ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ‘ತೂಫನ್ 2.0’ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನೆಯನ್ನು ಶ್ರೀ ರಮೇಶ್ ಚೆನ್ನಿತಳ ಅವರು ಆನ್ಲೈನ್ ಮೂಲಕ ನೆರವೇರಿಸಿ ಶುಭಹಾರೈಸಿದರು.

ಪಂಚಾಯತ್ ಮಟ್ಟದ ಉದ್ಘಾಟನೆಯನ್ನು ಪ್ರೆಸಿಡೆಂಟ್ ಶ್ರೀ ಬಷೀರ್ ಕನಿಲ ಅವರು ನೆರವೇರಿಸಿದರು.ಇದೇ ವೇಳೆ ತೂಫನ್ ಧ್ವಜಾರೋಹಣ ಮತ್ತು ಸತ್ಯಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮಗಳು ಜರುಗಿದವು.ಸಭೆಯ ಅಧ್ಯಕ್ಷತೆಯನ್ನು ವೈಸ್ ಪ್ರೆಸಿಡೆಂಟ್ ಶ್ರೀಮತಿ ಫಾತಿಮತ್ ಸೌರ ವಹಿಸಿದ್ದರು.

ಮಂಜೇಶ್ವರ ಪೊಲೀಸ್ ಠಾಣೆಯ ಎಸ್.ಐ. ಶ್ರೀ ಬಿನೋಯ್ ಮ್ಯಾಥ್ಯೂ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸಾರ್ವಜನಿಕ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಕಲಾ ಬಿ. ಸ್ವಾಗತ ಭಾಷಣ ಮಾಡಿದರು.ಚೇರ್ಮನ್ಗಳಾದ ಶ್ರೀ ಅಬ್ದುಲ್ ರಹಿಮಾನ್ ಕೆ.ಎಂ.ಕೆ, ಶ್ರೀ ಫಾರ್ಹನ್, ಶ್ರೀಮತಿ ಜರೀನಾ, ಮೆಡಿಕಲ್ ಆಫೀಸರ್ ಶ್ರೀ ಪ್ರಭಾಕರ್ ರೈ ಹಾಗೂ ವಿವಿಧ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಕೊನೆಯಲ್ಲಿ ಶ್ರೀ ಪ್ರಕಾಶ್ ಕುಮಾರ್ ಧನ್ಯವಾದ ಅರ್ಪಿಸಿದರು.

