ತರವಾಡು ಮನೆಗಳು ಸಂಬಂಧಗಳನ್ನು ಒಟ್ಟು ಸೇರಿಸುವ ಕೊಂಡಿಯಾಗಿದೆ :ಬಾಸ್ಕರ ಪಚ್ಲಂಪಾರೆ

ಹೊಸಂಗಡಿ :ಶ್ರೀ ನಾಗ ಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ಇಚ್ಲಂಗೋಡು ಇದರ ಆರೆಕೆರೆ ಬೈಲು ತರವಾಡು ವಿಭಾಗದ ನೂತನ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಪೀಠ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವಬಾವಿಯಾಗಿ ವಿವಿಧ ಉಪ ಸಮಿತಿಗಳ ರೂಪೀಕರಣ ಸಭೆಯು ಹೊಸಂಗಡಿ ಬಳಿ ಇರುವ ಪ್ರೇರಣಾ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಾಕುಡ ಸಮುದಾಯದ ಹದಿನೆಂಟು ದೈವಸ್ಥಾನಗಳ ಹಿರಿಯರ ಹಾಗೂ ಕಾರ್ನವರ ಒಕ್ಕೂಟದ ಕೋಶಾಧಿಕಾರಿಯಾದ ದೈವದ ಪಾತ್ರಿ ಬಾಸ್ಕರ ಪಚ್ಲಂಪಾರೆ ಉದ್ಘಾಟಿಸಿ ಮಾತನಾಡಿ, “ತುಳುನಾಡಿನ ಪುರಾತನ ಸಂಪ್ರದಾಯದಂತೆ, ಹಿರಿಯ ತಲೆಮಾರುಗಳನ್ನು ನೆನಪಿಸಲು ಮತ್ತು ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂಬಂಧಗಳನ್ನು ಒಟ್ಟು ಸೇರಿಸಲು ತರವಾಡು ಮನೆಗಳು ಸಹಕಾರಿಯಾಗಿವೆ. ತರವಾಡು ಮನೆಗಳು ಸಂಬಂಧಗಳನ್ನು ಪರಸ್ಪರ ಬೆಸೆಯುವ ಕೊಂಡಿಯಾಗಿದೆ ” ಎಂದು ತಿಳಿಸಿದರು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಮಾಸ್ಟರ್ ಕುಬಣೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಸುಕುಮಾರ ಮಂಗಲ್ಪಾಡಿ, ರಾಜು ಇಚ್ಲಂಗೋಡು, ಪರಮೇಶ್ವರ್ ಅತ್ತಾವರ,ಸೀತಾರಾಮ ಅಂಗಡಿಪದವು,ರಾಮ ಮಂಗಲ್ಪಾಡಿ, ವಿಶ್ವನಾಥ ಅಂಗಡಿಪದವು, ರವಿ ಸೊಂಕಾಲ್, ರೋಹಿತ್ ಪಾಂಡೇಶ್ವರ, ಗಣೇಶ್ ಆರಿಕ್ಕಾಡಿ, ಶಂಕರ ಆರಿಕ್ಕಾಡಿ, ಸುಕೇಶ್ ಮುಡಿಪು, ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕೊಡ್ಲಮೊಗರು ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!