ನವೆಂಬರ್ 22 ಮತ್ತು 23ರಂದು ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವ- ‘ದಶಕ ಸಮರ್ಪಣಂ
ಮಂಗಳೂರು : ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ, ಎರಡು ದಿನಗಳ ಸಂಗೀತಮಹೋತ್ಸವ ‘ದಶಕ ಸಮರ್ಪಣಂ’ ಕಾರ್ಯಕ್ರಮವು ನವೆಂಬರ್ 22 ಮತ್ತು 23 ರಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘಟನೆಯ ಉಪಾಧ್ಯಕ್ಷರಾದ ಮಂಜುನಾಥ್ ಭಟ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ನವೆಂಬರ್ 22 ಶನಿವಾರದ ಕಾರ್ಯಕ್ರಮವು ಮಧ್ಯಾಹ್ನ 1.30ಕ್ಕೆ ಶಾರದಾ ವಿದ್ಯಾಲಯದ ಪ್ರಾಚಾರ್ಯರಾದ ದಯಾನಂದ ಕಟೀಲ್, ಇವರ ದೀಪಪ್ರಜ್ವಲನದೊಂದಿಗೆ…