ಗಂಜಿಮಠ ಟೋಲ್ ಪ್ಲಾಜಾ ನಿರ್ಮಾಣ ನಿಯಮಬಾಹಿರ: ಅಂತರ ನಿಯಮ ಉಲ್ಲಂಘನೆ ಆರೋಪ

ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ಗಂಜಿಮಠ ಟೋಲ್ ಪ್ಲಾಜ಼ಾ ಕ್ಕೆ ವಿವಿಧ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಇಂದು ಭೇಟಿ ನೀಡಿ ನಿಯಮಗಳ ಪಾಲನೆಯ ಕುರಿತಾಗಿ ಪರಿಶೀಲನೆ ನಡೆಸಿತು. ಟೋಲ್ ಗೇಟ್ ಗಳ ನಡುವಿನ ಅಂತರ ಕನಿಷ್ಟ 60 ಕಿ ಮೀ ಇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಟೋಲ್ ಪ್ಲಾಜ಼ಾ ನಿರ್ಮಾಣ ಗೊಳ್ಳುತ್ತಿರುವುದನ್ನು ಸಮಿತಿ ಗಮನಿಸಿತು.‌ ಬ್ರಹ್ಮರಕೂಟ್ಲು ಟೋಲ್ ಗೇಟ್ ಹಾಗು ತಲಪಾಡಿ ಟೋಲ್ ಗೇಟ್ ನಿಂದ…

Read More

ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸಿ ಭಾರತೀಯರನ್ನು ಮತ್ತಷ್ಟು ಬಡತನಕ್ಕೆ ದೂಡುವ ಕಾಯ್ದೆಯೇ ವಿಬಿ-ಜಿ ರಾಮ್ ಜಿ : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ

ಮಂಗಳೂರು:ಕೇಂದ್ರ ಸರಕಾರವು ಮನ್‌ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮುಲ್ಕಿ ವರೆಗೆ 4 ದಿನಗಳ -ಕಿಮೀ ಪಾದಯಾತ್ರೆಯನ್ನು ಫೆ.9ರಿಂದ 12ರವರೆಗೆ ಆಯೋಜಿಸಲಾಗುವುದೆಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು . ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕೇಂದ್ರ ಸರಕಾರವು ಸರಿಯಾದ ಚರ್ಚೆಯನ್ನೇ ನಡೆಸದೆ ತರಾತುರಿಯಲ್ಲಿ ವಿಬಿ ಜಿರಾಮ್‌ಜಿ ಕಾಯ್ದೆ ಜಾರಿಗೆ ತಂದಿದೆ.ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ…

Read More

ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ನೂರು ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರು:”ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿಯವರು ದಿನಾಂಕ ಕೊಡಲಿ, ಬಿಡಲಿ ನಾನಂತೂ ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಮಂಗಳೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. “ಇಂದು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ…

Read More

ಬಹು ನಿರೀಕ್ಷಿತ “ನಾನ್ ವೆಜ್“ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

ಮಂಗಳೂರು:ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರುವ ” ನಾನ್ ವೆಜ್” ತುಳು ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.ದೀಪ ಬೆಳಗಿಸಿ ಸಿನಿಮಾಕ್ಕೆ ಶುಭ ಹಾರೈಸಿದ ಹಿರಿಯ ವಕೀಲ ಮಯೂರಕೀರ್ತಿ ಅವರು, “ನನಗೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿರುವುದು ಒಬ್ಬ ನೈಜ ತುಳು ಸಿನಿಮಾ ಪ್ರೇಕ್ಷಕನಿಗೆ ಸಂದ ದೊಡ್ಡ ಗೌರವ. ನಾನು ಬಹುತೇಕ ಎಲ್ಲ ತುಳು ಸಿನಿಮಾಗಳನ್ನು ನೋಡುತ್ತೇನೆ. ಈ ಹಿಂದೆ “ಚಾಲಿಪೋಲಿಲು” ಅನ್ನುವ ತುಳು ಚಿತ್ರ ನಿರ್ಮಿಸಿ ದಾಖಲೆ ಬರೆದಿದ್ದ…

Read More

ಆಸ್ತಿ ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸುವ ಸಲುವಾಗಿ ನಗರದಾದ್ಯಂತ ವಸೂಲಾತಿ ಆಂದೋಲನವನ್ನು ಕೈಗೊಳ್ಳಲಾಗಿದೆ. ಶುಕ್ರವಾರ ಮಹಾನಗರಪಾಲಿಕೆ ಆವರಣದಲ್ಲಿ ಆಯುಕ್ತ ರವಿಚಂದ್ರ ನಾಯಕ್ ಹಸಿರು ನಿಶಾನೆ ತೋರಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಉಡುಪಿ: ಜಿಲ್ಲೆಯ 6 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ- ಎಸ್ಪಿ ಹರಿರಾಂ ಶಂಕ‌ರ್

ಉಡುಪಿ: ಜಿಲ್ಲೆಯಲ್ಲಿ ಅಪಘಾತ ಹೆಚ್ಚು ಸಂಭವಿಸುತ್ತಿರುವ ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಿರುವ 6 ಕಡೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.ನಗರದ ಕಲ್ಸಂಕ ಮತ್ತು ಮಣಿಪಾಲದಲ್ಲಿ ಈಗಾಗಲೇ ಸಿಗ್ನಲ್ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಪಡುಬಿದ್ರಿ, ಬಲಾಯಿಪಾದೆ, ಅಂಬಾಗಿಲು, ಆಕಾಶವಾಣಿ ಜಂಕ್ಷನ್, ಕೋಟ ಮೂರು ಕೈ ಮತ್ತು ಕುಂದಾಪುರ ಸಂಗಮ್ ಸರ್ಕಲ್ ಬಳಿ ಟ್ರಾಫಿಕ್‌ ಸಿಗ್ನಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ.ಈ ಆರು ಕಡೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುತ್ತವೆ….

Read More

ಕೃಷ್ಣ ನಗರದ ಸಾರ್ವಜನಿಕ ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸುವಂತೆ ಸಾರ್ವಜನಿಕರು ಆಗ್ರಹಿಸಿ ಸ್ಥಳೀಯರಿಂದ ಪ್ರತಿಭಟನೆ … !

ಮಂಗಳೂರು:ಮಂಗಳೂರಿನ ಬೊಂದೇಲ್ ಸಮೀಪದ ಕೃಷ್ಣ ನಗರದಲ್ಲಿ ಕಳೆದ 30 ವರ್ಷಗಳಿಂದ ಸಾಂಸ್ಕೃತಿಕ,ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಸ್ಥಳೀಯ ನಿವಾಸಿಗಳ ಮಕ್ಕಳು ಹಾಗೂ ಯುವಕರು ಆಟವಾಡುತ್ತಿರುವ ಸಾರ್ವಜನಿಕ ಮೈದಾನದ ಜಾಗವನ್ನು ಸರಕಾರವು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಬಿಟ್ಟು ಕೊಟ್ಟಿದ್ದು ಆ ಜಾಗವನ್ನು ಸಾರ್ವಜನಿಕ ಮೈದಾನ ವಾಗಿ ಯಥಾಸ್ಥಿತಿ ಯಾಗಿ ಕಾದಿರಿಸುವಂತೆ ಊರಿನ ಸರ್ವ ನಾಗರೀಕರ ಪ್ರತಿಭಟನಾ ಸಭೆಯು ಹೋರಾಟ ಸಮಿತಿಯ ಅದ್ಯಕ್ಷರಾದ ಶ್ರೀನಿವಾಸ ಸಾಲಿಯಾನ್ ರವರ ನೇತೃತ್ವದಲ್ಲಿ ಜರುಗಿತು. ಹೋರಾಟ ಸಮಿತಿಯ ಅದ್ಯಕ್ಷರಾದ ಶ್ರೀನಿವಾಸ ಸಾಲಿಯಾನ್ ಮಾತನಾಡಿ , ಈ…

Read More

ಹಿಂದೂ ಸಮಾಜ ಪ್ರಮುಖರಿಂದ “ಹಿಂದೂ ಏಕತಾ ಸಂಗಮ “ಕರಪತ್ರ ಬಿಡುಗಡೆ.

ಕಾಸರಗೋಡು:ಹಿಂದೂ ಸಮಾಜೋತ್ಸವ ಕಾಸರಗೋಡು ನಗರ ಸಮಿತಿಯ ಆಶ್ರಯದಲ್ಲಿ ದಿನಾಂಕ 08-03-2026 ರಂದು ಕಾಸರಗೋಡು ನಗರದಲ್ಲಿ ನಡೆಯಲಿರುವ ಹಿಂದೂ ಏಕತಾ ಸಂಗಮ ಕಾರ್ಯಕ್ರಮದ ಅಂಗವಾಗಿ ಗ್ರಹಸಂಪರ್ಕ ಕರಪತ್ರ ಬಿಡುಗಡೆ ಕಾರ್ಯಕ್ರಮವು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಸನ್ನಿಧಿಯಲ್ಲಿ ಜರಗಿತು.

Read More

ವರ್ಚುಯಲ್ ಆಗಿ ಕಾಂಗ್ರೆಸ್ ಭವನಗಳಿಗೆ ಶಿಲಾನ್ಯಾಸ: ಡಿಸಿಎಂ ಡಿ.ಕೆ. ಶಿವಕುಮಾರ್

ಪುತ್ತೂರು:”ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್‌ ಗಾಂಧಿ ಅವರು ವರ್ಚುಯಲ್ ಆಗಿ ಕಾಂಗ್ರೆಸ್ ಭವನಗಳಿಗೆ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ದಿನಾಂಕ ತಿಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಪುತ್ತೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾಧ್ಯಮಗಳಿಗೆ ಶುಕ್ರವಾರ ರಾತ್ರಿ ಪ್ರತಿಕ್ರಿಯೆ ನೀಡಿದರು. “ರಾಜ್ಯದಾದ್ಯಂತ ಎಲ್ಲೆಲ್ಲಿ ಕಾಂಗ್ರೆಸ್ ಭವನಗಳಿಗೆ ನಿವೇಶನಗಳು ಸಿದ್ಧವಿದೆಯೋ ಅವರೆಲ್ಲರಿಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ಪವಿತ್ರವಾದ ದಿನದಂದು ಪುತ್ತೂರಿನ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ…

Read More

ಮಂಗಳೂರಿನಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ ನಡೆದಿದೆ:ದಕ್ಷಿಣ ಕನ್ನಡ ಡಿಸಿ ದರ್ಶನ್ ಎಚ್‌.ವಿ

ಮಂಗಳೂರು:ಮಂಗಳೂರಿನಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ ನಡೆದಿದೆ ಎಂದು ದಕ್ಷಿಣ ಕನ್ನಡ ಡಿಸಿ ದರ್ಶನ್ ಎಚ್‌.ವಿ ಹೇಳಿದ್ದಾರೆ.ಮಂಗಳೂರು ನಗರದಲ್ಲಿ ಹೆಲಿಕಾಪ್ಟರ್‌ಗಳಿಗೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಆವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಾಗ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಅವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು. ಮಂಗಳೂರಿನಲ್ಲಿ ಆನೇಕ ಆಸ್ಪತ್ರೆಗಳು ಇರುವ ಕಾರಣದಿಂದಾಗಿ ಮೆಡಿಕಲ್ ತುರ್ತು ಆವಶ್ಯಕತೆಗಳಿಗೆ, ವಿಐಪಿ ಗಳಿಗೆ, ಹೆಲಿಟ್ಯೂರಿಸಮ್‌ಗೆ ಹೆಲಿಪ್ಯಾಡ್ ಅಗತ್ಯವಿದೆ.ನಗರದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಇಲ್ಲದ ಕಾರಣದಿಂದಾಗಿ ವಿಐಪಿಗಳು…

Read More
error: Content is protected !!