ಪೆಟ್ರೋಲ್‌ ಕಳ್ಳತನ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ.

ಬೆಳ್ತಂಗಡಿ: ನೆರಿಯ ಪೆಟ್ರೋನೆಟ್ ಪೈಪ್ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ತಮ್ಮಯ್ಯ(35) ಬಂಧಿತ ಆರೋಪಿ . ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.28 ರಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನನ್ನು ನೋಡಿ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಅವರು ವಶಕ್ಕೆ…

Read More

ಉಡುಪಿ: ಅ. 4ರಿಂದ 12ರವರೆಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸಪ್ತಾಹ

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಲಯನ್ಸ್ ಡಿಸ್ಟ್ರಿಕ್ಟ್ 317C – ಲಯನ್ಸ್ ಕ್ಲಬ್, ಮಣಿಪಾಲ್, ಮತ್ತು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಅ. 4ರಿಂದ 12ರವರೆಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಪ್ತಾಹದಲ್ಲಿ ಮಕ್ಕಳು, ಮಹಿಳೆಯರು, ವಯಸ್ಕರು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರನ್ನು ಎಲ್ಲರ…

Read More

ಕ್ರೀಡೆಗಳು ಮನೋಸ್ಥೈರ್ಯ ಹಾಗೂ ಶಾರೀರಿಕ ದೃಢತೆಯನ್ನು ಹೆಚ್ಚಿಸುತ್ತದೆ : ಶ್ರೀನಿವಾಸ್ ರಾವ್

ಆನೆಕಲ್ಲು: ” ಕ್ರೀಡೆಗಳು ಮಾನಸಿಕ ಸ್ಥೈರ್ಯದೊಂದಿಗೆ ಶಾರೀರಿಕ ದೃಢತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕ್ರೀಡಾ ತರಬೇತಿ ಉತ್ತಮ ರೀತಿಯಲ್ಲಿ ಸಿಗುವಂತಾಗಬೇಕು” ಎಂದು ಎ ಯು ಪಿ ಶಾಲೆ ಬಾಕ್ರಬೈಲ್ ನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ರಾವ್ ತಿಳಿಸಿದರು.ಅವರು ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಜರಗಿದ ಶಾಲಾ ಮಟ್ಟದ ಕ್ರೀಡೋತ್ಸವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ ಕುಮಾರಿ ಹರಿಣಾಕ್ಷಿ ಟೀಚರ್ ಮಾತನಾಡಿ ,”ಕ್ರೀಡೆಗಳು ಮಾನಸಿಕ ಒತ್ತಡವನ್ನು ನಿಯಂತ್ರಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.ಆದುದರಿಂದ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ…

Read More

ಕುದ್ರೋಳಿ ದಸರಾ ಅದ್ದೂರಿ ಶಾರದಾ ಮೆರವಣಿಗೆ ಅಕ್ಟೋಬರ್ ೨ ಕ್ಕೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಅ. 2ರಂದು ಅದ್ದೂರಿಯಾಗಿ ನಡೆಯಲಿದೆ . ಈಗಾಗಲೇ ಶೋಭಾಯಾತ್ರೆ ಗೆ ಪೂರ್ವ ಸಿದ್ದತೆಗಳು ನಡೆಸಲಾಗಿದೆ ಎನ್ನಲಾಗಿದೆ . ಸಂಜೆ 4ರಿಂದ ಶ್ರೀ ಶಾರದಾಂಬೆಯ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಡಲಿದೆ. ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ನಗರದಲ್ಲಿ ಸಾಗಿಬರಲಿದೆ. ಕುದ್ರೋಳಿ ಕ್ಷೇತ್ರದಿಂದ ಹೊರಟು ಕಂಬಾರ…

Read More

ಕಾಸರಗೋಡು: ಡಿವೈಎಫ್‌ಐ ಸಕ್ರಿಯ ನಾಯಕಿ , ಯುವ ವಕೀಲೆ ಆತ್ಮಹತ್ಯೆಗೆ ಶರಣು …. !

ಕಾಸರಗೋಡು: ಡಿವೈಎಫ್‌ಐ ನಾಯಕಿ ಹಾಗು ಯುವ ವಕೀಲೆ ರಂಜಿತಾ ಕುಮಾರಿ (30) ಮಂಗಳವಾರ ಸಂಜೆ ಕುಂಬ್ಳೆಯ ಬಥೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಹೇಳುವಂತೆ , ಅವರು ತಮ್ಮ ಕಚೇರಿಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಜೆಯಿಂದ ಅವರಿಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕುಟುಂಬ ಸದಸ್ಯರು ಅವರ ಕಚೇರಿಗೆ ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡುಕೊಂಡರು. ಅವರು ಪೊಲೀಸರಿಗೆ ಮಾಹಿತಿ…

Read More

ರಾಹುಲ್ ಗಾಂಧಿ ವಿರುದ್ಧ ಕೊಲೆ ಬೆದರಿಕೆ-ರಣಹೇಡಿ ಬಿಜೆಪಿ – ಸಿಪಿಎಂ ಸಖ್ಯ ಬಹಿರಂಗ – ಕಾಂಗ್ರೆಸ್

ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹಾರಿಸುವುದಾಗಿ ಚಾನೆಲ್ ಚರ್ಚೆಯಲ್ಲಿ ಬಹಿರಂಗ ಬೆದರಿಕೆಯೊಡ್ಡಿದ ಬಿಜೆಪಿಯ ಕೇರಳ ವಕ್ತಾರನ ವಿರುದ್ಧ ಪಿಣರಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಿಣರಾಯಿ ವಿಜಯನ್ ಹಾಗೂ ಕುಟುಂಬದ ಸಹಸ್ರ ಭಾನಗಡಿಗಳನ್ನು ಮುಚ್ಚಿ ಹಾಕಲು ಕೇಂದ್ರದ ಮೋದಿ ಸರ್ಕಾರ ಕೈ ಜೋಡಿಸಿದ ಕಾರಣ ಇಲ್ಲಿ ಪಿಣರಾಯಿ ಗೃಹ ಇಲಾಖೆಯನ್ನು ಸಂಘಿಗಳ ಕೈಗೊಪ್ಪಿಸಿದ್ದಾರೆ.ರಾಹುಲ್ ಗಾಂಧಿಯವರ ನಿರ್ಭೀತ ಹೋರಾಟಗಳು ಬಿಜೆಪಿಯ ನಿದ್ದೆಗೆಡಿಸಿವೆ. ಚಾನೆಲ್ ಚರ್ಚೆಯಲ್ಲಿ ಬಿಜೆಪಿ ವಕ್ತಾರ ಪಿಂಟು ಮಹಾದೇವ ಎಂಬ…

Read More

ಜೆಪ್ಪು ಮಹಾಕಾಳಿಪಡ್ಡು ಅಂಡರ್ಬ್ರಿಜ್ ಕಾಮಗಾರಿ ಪೂರ್ಣಗೊಳ್ಳದೇ ಉಂಟಾಗಿರುವ ತೊಂದರೆಯ ಬಗ್ಗೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರೈಲ್ವೆ ಇಲಾಖೆಯ ನಿಧಾನಗತಿಯ ಕಾಮಗಾರಿಯನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು :ಜೆಪ್ಪು ಮಹಾಕಾಳಿಪಡ್ಡು ಅಂಡರ್ಬ್ರಿಜ್ ಕಾಮಗಾರಿ ಪೂರ್ಣಗೊಳ್ಳದೇ ಉಂಟಾಗಿರುವ ತೊಂದರೆಯ ಬಗ್ಗೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರೈಲ್ವೆ ಇಲಾಖೆಯ ನಿಧಾನಗತಿಯ ಕಾಮಗಾರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕಳೆದ 4 ವರ್ಷಗಳ ಹಿಂದೆ ಜೆಪ್ಪು ಮಹಾಕಾಳಿಪಡ್ಡು ಅಂಡರ್ಬ್ರಿಜ್ ಕಾಮಗಾರಿ ಪೂರ್ಣಗೊಂಡಿದ್ದರೂ, ಇನ್ನು ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಡದೇ ಇದ್ದು ಇಲ್ಲಿ ನೀರು ತುಂಬಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಬಗ್ಗೆ ದೂರುಗಳು ಇದ್ದರೂ ರೈಲ್ವೆ ಇಲಾಖೆಯವರು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡದೇ ಇರುವುದನ್ನು ಖಂಡಿಸಿ ಮಂಗಳೂರು ದಕ್ಷಿಣ ಬ್ಲಾಕ್…

Read More

ಕೃಷಿಕ ಧೂಮಪ್ಪ ಬೆಳ್ಚಡ ನಿಧನ -ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ

ಮಂಜೇಶ್ವರ : ವರ್ಕಾಡಿ ಕೊಡ್ಲಮೊಗರು ಪಜ್ವ ಸಂಕಪ್ಪ ಬೆಳ್ಚಡ ಹಾಗೂ ಕಲ್ಯಾಣಿ ಅವರ ಪುತ್ರ (೬೯) ಧೂಮಪ್ಪ ಬೆಳ್ಚಡ ಕೃಷಿ ಕ 30-09-2025 ರಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಪಾರ್ವತಿ ಮಕ್ಕಳಾದ ಸುಕುಮಾರ್ ಪಜ್ವ ಚಂದ್ರಶೇಖರ ಪಜ್ವ ಸಹೋದರರಾದ ಪದ್ಮನಾಭ ಪಜ್ವ ದಾಮೋದರ ಪಜ್ವ ಸಹೋದರಿಯಾರಾದ ಗಿರಿಜಾ. ಸೀತಾಮ್ಮ. ಹೇಮಾವತಿ ದೇವಕಿ. ಅವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರುಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯ ಸಂಸ್ಕಾರ…

Read More

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು.

ಬೆಂಗಳೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮಂಗಳವಾರ ಖರ್ಗೆ ಅವರು ಉತ್ಸಾಹದಿಂದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. 83 ರ ಹರೆಯದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗಾಗಿ ದಾಖಲಿಸಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಕೆಂಪು ಕಲ್ಲಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ – ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.

ಪುತ್ತೂರು:ಕೆಂಪು ಕಲ್ಲಿನ ವಿಚಾರದಲ್ಲಿ ಜನರಿಗೆ ಗೊಂದಲಗಳಿತ್ತು.ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಕೆಂಪು ಕಲ್ಲು ತೆಗೆಯುವ ಎಲ್ಲಾ ಸಂಘದ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ.ಹೊಸ ಲೈಸನ್ಸ್ ಹಾಗೂ ಲೈಸನ್ಸ್‌ಗಳ ನವೀಕರಣವೂ ಮಾಡಲಾಗುತ್ತಿದೆ.ಇನ್ನು ಮುಂದೆ ಯಾರು ಕೂಡ ಲೈಸನ್ಸ್ ಪಡೆದು ಕೆಂಪು ಕಲ್ಲಿನ ವ್ಯವಹಾರ ನಡೆಸಬಹುದು ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಹೇಳಿದರು. ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ ನಂತರ ಕೆಂಪು ಕಲ್ಲು ತೆಗೆಯುವವರ ಸಂಘಗಳ ಸದಸ್ಯರ ಸಭೆಯನ್ನು ಕರೆದಾಗ…

Read More
error: Content is protected !!