Headlines

ಅರ್ಭಿ–ದೆಂಬುಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅರಳ ಗ್ರಾಮದ ಬಹುಕಾಲದ ಬೇಡಿಕೆಯಾಗಿದ್ದ ಅರ್ಭಿ–ದೆಂಬುಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.20 ಲಕ್ಷ ವಿಶೇಷ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲಾಗಿದ್ದು, ಈ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಕೊಡುಗೆಯಾಗಿದೆ ಎಂದು ರಮಾನಾಥ…

Read More

ಹದಗೆಟ್ಟ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಲು ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯಿಂದ ಪ್ರತಿಭಟನೆ

ಬೋಳಿಯಾರ್ , ಜೂ22: ಬೋಳಿಯಾರ್ ಗ್ರಾಮದ ಗೋಳಿದಡಿ ಕ್ರಾಸ್‌ನಿಂದ ರಂತಡ್ಕವರೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯ ವತಿಯಿಂದ ಇಂದು ಬೋಳಿಯರ್ ಗೋಳಿದಡಿ ಕ್ರಾಸ್ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಶರ್ವನ್ ಬೋಳಿಯಾರ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ರಫ್ ಮೋನು ಬೋಳಿಯಾರ್ ಅವರು, ಬೋಳಿಯಾರ್ ಕ್ರಾಸ್…

Read More

ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳ ಯಕ್ಷರಂಗಾಯಣ ಕಾರ್ಕಳ ಶಾಸಕರು ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವವರಾಗಿರುವ ವಿ ಸುನಿಲ್ ಕುಮಾರ್ ಅವರ ಕನಸಿನ ಕೂಸು.ಕಾರ್ಕಳದ ಸುತ್ತ ಮುತ್ತಲಿನ ಕಲಾವಿದರಿಗೆ ಮತ್ತು ಇಂದಿನ ಯುವ ಜನತೆಗೆ ಯಕ್ಷಗಾನದ ಮಹತ್ವ ಹಾಗೂ ರಂಗಾಯಣ ನಾಟಕಗಳ ಮಹತ್ವನ್ನು ತಿಳಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದು ಅದಕ್ಕೆ ಸಂಬಂಧ ಪಟ್ಟ ಕೆಲಸಗಳು ನಿರಂತರವಾಗಿ ನಡೆಯುತ್ತಿತು. ಕರಾವಳಿ ಯಕ್ಷಗಾನಕ್ಕೆ ಮನೆಮಾತಾಗಿದ್ದು ಯಕ್ಷಗಾನ ಕಲಾವಿದರ ಗೌರವಕ್ಕೆ ಯಕ್ಷರಂಗಾಯಣ ಹೆಸರನ್ನು ಇಟ್ಟಿದ್ದು ಅದು ಕಲಾಭಿಮಾನಿಗಳಿಗೆ ಖುಷಿ ವಿಚಾರ ಆದರೆ ಈಗ ಹೆಸರು ಬದಲಿಸುವ…

Read More

ವಿದ್ವತ್ ಕಾಲೇಜು ವಿದ್ಯಾರ್ಥಿಗಳಿಂದ ಯೋಗಾಚರಣೆಯೋಗವು ದೇಹದ ಲವಲವಿಕೆಯ ಭಾಗ

ಬೆಳ್ತಂಗಡಿ, ಜೂ.21: ಯೋಗವು ನಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಮಹತ್ವದ ಸಾಧನವಾಗಿದೆ. ನಿಯಮಿತ ಯೋಗಾಭ್ಯಾಸದಿಂದ ದೇಹದ ಲವಲವಿಕೆ ಹೆಚ್ಚುತ್ತದೆ ಎಂದು ನ್ಯಾಚುರೋಪತಿ ವೈದ್ಯಕೀಯ ಅಧಿಕಾರಿ ಡಾ.ರಿಶಿಕಾ ರೈ ಹೇಳಿದರು. ಜೂ.21 ಅಂತಾರಾಷ್ಟ್ರೀಯ ಯೋಗದಿನಾಚರಣೆ ಭಾಗವಾಗಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಗವು ನಮ್ಮ ಒತ್ತಡ ನಿಯಂತ್ರಣ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಯೋಗವು ಏಕಾಗ್ರತೆಯನ್ನು ವೃದ್ಧಿಸಿ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ…

Read More

ಸೇಂಟ್ ಥೆರೆಸಾ ಶಾಲೆಯಿಂದ ಕಿಂಡರ್‌ಗಾರ್ಟನ್ ಪೋಷಕರಿಗಾಗಿ ದೃಷ್ಟಿಕೋನ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ ಡಾ. ರೋಹನ್ ಎಸ್. ಮೋನಿಸ್ ಭಾಗಿ

ಮಂಗಳೂರು, ಜೂನ್ 20, 2026: ಸೇಂಟ್ ಥೆರೆಸಾ ಶಾಲೆಯು ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳ ಪೋಷಕರಿಗಾಗಿ 2026ರ ಜೂನ್ 20ರಂದು ಬೆಳಿಗ್ಗೆ 9:00 ಗಂಟೆಗೆ ಶಾಲೆಯ ಮೊನ್ಸಿಜ್ಞೊರ್ ರೇಮಂಡ್ ಸಭಾಂಗಣದಲ್ಲಿ ದೃಷ್ಟಿಕೋನ ಕಾರ್ಯಕ್ರಮವನ್ನು (ಓರಿಯಂಟೇಶನ್ ಪ್ರೋಗ್ರಾಂ) ಯಶಸ್ವಿಯಾಗಿ ಹಮ್ಮಿಕೊಂಡಿತ್ತು. ಇದು ಎಳೆಯ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಾಲೆ ಮತ್ತು ಪೋಷಕರ ನಡುವಿನ ಫಲಪ್ರದ ಪಾಲುದಾರಿಕೆಯ ಆರಂಭವನ್ನು ಸೂಚಿಸಿತು. ಕಾರ್ಯಕ್ರಮವು ಶ್ರೀಮತಿ ಪ್ರಿಯಾ ಮತ್ತು ಶ್ರೀಮತಿ ಜೆಸ್ನಿ ಅವರ ನೇತೃತ್ವದಲ್ಲಿ ದೇವರ ಆಶೀರ್ವಾದವನ್ನು ಕೋರುವ ಪ್ರಾರ್ಥನಾ ಸೇವೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಲಿಡ್ವಿನ್…

Read More

ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್‌ಗೆ ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ ವತಿಯಿಂದ ಅದ್ದೂರಿ ಸನ್ಮಾನ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಹಾಗೂ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎ.ಕೆ.ಎಂ. ಅಶ್ರಫ್ ಅವರನ್ನು ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ ವತಿಯಿಂದ ವರ್ಕಾಡಿಯ ಗಾಂಧಿನಗರದ ಎ.ಎಚ್. ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಸಂಘಟನೆಯ ಅಧ್ಯಕ್ಷ ಯೇಸು ಪ್ರಸಾದ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ ಶಾಸಕರ ಜನಪರ ಕಾರ್ಯಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, “ಸಮಾಜದ…

Read More

ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ವಿಳಂಬ ಸಲ್ಲದು :- ಶಾಸಕ ಕಾಮತ್

ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿ ತಾಣ, ಸಮಗ್ರ ಅಭಿವೃದ್ಧಿ ಕಾಮಗಾರಿ ಅನಗತ್ಯವಾಗಿ ವಿಳಂಬವಾಗುತ್ತಿದ್ದು, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಹಾಗೂ ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ದಲಿತೋದ್ದಾರಕ ಕುದ್ಮುಲ್ ರಂಗರಾವ್ ಅವರ ಸಮಾಧಿ ಅಭಿವೃದ್ಧಿಗಾಗಿ 2022ರ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಹಾತ್ಮಾ ಗಾಂಧಿ…

Read More

ಬಂಗ್ರ ಮಂಜೇಶ್ವರ ಪೊಯ್ಯೆಕಂಡ ಮಲರಾಯ ದೈವಸ್ಥಾನ ನವೀಕರಣಕ್ಕೆ ಚಾಲನೆ

ಮಂಜೇಶ್ವರ: ಹಿತಿಹಾಸ ಪ್ರಸಿದ್ಧ ಪುರಾತನ ದೈವ ಸಾನ್ನಿಧ್ಯವಾಗಿರುವ ಬಂಗ್ರಮಂಜೇಶ್ವರ ಪೊಯ್ಯೆಕಂಡ ಮಲರಾಯ ದೈವಸ್ಥಾನದ ನವೀಕರಣ ಕಾರ್ಯಕ್ಕೆ ಭಕ್ತರು ತೀರ್ಮಾನಿಸಿ ಜೂನ್ 21ರಂದು ಬಡಾಜೆ ತಂತ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ಬಾಲಾಲಯ ಪ್ರತಿಷ್ಠಾಪನೆ ನೆರವೇರಿತುಮಲರಾಯ ,ಬಬ್ಬರ್ಯ ,ನಾಗದೇವರ ಸಾನಿಧ್ಯ ವಿರುವ ಈ ದೈವಸ್ಥಾನವನ್ನು ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳಿಸಿ , ಮುಂದಿನ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೇ ಹಾಕಲಾಗಿದೆ, ಮೊಗವೀರ ಸಮುದಾಯಕ್ಕೆ ಸೇರಿದ ಈಕ್ಷೇತ್ರ ಇದಾಗಿದ್ದು ಮೀನು ವ್ಯಾಪಾರ ಮಾಡುತ್ತಿದ್ದ ನಾಗಮ್ಮ ಹಾಗೂ ಬಾಳಮ್ಮ…

Read More

ನವಜಾತ ಶಿಶು ಮಾರಾಟ ಪ್ರಕರಣ: ವೈದ್ಯ ಸೇರಿದಂತೆ ಇಬ್ಬರ ಬಂಧನ

ಉಡುಪಿ, ಜೂ.22: ನವಜಾತ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯರು ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸುರೇಂದ್ರ ಹಾಗೂ ಮಲ್ಪೆ ಸಮೀಪದ ನೇಜಾರು ನಿವಾಸಿ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ಸುಬ್ರಹ್ಮಣ್ಯ ನಗರದ ನವಜಾತ ಶಿಶುವೊಂದನ್ನು ಪ್ರಕಾಶ್ ಅವರಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಉಡುಪಿ ಮಹಿಳಾ ಠಾಣೆ…

Read More

ಮಂಗಳೂರಿನಲ್ಲಿ ನಡೆದ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ ; ಲಕ್ಷ್ಮೀ ಅಶೋಕ್‌ಗೆ ಒಲಿದ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ

​ಮಂಗಳೂರು : ಪಾಥ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿಯ ಸಹಯೋಗದಲ್ಲಿ ಏಳನೇ ಆವೃತ್ತಿಯ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯು ಭಾನುವಾರ‌ ನಗರದ ಬೋಳೂರು ಬೇಯಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ಲಕ್ಷ್ಮೀ ಅಶೋಕ್ ಅವರು ಮಿಸೆಸ್‌ ಇಂಡಿಯಾ ಕರ್ನಾಟಕ 2026 ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅಶ್ವಿನಿ ಕೊಠಾರಿ ಪ್ರಥಮ ರನ್ನರ್ ಅಪ್ ಹಾಗೂ ವಾಣಿ ಎಸ್.ಮಯ್ಯ ದ್ವಿತೀಯ ರನ್ನರ್ ಅಪ್ ಕಿರೀಟ ತನ್ನದಾಗಿಸಿಕೊಂಡರು. ಮಿಸೆಸ್ ಇಂಡಿಯಾ ಕ್ಲಾಸಿಕ್ ವಿಭಾಗದಲ್ಲಿ…

Read More
error: Content is protected !!