ಮಾಜಿ ಶಾಸಕರ ಪುತ್ರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಉಡುಪಿ:ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರು ಗ್ರಾಮದ ಬಳಿ ಘಟನೆ ನಡೆದಿದೆ. ಸುದೀಪ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬ್ರಹ್ಮಾವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ :ಪರಿಶೀಲನೆಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಅಕ್ಟೋಬರ್ 13: ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಾ, ಅವರ ಆರೋಗ್ಯ ಸುಧಾರಣೆಯಾಗುತ್ತಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿಲಿದ್ದಾರೆ ಎಂದರು.ಸಚಿವ ಪ್ರಿಯಾಂಕ ಖರ್ಗೆಯವರು ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್…

Read More

ಆಕಸ್ಮಿಕ ಬೆಂಕಿ ಅವಘಡ: ಗುಜರಿ ಅಂಗಡಿ ಸುಟ್ಟು ಕರಕಲು

ಮಂಗಳೂರು: ಆಕಸ್ಮಿಕ ಬೆಂಕಿ ಅವಘಡಕ್ಕೆ ಗುಜರಿ ಅಂಗಡಿ ಸುಟ್ಟು ಕರಕಲಾಗಿದೆ.ಈ ಘಟನೆ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 ರ ಸೋಮೇಶ್ವರ ಉಚ್ಚಿಲ ಜಂಕ್ಷನ್ ಬಳಿ ಸಂಭವಿಸಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಆದಿತ್ಯವಾರ ಮಧ್ಯಾಹ್ನ ತಲಪಾಡಿ ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು ದಟ್ಟ ಹೊಗೆಯು ಉಚ್ಚಿಲ, ತಲಪಾಡಿ,…

Read More

ಪುತ್ತೂರಿನ ಇಬ್ಬರು ಮಹಿಳಾ ಸಹೋದ್ಯೋಗಿಗಳು ನಾಪತ್ತೆ

ಪುತ್ತೂರು: ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರದ ದಿವ್ಯಾ (20) ನಾಪತ್ತೆಯಾದ ಯುವತಿಯರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ವರದಿಯ ಪ್ರಕಾರ, ಇವರಿಬ್ಬರೂ ನಾಲ್ಕು ದಿನಗಳ ಹಿಂದೆ ಮೋನಿಶಾ ಅವರ ಮನೆಗೆ ಬಂದಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ. ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

Read More

ಉಡುಪಿ: ಕನಿಷ್ಠ ಕೂಲಿ, ತುಟ್ಟಿಭತ್ಯೆ ಪಾವತಿಸದೆ ಬೀಡಿ ಕಾರ್ಮಿಕರಿಗೆ ವಂಚನೆ-ಬೀಡಿ ಮಾಲೀಕರ ವಿರುದ್ಧ ಬೀಡಿ ಕಾರ್ಮಿಕರ ಧರಣಿ,ಕೂಡಲೇ ಬಾಕಿ ಇರುವ ಕನಿಷ್ಠ ಕೂಲಿ- ತುಟ್ಟಿ ಭತ್ಯೆ ಪಾವತಿಸಲು ಆಗ್ರಹ

ಉಡುಪಿ: 2018ರಿಂದ 2024 ವರೆಗಿನ 6 ವರ್ಷಗಳ ಬಾಕಿ ಇರುವ ಕನಿಷ್ಠ ಕೂಲಿ, 2024ರಂದು ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಅಂಬಲಪಾಡಿಯ ಭಾರತ್ ಬೀಡಿ ಕಂಪೆನಿ ಎದುರು ಇಂದು ಧರಣಿ ನಡೆಸಿದರು. ಬೀಡಿ ಮಾಲೀಕರು ಕಾರ್ಮಿಕರನ್ನು ವಂಚನೆ ಮಾಡುತ್ತಿದ್ದಾರೆ. ಕಾನೂನುಬದ್ಧ ಸವಲತ್ತುಗಳನ್ನು ನಾಶ ಮಾಡಲು ಹೊರಟಿದ್ದಾರೆ. 2018ರಿಂದ 2024 ರವರೆಗೆ ಆರು ವರ್ಷಗಳ…

Read More

ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣನ ಕಾರ್ ತಡೆದಿದ್ದು ಯಾಕೆ …. ?

ಹಾಸನ:ಹಸನಾಂಬೆ ದೇವಿ ದರ್ಶನಕ್ಕೆ ನಾಲ್ಕನೇ ದಿನವಾದ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು ಕೂಡ ಹಾಸನಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಕೂಡ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ ರೇವಣ್ಣ ಅವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದ ಘಟನೆ ನಡೆದಿದೆ. ಶಿಷ್ಠಾಚಾರ ಪಾಲನೆಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಶಾಸಕ ಹೆಚ್.ಡಿ.ರೇವಣ್ಣ ಹಾಸನಾಂಬೆ…

Read More

ಪ್ರಿಯಾಂಕ ಖರ್ಗೆಗೆ ತಾಕತ್ತು ಇದ್ದರೆ ಕರ್ನಾಟಕದಲ್ಲಿ ಎಸ್ ಡಿ ಪಿ ಐ ಯನ್ನು ಬ್ಯಾನ್ ಮಾಡಲಿ ; ಬಿಜೆಪಿ ರಾಜ್ಯ ನಾಯಕ ರವಿ ಕುಮಾರ್

ಮಂಗಳೂರು: ನಮ್ಮ ದೇಶದ , ಪ್ರಪಂಚದ ನಂಬರ್ ಒನ್ ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ದೇಶ ಸೇವೆಯಲ್ಲಿ ತೊಡಗಿರುವ ಸಂಘಟನೆಯನ್ನು ಕೇವಲವಾಗಿ ಮಾತನಾಡಿದ ಪ್ರಿಯಾಂಕ ಖರ್ಗೆ ಕೂಡಲೇ ರಾಜಿನಾಮೆ ನೀಡಬೇಕು , ಆರ್ ಎಸ್ ಎಸ್ ಬಗ್ಗೆ ಪುಂಕಾನು ಪುಂಕವಾಗಿ ತುಟಿ ಬಿಚ್ಚುವುದನ್ನು ಕೂಡಲೇ ನಿಲ್ಲಿಸಬೇಕು , ಕೂಡುವುದಾದರೆ ಎಸ್ ಡಿ ಪಿ ಐ ಸಂಘಟನೆಯನ್ನು ಇಲ್ಲಿ ಬ್ಯಾನ್ ಮಾಡಿ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರು , ಬಿಜೆಪಿ…

Read More

ಯುವ ತೆಯ್ಯಂ ಕಲಾವಿದ ಪಿ ಕೆ ಅಶ್ವಂತ್ ಆತ್ಮಹತ್ಯೆಗೆ ಶರಣು …. !

ಕಣ್ಣೂರು: ಪ್ರಸಿದ್ಧ ಯುವ ತೆಯ್ಯಂ ಕಲಾವಿದನೊಬ್ಬ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಲ್ಲುರುತಿಯ ನಾನಿಸ್ಸೇರಿಯ ಪರಸ್ಸಿನಿಕಡವುವಿನ ಕುಡುಕ್ಕವಲಪ್ಪಿಲ್ ಮನೆಯಲ್ಲಿ ಸೂರಜ್ ಅವರ ಪುತ್ರ ಪಿ ಕೆ ಅಶ್ವಂತ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಪೊಡಿಕುಂಡ್‌ ನಲ್ಲಿರುವ ಬಾಡಿಗೆ ಮನೆಯಲ್ಲಿ ಭಾನುವಾರ ರಾತ್ರಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆರು ತಿಂಗಳ ಹಿಂದೆ ಅಶ್ವಂತ್ ತನ್ನ ಸಹೋದರ ಅದೈತ್ ಜೊತೆ ಪೊಡಿಕುಂಡ್‌ನ ಬಾಡಿಗೆ ಮನೆಯಲ್ಲಿ ವಾಸಿಸಲು…

Read More

ಕೋಟೆ,ಧೂಮಾವತಿ “ದೀಪಾವಳಿ ನೇಮೋತ್ಸವ “ಕ್ಕೆ ವೀಳ್ಯ.

ಕಾಸರಗೋಡು ಕೋಟೆ -ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೇಮೋತ್ಸವ “ದಿನಾಂಕ 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಯಲ್ಲಿ, ಕೋಟೆ ನಾಯಕರ ಮನೆ ಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದಿನಾಂಕ 20. ದೀಪಾವಳಿ ದಿನದಂದು ನಡೆಯಲಿರುವ ದೈವ ಕೋಲದ “ವೀಳ್ಯ ಕೊಡುವಿಕೆ “ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ನಡೆಯಲ್ಲಿ ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ…

Read More

ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭ.

ಅಕ್ಟೋಬರ್ 13 14 ರಂದು ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭವು ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಧ್ವಜಾರೋಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವೀಪ ಪ್ರಜ್ವಲಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು ಮಂಜೇಶ್ವರ ಶಾಸಕರಾದ ಶ್ರೀಯುತ ಎ ಕೆ ಎಂ ಅಶ್ರಫ್ ಕಾರ್ಯಕ್ರಮ…

Read More
error: Content is protected !!