ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ಲೋಕಾರ್ಪಣೆ … !

ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿ ಸ್ಥಿತಿ ಗೊಂಡಿರುವ ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ನಿರ್ಮಿಸಿ ಸಮರ್ಪಿಸಲಾಯಿತು. ಕನ್ನಡ ಭವನದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಸನತ್ ಕುಮಾರ್ ಬಿ. ಇ. ಕಾರ್ತಿಕ್ ಕಾಸರಗೋಡು ಬಿ. ಇ. ಇವರ ಆರ್ಥಿಕ ವಿನಿಯೋಗದಲ್ಲಿ ಪ್ರಾರ್ಥನಾ ಮಂಟಪ ಅತೀ ಸುಂದರ, ಭವ್ಯವಾಗಿ ಮೂಡಿ ಬಂದಿದೆ. ಎಡನೀರು ಮಠ ಅದೀಶರಾದ ಶ್ರೀ ಶ್ರೀ…

Read More

ಬಿಜೆಪಿಯಲ್ಲಿ ಹೈಕಮಾಂಡ್ ಇದೆ ಅವರನ್ನು ಏಜೆಂಟ್‌ ಎನ್ನುತ್ತೀರಾ ಆರ್‌.ಅಶೋಕ…. ? ಎಂದು ಪ್ರಶ್ನೆ ಮಾಡಿದ ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಏಜೆಂಟ್‌’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿರುವುದು ಸರಿಯಲ್ಲ ಬಿಜೆಪಿಯಲ್ಲಿ ಕೂಡ ಹೈಕಮಾಂಡ್ ಇದೆ ಅವರನ್ನು ಈ ರೀತಿಯಾಗಿಯೇ ಟೀಕಿಸುತ್ತಾರೆಯೇ ಎಂದು ಆರ್‌.ಅಶೋಕ್ ಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ಪ್ರಶ್ನೆ ಮಾಡಿದರು . ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಅಶೋಕ್ ಅವರು ಕಿಡಿಕೇಡಿ ತನದ ಹೇಳಿಕೆಯನ್ನು ನೀಡಿದ್ದಾರೆ .ಪ್ರಬುದ್ಧತೆ ಇಲ್ಲದಂತಹ ಮಾತುಗಳನ್ನು ತುಟಿ ಬಿಚ್ಚಿ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.9ರಂದು ಸ್ವಚ್ಛತಾ ಪೌರ ಕಾರ್ಮಿಕರಿಂದ ಕಾಲ್ನಡಿಗೆ ಜಾಥಾ…. !

ದ.ಕ. ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಮೂಲಕ ದುಡಿಯುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಡಿ.9ರಂದು ತಮ್ಮ ಕೆಲಸ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಡಿಹಿಲ್‌ನ ಪತ್ರಿಕಾ ಭವನದ ಬಳಿಯಿಂದ ಜಿಪಂ ತನಕ ಕಾಲ್ನಡಿಗೆ ಜಾಥಾ ನಡೆಸಲಿರುವರು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಪ್ರತಿಭಟನೆ…

Read More

ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಹಲ್ಲೆ ಆರೋಪ ಕಡಬ ಠಾಣಾ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ ಬಂಧನ – ಹುದ್ದೆಯಿಂದ ಅಮಾನತು

ಕಡಬ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಮನೆಯ ಸದಸ್ಯರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಡಬ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ್ ಎಂಬಾತನನ್ನು ಬಂಧಿಸಲಾಗಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಡಬ ತಾಲೂಕು ಕೊಯಿಲ ನಿವಾಸಿ ಬಾಬು ಗೌಡ ಎಂಬವರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಗೆ ಡಿ.3ರಂದು ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಅಕ್ರಮ ಪ್ರವೇಶಿಸಿದ್ದು ಮನೆಯ ಸದಸ್ಯರು ಆತನನ್ನು ಹಿಡಿದುಕೊಂಡಿದ್ದು, ಈ ವೇಳೆ ಆತ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯ ಚೇತನ್ ಎಂಬಾತನಿಗೆ ಕೈಯಿಂದ ಹಲ್ಲೆ…

Read More

ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ಗೆ ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆ ಉಡುಗೊರೆ…. !

ಹೊಸದಿಲ್ಲಿ ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರು ಗುರುವಾರ(ಡಿ.4) ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಖುದ್ದು ದೆಹಲಿ ಏರ್ಪೋಟ್‌್ರಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಬರಮಾಡಿಕೊಂಡರು.ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಗವದ್ಗೀತೆಯ ರಷ್ಯನ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಅವರು X ನಲ್ಲಿ ಆ ಕ್ಷಣದ ಛಾಯಾಚಿತ್ರವನ್ನು ಹಂಚಿಕೊಂಡಿದ್ದು, ಅಧ್ಯಕ್ಷ ಪುಟಿನ್ ಅವರಿಗೆ…

Read More

ದೇಶಾದ್ಯಂತ 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು; ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ ಇಂಡಿಗೋ ಸಂಸ್ಥೆ

ನವದೆಹಲಿ: ದೇಶಾದ್ಯಂತ 1000ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ.ಈ ಕುರಿತು ಮಾಹಿತಿ ಡಿಜಿಸಿಎಗೆ ನೀಡಿರುವ ಇಂಡಿಗೋ ಸಂಸ್ಥೆ, ಸದ್ಯಕ್ಕೆ ಈ ಸಮಸ್ಯೆಗೆ ಪರಿಹಾರ ಸಿಗದಿರಬಹುದು. ಆದರೆ ಫೆಬ್ರವರಿ 10ರ ವೇಳೆಗೆ ವಿಮಾನಗಳ ಹಾರಾಟವನ್ನು ಪುನರಾರಂಭಿಸಲಾಗುವುದು ಎಂದು ಹೇಳಿದೆ. ಇನ್ನೂ ಕಳೆದೆರಡು ದಿನಗಳಿಂದ ಸಮಸ್ಯೆ ಅನುಭವಿಸುತ್ತಿರುವ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ. ಇನ್ನೂ ಕಳೆದ ಮೂರು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಸಿಬ್ಬಂದಿ ಸಮಸ್ಯೆಯಿಂದ ಅಂತಾರಾಷ್ಟ್ರೀಯ…

Read More

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ಡಿಸೆಂಬರ್ 7 ರಂದು ವಿಶೇಷ ಚೇತನ ಮಕ್ಕಳೊಂದಿಗೆ ‘ಸಾಂತ್ವಾನ ಸಂಚಾರ’:

ಮಂಗಳೂರು:ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರಾಗಿರುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಈ ಬಾರಿ ವಿಶೇಷ ಚೇತನ ಮಕ್ಕಳಿಗಾಗಿ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸಾಂತಾನ ಸಂಚಾರ 3.0 – A Day with Special Kids’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಡಿಸೆಂಬರ್ 7 ರಂದು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದರು. ಅವರು ಪಂಪ್‌ ವೆಲ್ ನ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ…

Read More

2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರು ಆಯ್ಕೆ …. !

ಮಂಗಳೂರು: ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರ ಸಂಸ್ಥೆಯು 2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರನ್ನು ಆಯ್ಕೆ ಮಾಡಿದೆ. ಇದರ ಭಾಗವಾಗಿ ಪ್ರಶಸ್ತಿ ಸಮಾರಂಭವು ಡಿಸೆಂಬರ್ ೭ ರಂದು ಸಂಜೆ 4.00 ರಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂಡಬಿದಿರೆಯ ಜನತೆಯಿಂದ ಪ್ರೀತಿಯಿಂದ…

Read More

ಡಿ 6 ರಂದು ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ…. !

ಮಂಗಳೂರು: ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ ಡಿ 6 ರಂದು ನಗರದ ಬಿಜೈ ಚರ್ಚ್ ಹಾಲ್ನಲ್ಲಿ ಸಂಜೆ 3.30 ರ ನಂತರ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷರಾದ ವಿದ್ಯಾ ಕಾಮತ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಸಭೆಯಲ್ಲಿ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರು ಅಧ್ಯಕ್ಷತೆ ಯನ್ನು ವಹಿಸಿಕೊಳ್ಳಲಿದ್ದು, ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮತ್ತು ಮುಖ್ಯ ಅತಿಥಿಗಳಾಗಿ ಪೂರ್ವ ರಾಜ್ಯಪಾಲರು ಮತ್ತು ಗ್ಯಾಲೆಂಟರಿ…

Read More

ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಹಬ್ಬ ಆರಂಭ

ಮಂಜೇಶ್ವರ: ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಉರೂಸ್ ಸಮಿತಿ,ಗೌರವಾನ್ವಿತ. ಮೋನು ಹಾಜಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ್ಯ. ಸೈಯದ್ ಶಮೀಮ್ ತಂಗಳ್ ಧ್ವಜಾರೋಹಣ ನೆರವೇರಿಸಿದರು. ಜಮಾತ್ ಸಮಿತಿ ಅಧ್ಯಕ್ಷರು. ಗೌರವಾನ್ವಿತ. ಅಲಿ ಹಾಜಿ, ಕಾರ್ಯದರ್ಶಿ.. ಮುಹಮ್ಮದ್ ಹಾಜಿ, ಕಾದರ್ ಹಾಜಿ, ಜಮಾತ್ ಮುತಾರಿಸ್.ಶುಹೈಬ್ ಇರ್ಫಾನಿ,ಆದಂ ದಾರಿಮಿ ರಝಾಕ್ ಮಿಸ್ಬಾಹಿ, ಸಿರಾಜುದ್ದೀನ್ ಫೈಝಿ, ಚೇರಲ್ ಮಜೀದ್ ದಾರಿಮಿ, ರಝಾಕ್ ಇರ್ಫಾನಿ ಮತ್ತಿತರರು ಉಪಸ್ಥಿತರಿದ್ದರು.ಡಿಸೆಂಬರ್ 4 ರಿಂದ 15 ರವರೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಸಿದ್ಧ ಭಾಷಣಕಾರರು…

Read More
error: Content is protected !!