ಮಂಜೇಶ್ವರ: ಮುಂಜಾನೆ 3:45ಕ್ಕೆ ವಾಸ್ತವ್ಯದ ಫ್ಲಾಟ್ನಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ ಹಾಗೂ ನವಜಾತ ಶಿಶುವಿಗೆ ಸಮಯೋಚಿತವಾಗಿ ನೆರವು ನೀಡಿ ಜೀವ ರಕ್ಷಿಸಿದವರನ್ನು ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಹೆರಿಗೆಯ ವಿಚಾರ ತಿಳಿದ ತಕ್ಷಣವೇ ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಶಂಸುದ್ದೀನ್ ಮತ್ತು ಜಕರಿಯ ಉದ್ಯಾವರ ಸ್ಥಳಕ್ಕೆ ತಲುಪಿ ಅಗತ್ಯ ಕ್ರಮಕೈಗೊಂಡರು.



ಬಳಿಕ ಆ್ಯಂಬುಲೆನ್ಸ್ ಚಾಲಕ ಅಸ್ಲಂ ಉದ್ಯಾವರ, ಉದ್ಯಾವರದ ‘ರಕ್ಷಾ ಹೈಟೆಕ್ ಲ್ಯಾಬೊರೇಟರಿ-ಕ್ಲಿನಿಕ್’ನ ವೈದ್ಯರು ಮತ್ತು ಶುಶ್ರೂಷಕರನ್ನು (ಸಿಸ್ಟರ್ಸ್) ಆ್ಯಂಬುಲೆನ್ಸ್ನಲ್ಲಿ ಮಹಿಳೆಯಿದ್ದ ಸ್ಥಳಕ್ಕೆ ಕರೆತಂದರು.ವೈದ್ಯರು ಮತ್ತು ಶುಶ್ರೂಷಕರು ಫ್ಲಾಟ್ನಲ್ಲೇ ತಾಯಿ ಮತ್ತು ಮಗುವಿಗೆ ಅಗತ್ಯವಾದ ತುರ್ತು ಆರೈಕೆ ನೀಡಿದರು.ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಬ್ಬರ ಆರೋಗ್ಯ ಸ್ಥಿತಿ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.


ಪ್ರಸ್ತುತ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.ಸಮಯೋಚಿತವಾಗಿ ಸ್ಪಂದಿಸಿ ಜೀವ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಎಸ್ಡಿಪಿಐ ಕಾರ್ಯಕರ್ತರು, ಆ್ಯಂಬುಲೆನ್ಸ್ ಚಾಲಕ ಅಸ್ಲಂ, ರಕ್ಷಾ ಕ್ಲಿನಿಕ್ನ ವೈದ್ಯರು, ಶುಶ್ರೂಷಕರು ಹಾಗೂ ಇತರ ಸಿಬ್ಬಂದಿಯನ್ನು ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿಯಿಂದ ಶಾಲ ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಶರೀಫ್ ಪಾವೂರು, ಎಸ್ಡಿಪಿಐ ಪಂಚಾಯತ್ ಅಧ್ಯಕ್ಷ ಶಂಸು ಪೆರುವಾಯಿ, ಮಂಜೇಶ್ವರ ಮಂಡಲ ಜಂಟಿ ಕಾರ್ಯದರ್ಶಿ ಹ್ಯಾರಿಸ್ ಸುಬೇರ್, ಪಂಚಾಯತ್ ಸಮಿತಿ ಸದಸ್ಯರಾದ ಜಕರಿಯ ಉದ್ಯಾವರ ಹಾಗೂ ಖಾದರ್ ಫೋಕಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು


The registration process was so fast and I was playing my favorite games within minutes. Really impressed with 69jilicasinologinregister.