ಮಂಜೇಶ್ವರದ ಹೊಸಂಗಡಿ ಬಂಗ್ರಮಂಜೇಶ್ವರದಲ್ಲಿರುವ ಆದಿಕ್ಷೇತ್ರ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಅಂಗವಾಗಿ ಭಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿವೆ.

ಅಕ್ಟೋಬರ್ 11ರಂದು ಬೆಳಿಗ್ಗೆ 7.30ಕ್ಕೆ ನಿತ್ಯಪೂಜೆ, 8.30ಕ್ಕೆ ಗಣಹೋಮ ಹಾಗೂ ಕಲಶ ಪ್ರತಿಷ್ಠೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಲಿದೆ. ಸಂಜೆ 6 ಗಂಟೆಗೆ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ, ಎದೆತುಂಬಿ ಹಾಡುವೆನು ಖ್ಯಾತಿಯ ಶ್ರೀ ಬಿ.ಪಿ. ಗೋಪಾಲಕೃಷ್ಣ ಆಚಾರ್ಯ ಮಂಗಳೂರು ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ನವರಾತ್ರಿ ಉತ್ಸವದ ಪ್ರತಿದಿನ ಸಂಜೆ 6ರಿಂದ 7.30ರವರೆಗೆ ಶ್ರೀ ಆದಿ ಕಲಾ ಮಂಟಪದಲ್ಲಿ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.

ಅಕ್ಟೋಬರ್ 12ರಂದು ಶ್ರೀ ಶಾಸ್ತಾವೇಶ್ವರ ಭಜನಾ ಮಂಡಳಿ, 13ರಂದು ಶ್ರೀ ಅಯ್ಯಪ್ಪ ಸೇವಾ ಮಾತೃ ಸಮಿತಿ, 14ರಂದು ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಭಜನಾ ಮಂಡಳಿ, 15ರಂದು ಧನಲಕ್ಷ್ಮಿ ಮಹಿಳಾ ಭಜನಾ ಸಂಘ ಹಾಗೂ 16ರಂದು ಅಯ್ಯಪ್ಪ ಮಾತೃ ಸಮಿತಿಯ ಆಶ್ರಯದಲ್ಲಿ ಕುಣಿತ ಭಜನೆ ನಡೆಯಲಿದೆ.

ಅಕ್ಟೋಬರ್ 17ರಂದು ಶ್ರೀ ವೀರಭದ್ರ ಮಹಾಮ್ಮಾಯಿ ಭಜನಾ ಮಂಡಳಿ, 18ರಂದು ಕೊಂಡೆವೂರು ಸಹೋದರಿಯರಿಂದ ಸ್ಯಾಕ್ಸೋಫೋನ್ ಮತ್ತು ವಯಲಿನ್ ವಾದನ, 19ರಂದು ಕನಿಲ ಶ್ರೀ ಭಗವತೀ ಭಜನಾ ಮಂಡಳಿ ಹಾಗೂ 20ರಂದು ಸನಾತನಂ ಭಜನ್ಸ್ ಬಂಗ್ರಮಂಜೇಶ್ವರ ತಂಡ ದವರಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಉತ್ಸವದ ಸಮಾರೋಪ ದಿನವಾದ ಅಕ್ಟೋಬರ್ 21ರಂದು ಕಿಶೋರ್ ಪೆರ್ಲ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ 9 ಗಂಟೆಗೆ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಪಲ್ಲಕ್ಕಿ ಉತ್ಸವ ಆಗಮಿಸಲಿದೆ. ಬಳಿಕ ಅಮ್ಮನವರ ಭೇಟಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ನವರಾತ್ರಿ ಪೂಜೆಯು ಪ್ರತಿದಿನ ಬೆಳಿಗ್ಗೆ 7.30ಕ್ಕೆ, ಮಧ್ಯಾಹ್ನ 12ಕ್ಕೆ ಹಾಗೂ ರಾತ್ರಿ 7.30ಕ್ಕೆ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಮೊಕ್ತೇಸರರು, ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿದ್ದಾರೆ.

