ಸಹಸ್ರಾರು ಕಣ್ಣುಗಳು ಕಣ್ತುಂಬಿಕೊಂಡ ಚಾಮುಂಡಿಕುನ್ನು ಕಳಿಯಾಟ ಮಹೋತ್ಸವ 2025 …!

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಸಂಪನ್ನ ಗೊಂಡಿತ್ತು. ಕೊನೆಯ ದಿನವಾದ ನಿನ್ನೆ ಪುಮಾರುತನ್, ರಕ್ತ ಚಾಮುಂಡಿ, ಭಗವತಿ, ವಿಷ್ಣು ಮೂರ್ತಿ, ಧೂಮಾವತಿ, ಗುಳಿಗ ಎಂಬೀ ದೈವಗಳು ಭಕ್ತರಿಗೆ ದರ್ಶನವನ್ನು ನೀಡಿತ್ತು. ಐತಿಹಾಸಿಕ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಕ್ಕೂ ಅಧಿಕ ಸಂಖ್ಯೆಯ ರಾಜ್ಯ ಅಂತರರಾಜ್ಯದ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿದ್ದರು. ಭಕ್ತರಿಗೆ ದರ್ಶನವನ್ನು ನೀಡಿ ತನು ಮನವನ್ನು ಭಕ್ತಿಯ ಸಾಕ್ಷಾತ್ಕಾರದತ್ತ ಕೊಂಡು ಹೋದ ದಿವ್ಯ ತೇಜಸ್ಸಿನ…

Read More

ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಪ್ರಥಮ ವಾರ್ಷಿಕ – ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ಸುಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಶಪ್ರೇಮ, ದೇವಭಕ್ತಿ ,ಸನಾತನ ಧರ್ಮ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಇದರ ಪ್ರಥಮ ವಾರ್ಷಿಕವನ್ನು ಭಕ್ತಿಪೂರ್ವಕವಾಗಿ ಶ್ರದ್ಧ ಭಕ್ತಿಯಿಂದ ಹರಿನಾಮ ಸಂಕೀರ್ತನೆಯೊಂದಿಗೆ ಆಚರಿಸಲಾಯಿತು.ತಂಡದ ಸ್ಥಾಪಕರಾದ ಧಾರ್ಮಿಕ ,ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ರವರ ಮುಂದಾಳುತ್ವದಲ್ಲಿ ಹಾಗು ತಂಡದ ಪೋಷಕರಾದ ಶ್ರೀ ಪ್ರಶಾಂತ್ ಭಟ್ ಚಕ್ರತೀರ್ಥ,ಖ್ಯಾತ ವಕೀಲರಾದ ಶ್ರೀ ರಾಮ್ ಪ್ರಸಾದ್ ಮಂಗಳೂರು,ಶ್ರೀ ಯತೀಶ್ ಕುಂಜತ್ತೂರು ,ಶ್ರೀ ಶ್ರೀಕಾಂತ್ ಮುಂಬೈ ಇವರ ಸಹಕಾರದೊಂದಿಗೆ…

Read More

ಖೇಲೋ ಇಂಡಿಯಾ ಅಸ್ಮಿತಾ ಪೆನ್ಚಕ್ ಸಿಲಾಟ್ ಲೀಗ್ 2025–26 : ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಮಂಜೇಶ್ವರ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಗಮನ ಸೆಳೆಯುತ್ತಿರುವ ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಡಿವೈಇಎಸ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಖೇಲೋ ಇಂಡಿಯಾ ಅಸ್ಮಿತಾ ಪೆನ್ಚಕ್ ಸಿಲಾಟ್ ಲೀಗ್ 2025–26 ಕರಾಟೆ ಸ್ಪರ್ಧೆಯಲ್ಲಿ ತಮ್ಮ ಶೈಲಿಯ ಪ್ರದರ್ಶನದಿಂದ ರಾಜ್ಯ ಮಟ್ಟದಲ್ಲಿ ಕೀರ್ತಿ ತುಂಬಿ ಮತ್ತೊಮ್ಮೆ ಸದ್ದಿಲ್ಲದೆ ಸುದ್ದಿಯಾಗಿದ್ದಾರೆ. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಶಾಲೆಯಿಂದ ಒಟ್ಟು 13 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 6 ಚಿನ್ನ, 3 ಬೆಳ್ಳಿ ಹಾಗೂ…

Read More

7 ವರ್ಷದಿಂದ ದುಡಿಸಿ ಸಂಬಳ ನೀಡದ ಬೀಡಿ ಮಾಲಕರ ವಿರುದ್ಧ ಮತ್ತು ಕನಿಷ್ಟ ಕೂಲಿ ಜಾರಿ ಮಾಡದ್ದರ ವಿರುದ್ಧ ಬೀಡಿ ಕಾರ್ಮಿಕರ ಪ್ರತಿಭಟನೆ

ಮಂಗಳೂರು: 01.04.2024 ರಿಂದ ಸರಕಾರ ನಿಗದಿ ಪಡಿಸಿ ಆದೇಶ ಮಾಡಿದ ಕನಿಷ್ಠ ಕೂಲಿಯನ್ನು ಕೂಡಾ ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.ಅವರು ಇಂದು ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯಲ್ಲಿ ನಡೆದ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖ ಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ…

Read More

ಗುಜ್ಜರಕೆರೆಯಲ್ಲಿ ಶತಮಾನಂ ಭವತು ಸಂಗೀತ ಸಂಜೆ ಸಂಪನ್ನ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಹಾಗೂ ಜಗದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಯೋಗ್ ಫೌಂಡೇಶನ್ ಆಶ್ರಯದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಬಾಲಚಂದ್ರ ಪ್ರಭು ಹಾಗೂ ತಂಡದವರಿಂದ ದೇಶ ಹಾಗೂ ಧರ್ಮ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ಗುಜ್ಜರಕೆರೆಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ವೇದಿಕೆಯ ಎರಡೂ ಭಾಗಗಳಲ್ಲಿ ಹಣತೆಯ ಮಾದರಿಯ ದೀಪಗಳನ್ನು ಉರಿಸಿ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಲಾಗಿತ್ತು. ಇನ್ನು ಹಣತೆಗಳನ್ನು ಬೆಳಗಿಸಿ ಕೆರೆಯಲ್ಲಿ ತೇಲಿಬಿಡುವ ಮೂಲಕ ಜನರು ಕಾರ್ಯಕ್ರಮಕ್ಕೆ ಮತ್ತಷ್ಟು…

Read More

ಇಂಡಿಯಾನಾ ಆಸ್ಪತ್ರೆಯಲ್ಲಿ ಆರಂಭಗೊಂಡ ಲೇಸರ್ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯು ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಸೌಲಭ್ಯ -ಡಾ.ಭಗವಾನ್ ಬಿ.ಸಿ. ಶ್ಲಾಘನೆ

ಮಂಗಳೂರು : ಇಂಡಿಯಾನಾ ಆಸ್ಪತ್ರೆಯಲ್ಲಿ ಆರಂಭಗೊಂಡ ಲೇಸರ್ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯು ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಸೌಲಭ್ಯ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಶ್ಲಾಘಿಸಿದ್ದಾರೆ.ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್ ಆರಂಭಿಸಿರುವ ಹೈ ಪ್ರಿಸಿಶನ್ ಲೇಸರ್ ಆಂಜಿಯೋಪ್ಲಾಸ್ಟಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಯುವ ಜನರಲ್ಲಿ ಹೆಚ್ಚುತ್ತಿದೆ.ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಪದ್ಧತಿ, ವಂಶ ಪಾರಂಪರ್ಯವಾಗಿ ಬಂದಿರುವ ಕೆಲವು ಕಾರಣಗಳಿವೆ….

Read More

ತೀಯಾ ಸಮುದಾಯದ ಅಭಿವೃದ್ಧಿಗಾಗಿ ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು : ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ

ಮಂಗಳೂರು: ತೀಯಾ ಸಮುದಾಯದ ಅಭಿವೃದ್ಧಿಗಾಗಿ ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎಂಬುದು ಸೇರಿದಂತೆ ತೀಯಾ ಸಮುದಾಯದ ವಿವಿಧ ಬೇಡಿಕೆಗಳನ್ನು ಡಿ.3ರಂದು ಮಂಗಳೂರು ವಿವಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಗೆ ಸಲ್ಲಿಸಲಾಗುವುದು ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ ತಿಳಿಸಿದರು. ಅವರು ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ವರ್ಕಳದ ಶಿವಗಿರಿ ಮಠದ ನೇತೃತ್ವದಲ್ಲಿ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜಿ…

Read More

ಮಂಗಳೂರಿನ ಚಿನ್ನದ ವ್ಯಾಪರಿಗೆ ವಂಚಿಸಿದ ಅಂತರ್ ರಾಜ್ಯ ವಂಚಕನ ಬಂಧನ: 240 ಗ್ರಾಂ ಚಿನ್ನ ಜಪ್ತಿ.

ಮಂಗಳೂರು: ದಿನಾಂಕ 21.11.2025 ರಂದು ಸಂಜೆ ಉರ್ವಾಸ್ಟೋರ್, ಚಿಲಿಂಬಿ, ಗುಜ್ಜಾಡಿ ಚೆಂಬರ್ಸ್ ನಲ್ಲಿರುವ ಸ್ವರ್ಣ ಜುವೆಲರ್ಸ್ ಅಂಗಡಿಗೆ ಬಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯು, ದಿನಾಂಕ: 22-11-2025 ರಂದು ಬಿಜೈ ಕಾಫಿಕಾಡ್ ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿ ತಾನು ಆಫೀಸ್ ತೆರೆಯಲ್ಲಿದ್ದು ,ಅಲ್ಲಿಗೆ ಬರುವ ಗೆಸ್ಟ್ ಗಳಿಗೆ ಚಿನ್ನದ ಬಿಸ್ಕೆಟ್ ನೀಡಲು ಇದೆ ಆ ಕಾರಣ 10 ಗ್ರಾಂ ತೂಕದ 24 ಚಿನ್ನದ ಬಿಸ್ಕಿಟ್ ಗಳು ಬೇಕು ಎಂದು ಬಿಸ್ಕಿಟ್ ಗಳ ಡಿಸೈಜ್ ಸೆಲೆಕ್ಟ್…

Read More

ಶ್ರೀ ಕೃಷ್ಣ ಶಿವಕೃಪಾ ನೇತೃತ್ವದ ಭಾರತಾಂಭ ತಂಡಕ್ಕೆ ಪ್ರಥಮ ವಾರ್ಷಿಕ- ನಾಳೆ ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗತವೈಭವದ 100 ನೇ ವರ್ಷಾಚರಣೆ ಮಾಡುತ್ತಿರುವ ಸುಸಂದರ್ಭದಲ್ಲಿ “ದೇಶಪ್ರೇಮ, ದೇವ ಭಕ್ತಿಸನಾತನ ಧರ್ಮ” ಎಂಬ ಧೈಯದೊಂದಿಗೆ ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಇವರ ನೇತೃತ್ವದಲ್ಲಿ ಭಾರತಾ೦ಬ ತ೦ಡ ಪ್ರಾರಂಭಿಸಲಾಗಿತ್ತು. ಇದೀಗ ಒಂದನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಹಲವಾರು ತೀರ್ಥ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಮಾಡಿದ್ದಲ್ಲದೆ ತಂಡದ ಹೆಸರಿನಲ್ಲಿ ವಿವಿಧ ರೀತಿಯ ಸೇವೆಗಳನ್ನು ನಡೆಸುತ್ತಾ ಬರಲಾಗಿದೆ. ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನ.30ಕ್ಕೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ…

Read More

ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಮಂಜೇಶ್ವರ : ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಜನ ಮನ್ನಣೆಯನ್ನು ಪಡೆದಿರುವ ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು. ತಂದೆ ತಾಯಿ ಶಿಕ್ಷಕರನ್ನು ಹೇಗೆ ಯಾವ ರೀತಿಯಲ್ಲಿ ಗೌರವಿಸಬೇಕು ಎಂಬುದರ ಬಗ್ಗೆ ಅರಿವನ್ನು ಮೂಡಿಸುವ ಜೊತೆಯಾಗಿ “ಜ್ಞಾನ ಬೆಳೆದಂತೆ, ವ್ಯಕ್ತಿತ್ವದ ಮಟ್ಟವೂ ಎತ್ತರವಾಗುತ್ತದೆ” ಎಂಬ ಘೋಷಣೆಯೊಂದಿಗೆ ಎಲ್ಲಾ…

Read More
error: Content is protected !!