ಮಂಜೇಶ್ವರ: ತ್ಯಾಜ್ಯ ನಿರ್ವಹಣೆ ಸರ್ಕಾರದಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು. ಕೆ. ಸೈಫುಲ್ಲಾ ತಂಘಳ್ ಹೇಳಿದರು.

ಮಂಜೇಶ್ವರ, ಮಂಗಲ್ಪಾಡಿ ಮತ್ತು ವರ್ಕಾಡಿ ಪಂಚಾಯತ್ಗಳ ಜನಪ್ರತಿನಿಧಿಗಳಿಗಾಗಿ ‘ಕಿಲ’ ಆಯೋಜಿಸಿದ್ದ ಘನತ್ಯಾಜ್ಯ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು ಹಾಗೂ ಕಿಲಾ ಜಿಲ್ಲಾ ಸಂಯೋಜಕ ವಿ. ಕೆ. ರಾಮಚಂದ್ರನ್ ಉಪಸ್ಥಿತರಿದ್ದರು.
ಬಿಕಿಕವಾಗಿ ನಡೆದ ತರಬೇತಿ ತರಗತಿಗಳಲ್ಲಿ ವಿಷಯ ತಜ್ಞರು ‘ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026’, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಗಳು, ತ್ಯಾಜ್ಯ ನಿರ್ವಹಣೆಯ ಸವಾಲುಗಳು ಹಾಗೂ ಕಾನೂನು ಪಾಲನೆಯ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.


Really impressed with the fast payouts here. The interface is smooth and I had a great run last night. Definitely checking out krwinbet30 again soon!