Headlines

ಕನ್ನಡ ಮತ್ತು ಜನಪದ ಸಂಸ್ಕೃತಿ ಸೌಹಾರ್ದದ ಸೇತುವೆ: ಟಿ.ಎಂ. ಶಹೀದ್ ತೆಕ್ಕಿಲ್

ಕೊಚ್ಚಿ:ಕನ್ನಡ ಭಾಷೆ ಹಾಗೂ ಜನಪದ ಸಂಸ್ಕೃತಿ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಜನರನ್ನು ಬೆಸೆಯುವ ಸೌಹಾರ್ದದ ಸೇತುವೆಯಾಗಿದೆ ಎಂದು ಕರ್ನಾಟಕ ಸರಕಾರದ ಸಚಿವ ಸ್ಥಾನಮಾನ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದರು. ಅವರು ಕೊಚ್ಚಿಯಲ್ಲಿ ಹೋಟೆಲ್ ಗೋಕುಲಂ ಪಾರ್ಕ್ ನಲ್ಲಿ ನಡೆದ ಕನ್ನಡ-ಜನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕವು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳ ಸಹಬಾಳ್ವೆಯ ನಾಡಾಗಿದೆ….

Read More

ಮಲ್ಲಿಕಟ್ಟೆಯ ಪಾರ್ಕ್ ನಲ್ಲಿ ಅಳವಡಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವು

ಮಲ್ಲಿಕಟ್ಟೆಯ ಪಾರ್ಕ್ ನಲ್ಲಿ ಅಳವಡಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವಾಗಿದೆ.ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಕೆಲವು ವರ್ಷಗಳ ಹಿಂದೆ ಪಾರ್ಕ್ ಅಭಿವೃದ್ಧಿ ಪಡಿಸಲಾಗಿತ್ತು.ಈ ವೇಳೆ ಕದ್ರಿ ಗೋಪಾಲನಾಥ ಅವರ ನೆನಪಿನಲ್ಲಿ ಪೀಠವನ್ನು ನಿರ್ಮಿಸಿ, ಗಾಜಿನ ಬಾಕ್ಸ್ ನಲ್ಲಿ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಇರಿಸಲಾಗಿತ್ತು. ಪಾರ್ಕ್ ಗೆ ಬರುವ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿತ್ತು. ಆದರೆ ಅನುದಾನ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಪಾರ್ಕ್ ನಿರ್ವಹಣೆ ಆಗದೆ, ಪಾಳು ಬಿದ್ದಿತ್ತು. ವಾರದ ಹಿಂದೆ ಯಾರೋ ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ…

Read More

ಬೇರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್‌ನಲ್ಲಿ ‘ನಶಾ ಮುಕ್ತ ಯುವ – ವಿಕಸಿತ ಭಾರತ್’ ಅಭಿಯಾನದಡಿ “ಮೈ ಹೆಲ್ತ್ ಮೈ ಪ್ರೈಡ್” ಕಾರ್ಯಕ್ರಮ

ಮಂಗಳೂರು: ಯುವಜನರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸಲು ಮತ್ತು ಮಾದಕ ದ್ರವ್ಯ ವ್ಯಸನವನ್ನು ತಡೆಯುವ ಉದ್ದೇಶದಿಂದ, ಮಂಗಳೂರಿನ ಬೇರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್‌ನಲ್ಲಿ ‘ನಶಾ ಮುಕ್ತ ಯುವ – ವಿಕಸಿತ ಭಾರತ್’ ಅಭಿಯಾನದಡಿ “ಮೈ ಹೆಲ್ತ್ ಮೈ ಪ್ರೈಡ್” (ನನ್ನ ಆರೋಗ್ಯ ನನ್ನ ಹೆಮ್ಮೆ) ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈ ಭಾರತ್ (ದಕ್ಷಿಣ ಕನ್ನಡ), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ದಕ್ಷಿಣ ಕನ್ನಡ), ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾಲೇಜಿನ ಎನ್.ಎಸ್.ಎಸ್ (NSS) ಮತ್ತು…

Read More

ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಪದ್ಮರಾಜ್ ಆರ್. ಪೂಜಾರಿ ಭೇಟಿ

ಮಂಗಳೂರು: ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪದ್ಮರಾಜ್ ಆರ್. ಪೂಜಾರಿ ಅವರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೋಕದ ಹಿತ, ಜನರ ಸುಖ–ಶಾಂತಿ ಹಾಗೂ ಸಮಾಜದ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಪದ್ಮರಾಜ್ ಆರ್. ಪೂಜಾರಿ ಅವರು, ಜನಸೇವೆಯ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ದೊರೆತಿರುವುದು ಸಂತೋಷದ ಸಂಗತಿ. ದೇವರ ಸೇವೆ ಹಾಗೂ ಜನರ ಸೇವೆಗೆ ಅವಕಾಶ…

Read More

ಕಾಸರಗೋಡು ದಸರಾ ಉದ್ಘಾಟಕರಾಗಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ, ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಳೆದ 2007ರಿಂದ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪುನರುತ್ಥಾನದ ಉದ್ದೇಶದಿಂದ ಆಯೋಜಿಸಿಕೊಂಡು ಬರುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ’ ಈ ಬಾರಿ ಅ.11ರಿಂದ 20ರವರೆಗೆ ನಡೆಯಲಿದೆ. ದಸರಾ ಅಂಗವಾಗಿ ಹತ್ತು ದಿನಗಳ ಕಾಲ ಸಂಕೀರ್ತನಾ ದಶಾಹ, ಕವಿ ಸಮ್ಮೇಳನ, ಕಾಸರಗೋಡು ದಸರಾ…

Read More

ಗ್ರಾಮೀಣ ಕಬಡ್ಡಿ ಅಭಿವೃದ್ಧಿಗೆ ಹೊಸ ಹೆಜ್ಜೆ: ತುಳುನಾಡು ಬಾರ್ಡರ್ ಕಬಡ್ಡಿ ಸಮಿತಿ ರಚನೆ

ಮಂಜೇಶ್ವರ : ತುಳುನಾಡಿನ ಗಡಿ ಭಾಗದಲ್ಲಿ ಗ್ರಾಮೀಣ ಕಬಡ್ಡಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡಲಾಗಿದೆ. ಸ್ಥಳೀಯ ಕಬಡ್ಡಿ ತಂಡಗಳ ಜಂಟಿ ಸಹಕಾರದೊಂದಿಗೆ ನಡೆದ ಸಭೆಯಲ್ಲಿ ತುಳುನಾಡು ಬಾರ್ಡರ್ ಕಬಡ್ಡಿ ಟೀಮ್ಸ್ ಕಮಿಟಿಯನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಭಾಗದ ಕಬಡ್ಡಿ ಕ್ರೀಡೆಯ ಮುಂದಿನ ಬೆಳವಣಿಗೆ, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಉತ್ತಮ ಗುಣಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಕಬಡ್ಡಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ವಿವಿಧ…

Read More

ಮಂಜೇಶ್ವರ: ಹೊಳೆಯಲ್ಲಿ ಮುಳುಗಿ ಅನ್ಯರಾಜ್ಯ ಕಾರ್ಮಿಕ ಸಾವು

ಮಂಜೇಶ್ವರ: ಇಲ್ಲಿನ ವಾಮಂಜೂರು ಹೊಳೆಯಲ್ಲಿ ಇಂದು ಮಧ್ಯಾಹ್ನ ಗೆಳೆಯರೊಂದಿಗೆ ಈಜಲು ಇಳಿದಿದ್ದ ಅನ್ಯರಾಜ್ಯದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ​ಪಶ್ಚಿಮ ಬಂಗಾಳ ಮೂಲದ ವಿಶ್ವಾಸ್ ಬರ್ಮನ್ ಮೃತಪಟ್ಟ ದುರ್ದೈವಿ. ಘಟನೆ ನಡೆದ ತಕ್ಷಣ ಸ್ಥಳೀಯರ ನೆರವಿನಿಂದ ಶವವನ್ನು ನೀರೊಳಗಿನಿಂದ ಮೇಲಕ್ಕೆತ್ತಿ, ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read More

ಓಣಂ ಬಂಪರ್‌ನಲ್ಲಿ ಒಂದು ಕೋಟಿ ರೂ. ಬಹುಮಾನ; ಬಾಕ್ರಬೈಲ್ ಲಾಟರಿ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್‌ಗೆ ಅದೃಷ್ಟ

ಮಂಜೇಶ್ವರ: ಕೇರಳ–ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ವರ್ಕಾಡಿ ಬಾಕ್ರಬೈಲ್ ಪ್ರದೇಶದ ಸಣ್ಣ ಲಾಟರಿ ಸ್ಟಾಲ್‌ಗೆ ಓಣಂ ಬಂಪರ್ ಮೂಲಕ ಕೋಟಿಯ ಅದೃಷ್ಟ ಒಲಿದುಬಂದಿದೆ.ಶ್ರೀಶಾರದಾಂಬ ಕಾಳಿ ಚಾಮುಂಡಿ ಲಾಟರಿ ಏಜೆನ್ಸಿ ಮಾರಾಟ ಮಾಡಿದ TA 300530 ಸಂಖ್ಯೆಯ ಟಿಕೆಟ್‌ಗೆ ಒಂದು ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ಬಾಕ್ರಬೈಲ್ ನಿಂದ ಕೇವಲ ಹತ್ತು ಮೀಟರ್ ದೂರದಲ್ಲೇ ಕರ್ನಾಟಕ ಗಡಿಯಿದೆ. ಹೀಗಾಗಿ ಕೇರಳದವರ ಜೊತೆಗೆ ಕರ್ನಾಟಕದಿಂದಲೂ ಜನರು ಇಲ್ಲಿಗೆ ಬಂದು ಲಾಟರಿ ಟಿಕೆಟ್ ಖರೀದಿಸುತ್ತಾರೆ. ಈ ಏಜೆನ್ಸಿಗೆ ಈ ಹಿಂದೆಯೂ ಹಲವು ಬಹುಮಾನಗಳು…

Read More

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: – 24 ಲಕ್ಷ ಮೌಲ್ಯದ 240 ಗ್ರಾಂ MDMA ವಶ, ಮೂವರ ಬಂಧನ

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿತರನ್ನು ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಬಂಧಿಸಿ, ಅವರುಗಳಿಂದ ಸುಮಾರು ₹ 24 ಲಕ್ಷ ಮೌಲ್ಯದ 240 ಗ್ರಾಂ MDMA ಮಾದಕವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.ಬೆಂಗಳೂರು ನಗರದಿಂದ ನಿಷೇದಿತ ಮಾದಕ ವಸ್ತುವಾದ MDMA ಅನ್ನು ಖರೀದಿಸಿಕೊಂಡು ಅದನ್ನು ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಿನಾಂಕ 26-09-2026 ರಂದು ಸಂಜೆ ಉಳ್ಳಾಲ ತಾಲುಕು…

Read More

ಖ್ಯಾತ ಕವಿ, ಸಾಹಿತಿ ಕನ್ನಡ ಹೋರಾಟಗಾರ ಡಾ. ರಮಾ ನಂದ ಬನಾರಿ ಯವರು ” ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ” 2026.ಕ್ಕೆ ಆಯ್ಕೆ

ಕಾಸರಗೋಡು : ಅಕ್ಟೋಬರಿನ 11.ಭಾನುವಾರದಿಂದ 20.10.2026ರ ವರೆಗೆ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸಾರತ್ಯದಲ್ಲಿ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “2026.ರ ಅಂಗವಾಗಿ 18.10.2026 ಭಾನುವಾರ ಬೆಳಿಗ್ಗಿನ 11 ಗಂಟೆಯಿಂದ ಉದ್ಘಾಟನೆ ಗೊಳ್ಳುವ “ಕಾಸರಗೋಡು ದಸರಾ ಕವಿ ಸಮ್ಮೇಳನ “ದಲ್ಲಿ ಇವರೀಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ “ನೀಡಿ ಗೌರವಿಸಲಾಗುವುದು. ಸಾಹಿತ್ಯ ಸಂಘಟಕ, ಬಿ. ಶ್ರೀನಿವಾಸ್ ಬಹಾದ್ದೂರ್ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ದಸರಾ…

Read More
error: Content is protected !!