ಸಿದ್ದರಾಮಯ್ಯ ಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆ ನಿಜವಾಗುತ್ತಾ ಆರ್.ಅಶೋಕ್ ನುಡಿಯುತ್ತಿರುವ ಭವಿಷ್ಯ …… ?

ಬೆಳಗಾವಿ: ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ಸಿ. ಎಂ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ . ಬೆಳಗಾವಿಯಲ್ಲಿ ಮಾತನಾಡಿದ ಅವರು, “ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಾಂತ್ರಿ ಅಂತ ಹೇಳಿ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಒಪ್ಪಂದ ಆಗಿರೋದು ನಿಜ. ಈಗ ಜಗಳ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.“ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ…

Read More

ಬೀಡಿ ಸೂಪಿನಲ್ಲಿ ಅರಳಿದ ರಾಂಕ್ ಕನಸ್ಸು

ಕರಾವಳಿ , ಮಲಬಾರ್ ಭಾಗದಲ್ಲಿ ಹೆಚ್ಹಾಗಿ ತಮ್ಮ ಜೀವನೋಪಾಯ ಸಾಧಿಸಲು ಅದೆಷ್ಟೋ ವನಿತೆಯರು ಬೀಡಿಯನ್ನು ಕಟ್ಟುತ್ತಾರೆ. ಆ ಬೀಡಿಯ ಸೂಪಿನಲ್ಲಿ ಅದೆಷ್ಟೋ ಜನರ ಬದುಕು ಬೆಳಕಾಗಿದೆ, ಅದೆಷ್ಟೋ ಸಾಧಕರು ಜನ್ಮ ಪಡೆದಿದ್ದಾರೆ. ನಾನು ಕೂಡ ಬಾಲ್ಯದಿಂದಲೂ ಈ ಬೀಡಿ ಕಟ್ಟುವುದನ್ನು ಕಂಡವ .ನನ್ನ ಮನೆಯಲ್ಲೂ ಬೀಡಿ ಕಟ್ಟುತ ಕಣ್ಣ ರೆಪ್ಪೆಯಂತೆ ಸಲಹುವ ಒಬ್ಬಳು ಮಹಾ ತಾಯಿ ಇದ್ದಾರೆ. ಮಡಿಲಲ್ಲಿ ನಾ ಆಸರೆ ಪಡೆಯುವ ದಿನದಿಂದ ಅವರ ಮೇಲೆ ಬೀಡಿಯ ಸೂಪು ಇರುತ್ತಿತ್ತು. ಮಳೆಗಾಲ ಇರಲಿ, ಚಳಿಗಾಲ ಇರಲಿ,…

Read More

ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನ ಬಹುಕಾಲದ ಬೇಡಿಕೆಯ ಎಂಬಿಬಿಎಸ್ ವಿಷಯಕ್ಕೆ ಚಾಲನೆ ನೀಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕಾಸರಗೋಡು: ಜನರ ಬಹುಕಾಲದ ಕಾತರಕ್ಕೆ ಇಂದು ತೆರೆ ಬಿದ್ದಿದೆ . ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ವಿಷಯ ಆರಂಭಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಸಂತಸವನ್ನು ಮೂಡಿಸಿದೆ . ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉಕ್ಕಿನಡ್ಕದಲ್ಲಿರುವ ಮೆಡಿಕಲ್ ಕಾಲೇಜು ಕಟ್ಟಡದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ನೆರವೇರಿಸಿದರು .ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು.ಜಿಲ್ಲಾಧಿಕಾರಿ ಇಂಬ ಶೇಖರ್ ಸ್ವಾಗತಿಸಿದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್,ಉದುಮ ಶಾಸಕ ಸಿ.ಎಚ್.ಕುಂಞಂಬು,…

Read More

ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಕಸಾಯಿ ಖಾನೆಯ ಮುಟ್ಟುಗೋಲು

ಮಂಗಳೂರು:ಬಂಟ್ವಾಳ : ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಕಸಾಯಿ ಖಾನೆಯನ್ನು ಮುಟ್ಟುಗೋಲು ಹಾಕಿದ ಪ್ರಕರಣ ವರದಿಯಾಗಿದೆ. ದ.ಕ. ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಸಮೀಪದ ಪಾಡಿ ಎಂಬಲ್ಲಿ ನಡೆದಿದೆ. ಪುದು ಗ್ರಾಮದ ಪಾಡಿ ನಿವಾಸಿ ಹಸನಬ್ಬಗೆ ಸೇರಿದ ಮನೆಯನ್ನು ಅಕ್ರಮ ಕಸಾಯಿ ಖಾನೆ ನಡೆಸಿದ ಆರೋಪದಲ್ಲಿ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.ಹಸನಬ್ಬ ವಿರುದ್ಧ ಗೋ ಕಳವು, ಗೋವಧೆಯಂತಹ ಪ್ರಕರಣಗಳು ದಾಖಲಾಗಿವೆ. ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ…

Read More

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ದ ಭವ್ಯ ಶೋಭಾಯಾತ್ರೆ.

ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದ ಹಾಗೂ ಭಕ್ತಿ ಭಾವದ ಸಮ್ಮಿಲನದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ದ ಭವ್ಯ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಆರಂಭಗೊಂಡು, ಶುಕ್ರವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಭವ್ಯ ಶೋಭಾಯಾತ್ರೆಯನ್ನು ಸಹಸ್ರಾರು ಜನರು ಕಣ್ಣುಂಬಿಕೊಂಡರು. ಶ್ರೀ ಕ್ಷೇತ್ರ ಕುದ್ರೋಳಿಯಿಂದ ಗುರುವಾರ ಸಂಜೆ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ…

Read More

ಡಿ ಎನ್ ಎ ಪರೀಕ್ಷೆಯಲ್ಲಿ ತಂದೆಯೆಂದು ಸಾಬೀತಾದ ಕೃಷ್ಣ ಜಿ ರಾವ್ ಮದುವೆಯಾಗಲು ಹಿಂದೇಟು ಹಾಕುವುದೇಕೆ ….. ? ; ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ

ಮಂಗಳೂರು: ಕೃಷ್ಣ ಜಿ ರಾವ್ನ ಡಿ ಎನ್ ಎ ಪರೀಕ್ಷೆಯ ಮೂಲಕ ಈತನದ್ದೇ ಮಗುವೆನ್ನುವ ಸತ್ಯ ಇದೀಗ ಹೊರ ಬಂದಿದೆ , ಈತನೇ ತಂದೆ ಎಂದು ಸಾಬೀತಾದರೂ ಕೂಡ ಬಾಲಕಿಯನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾನೆ , ಈ ಹಿಂದೂ ಹೆಣ್ಣು ಮಗಳಿಗೆ ಆದ ಅನ್ಯಾಯವನ್ನು ಯಾವ ಹಿಂದೂ ಮುಖಂಡರಾಗಲಿ , ಸ್ವಾಮೀಜಿಗಳಾಗಲಿ , ರಾಜಕೀಯ ವ್ಯಕ್ತಿಗಳಾಗಲಿ ಮಾತನಾಡದೇ ಇರುವುದು ದುರಂತ . ಆದರೆ ಶ್ರೀಮಂತ , ರಾಜಕೀಯವಾಗಿ ಪ್ರಬಲ ಕುಟುಂಬದ ಹೆಣ್ಣಾಗಿದ್ದರೆ ಈ ಅನ್ಯಾಯ ಆಗುತ್ತಿತ್ತಾ…. ?…

Read More

ಬಂಟ್ವಾಳ: ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬಂಟ್ವಾಳ, ಅ. 03 : ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಟೂರು ಕ್ರಾಸ್ ನಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44) ಮೃತ ದುರ್ದೈವಿ.ಲೋಕೇಶ್ ಅವರು ಕಲ್ಲಡ್ಕದ ನಾಯರ ಪೆಟ್ರೋಲ್ ಪಂಪ್ ನ ಮುಂಭಾಗದಲ್ಲಿ ರಸ್ತೆಯನ್ನು ದಾಟುವ ವೇಳೆ ಅತೀ ವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್…

Read More

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮ.

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಹಾತ್ಮ ಗಾಂಧಿ ಅವರು ಬ್ರಿಟಿಷರ, ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟಿನಿಂತು ದೇಶದ ಜನತೆಯ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ಚಿಂತನೆ, ಆದರ್ಶ, ಜೀವನ ಶೈಲಿ ದೇಶದಲ್ಲಿ ಇನ್ನೂ ಜೀವಂತವಾಗಿದ್ದರಿಂದ ಪ್ರಜಾಪ್ರಭುತ್ವ ಉಳಿದಿದೆ. ಗಾಂಧಿ…

Read More

‘ಭಾರತ ಯಾರ ಮುಂದೆಯೂ ಅವಮಾನಕ್ಕೊಳಗಾಗಲು ಬಿಡಲ್ಲ’- ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೋ, ಅ. 03: ಭಾರತ ಯಾರ ಮುಂದೆಯೂ ಅವಮಾನಕ್ಕೊಳಗಾಗಲು ರಷ್ಯಾ ಬಿಡುವುದಿಲ್ಲ ಎಂದು ಅಮೆರಿಕಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟಾಂಗ್ ನೀಡಿದ್ದಾರೆ. ಸೋಚಿಯಲ್ಲಿ ನಡೆದ ವಾಲ್ಡೈ ಚರ್ಚಾ ಕ್ಲಬ್‌ನ ಸಮಗ್ರ ಅಧಿವೇಶನದಲ್ಲಿ ಮಾತನಾಡಿದ ಪುಟಿನ್, “ಪ್ರಧಾನಿ ನರೇಂದ್ರ ಮೋದಿ ಅವರು ಸಮತೋಲಿತ ಮತ್ತು ಬುದ್ಧಿವಂತ ನಾಯಕ. ಭಾರತವು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೆ. ಇಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಕೆಲವು ನಷ್ಟಗಳನ್ನು ಅನುಭವಿಸುತ್ತದೆ. ಅಂದಾಜುಗಳು…

Read More

ಕಡಲ ನಗರಿಯಲ್ಲಿ ನವರಾತ್ರಿ ಸಮಾಪ್ತಿಗೆ ಕ್ಷಣಗಣೆಯ ರಾತ್ರಿ ….!!!

ಮಂಗಳೂರು: ಕರಾವಳಿಯಲ್ಲಿ ನವರಾತ್ರಿ ಸಂಭ್ರಮ ಇಂದು ರಾತ್ರಿ ಸಮಾರೋಪಗೊಳ್ಳುತ್ತಿದೆ. ನವರಾತ್ರಿ ಹಬ್ಬ, ಕುದ್ರೋಳಿ ದಸರಾ ಮತ್ತು ಉಚ್ಚಿಲ ದಸರಾಗಳು ಕರಾವಳಿಗೆ ಬಹು ಸಂಖ್ಯೆಯಲ್ಲಿ ಭಕ್ತರು, ಯಾತ್ರಿಕರನ್ನು ಆಕರ್ಷಿಸಿವೆ. ಉಡುಪಿಯ ಕೊಲ್ಲೂರು, ಮಂಗಳೂರಿನ‌ ಮಂಗಳಾದೇವಿ ಕ್ಷೇತ್ರ ಸೇರಿದಂತೆ ಸಾಂಪ್ರದಾಯಿಕ ನವರಾತ್ರಿ ಆಚರಣೆ ಜಾರಿಯಲ್ಲಿರುವ ಕ್ಷೇತ್ರಗಳಲ್ಲಿಯೂ ಭಕ್ತ ಸಂದಣಿ ಹೆಚ್ಚಾಗಿತ್ತು.ನವರಾತ್ರಿ ದೀಪಾಲಂಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ಆಕರ್ಷಣೆಯಾಗಿತ್ತು. ನವರಾತ್ರಿಯಲ್ಲಿ ಶಾರದಾ ಪ್ರತಿಷ್ಟಾಪನೆ ಮಾಡಿದ ವಿವಿಧ ಮಂಡಳಿಗಳು ಶಾರದಾ ಮಾತೆ ವಿಸರ್ಜನೆಗೆ ತಯಾರಾಗಿವೆ. ಕುದ್ರೋಳಿಯಲ್ಲಿ ಲಕ್ಷಾಂತರ ಭಕ್ತರನ್ನು…

Read More
error: Content is protected !!