್ಚಿಸದ ಮಂಜೇಶ್ವರ ಶಾಸಕ ಕನ್ನಡ ನಾಡಿಗೆ ಅಗತ್ಯವೇ ಎಂದು ಜನತೆ ತೀರ್ಮಾನಿಸಬೇಕು.ಕೇರಳ ದಲ್ಲಿ ಮಲಯಾಳಂ ಆಡಳಿತ ಭಾಷೆಯಾಗಿ ಕಡ್ಡಾಯ ಆದಕಾರಣ ಕೇರಳ ಚುನಾವಣಾ ಆಯೋಗ ನೀಡುವ SIR ಫಾರಂ, ಅಭ್ಯರ್ಥಿ ಗಳ ನಾಮಪತ್ರ ಸಲ್ಲಿಕೆಯ ಅರ್ಜಿ ಕೂಡ ಮಲಯಾಳಂ ಭಾಷೆಯಲ್ಲಿ ಮಾತ್ರ ಲಭ್ಯ ವಾಗಿದೆ,ಸರಕಾರ ಹಾಗೂ ಶಾಸಕರ, ಚುನಾವಣ ಆಯೋಗದ ಕನ್ನಡ ವಿರೋಧಿ ನೀತಿಗೆ ಬಿಜೆಪಿ ಖಂಡಿಸುತ್ತಿದೆ.


ಜನತೆ ಗ್ರಾಮ ಗ್ರಾಮಗಳಲ್ಲಿ ಬಿಜೆಪಿ ಗೆ ಅಧಿಕಾರ ನೀಡಿದರೆ ಬಿಜೆಪಿ ಆಡಳಿತಕ್ಕೆ ಬರುವ ಪಂಚಾಯತ್ ಗಳಲ್ಲಿ ಕನ್ನಡ ಕಡ್ಡಾಯ ಆಡಳಿತ ಭಾಷೆಯಾಗಿ ಮೊದಲ ಸಭೆಯಲ್ಲೇ ತೀರ್ಮಾನ ಮಾಡಲಿದೆ.ಜನತೆಗೆ ಎಲ್ಲಾ ಅರ್ಜಿ ಗಳನ್ನು, ಕನ್ನಡದಲ್ಲೇ ನೀಡಲಿದೆ ಹಾಗೂ ಕನ್ನಡ ಬಲ್ಲವರನ್ನು ಮಾತ್ರ ನೇಮಕಾತಿಗೆ ಸಿಪಾರಸು ಮಾಡಲಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.ಬಿಜೆಪಿ ಗೆ ಮತ ನೀಡಿ ಅಧಿಕಾರ ನೀಡಿದರೆ ಕನ್ನಡವನ್ನು ಉಳಿಸಲು ಬಿಜೆಪಿ ಕನ್ನಡಿಗರೊಂದಿಗೆ ಇರಲಿದೆ ಎಂದು ಹೇಳಿದರು.ಮಂಜೇಶ್ವರ ಮಂಡಲದ ಎಲ್ಲಾ 4 ಪಂಚಾಯತ್ ಗಳಲ್ಲಿ ಬಿಜೆಪಿ ಯ ಎಲ್ಲಾ ಅಭ್ಯರ್ಥಿ ಗಳು ಕನ್ನಡಿಗರು ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!