ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬ

ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ಎಲ್ಲರಲ್ಲೂ ಇದೆ. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ ಮೋರೆಯಲ್ಲಿ ಶಾಲೆ ಕಡೆ ಹೆಜ್ಜೆ ಹಾಕುವ ಮಕ್ಕಳು ಶಾಲೆಯಲ್ಲಿ ಮತ್ತೆ ನಿತ್ಯದ ಪಾಠ ನೋಟ್ಸ್ ಗಳಲ್ಲಿ ಒಗ್ಗಿಕೊಳ್ಳಲು ಸ್ವಲ್ಪ ದಿನಗಳಾದರು ಬೇಕೆನ್ನುವುದು ಸಾಮಾನ್ಯ ಸಂಗತಿ. ಮಕ್ಕಳು ಸಂತಸದ ಕಲಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಮತ್ತು ಇಷ್ಟಪಟ್ಟು ಓದಿಕೊಳ್ಳುವಂತಾಗಬೇಕೆನ್ನುವ ಉದ್ದೇಶದಿಂದ ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಮಳೆ ಹಬ್ಬ…

Read More

ರಂಗೋತ್ಸವ ಸಂವಿಧಾನ ಶಿಲ್ಪಿಗೆ, ಹಸಿರು ಕ್ರಾಂತಿಯ ಹರಿಕಾರರಿಗೆ ನೀಡಿದ ಅಪೂರ್ವ ಗೌರವ: ಡಾ. ಸಿ. ಸೋಮಶೇಖರ್

ಬೆಂಗಳೂರು: ಕಳೆದ ನಾಲ್ಕೂವರೆ ದಶಕಗಳಿಂದ ವಿ .ಕೆ.ಎಂ ಕಲಾವಿದರು ಸಂಸ್ಥೆಯಿಂದ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದು ಸಂವಿಧಾನ ಶಿಲ್ಪಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಿಬ್ಬರಿಗೂ ನೀಡಿದ ಅಪೂರ್ವ ಗೌರವಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ ಸೋಮಶೇಖರ್ ಅಭಿಪ್ರಾಯಪಟ್ಟರು. ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಿರತರ 45 ನೇ ವರ್ಷದ ರಂಗೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ…

Read More

ಅಪಾಯದ ಸ್ಥಿತಿಯಲ್ಲಿದ್ದ ಶಾಲೆ, ಅಂಗನವಾಡಿ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಆದೇಶ

​ಮಂಜೇಶ್ವರ: ಅಪಾಯದ ಸ್ಥಿತಿಯಲ್ಲಿರುವ ಉದ್ಯಾವರ ತೊಟ್ಟ ಸರಕಾರಿ ಮುಸ್ಲಿಂ ಎಲ್.ಪಿ. ಶಾಲೆ ಮತ್ತು ಅಂಗನವಾಡಿಯ ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಿ, ಅಲ್ಲಿ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.ಈ ಬಗ್ಗೆ ಕೆಲ ದಿನಗಳ ಹಿಂದೆ ನಮ್ಮ ಮೀಡಿಯಾ ಸಮಗ್ರ ವರದಿಯನ್ನು ಬಿತ್ತರಿಸಿ ಸಂಬಂದಪಟ್ಟವರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ​ಅಸುರಕ್ಷಿತ ಕಟ್ಟಡದಲ್ಲಿ ಶಾಲೆ ನಡೆಯುತ್ತಿರುವ ಕುರಿತಾದ ದೂರಿನ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯಿಂದ ವರದಿ ಪಡೆದಿದ್ದರು….

Read More

ಅಪ್ಪನ ಕೈ ಮೇಲಿರಲಿ… ಮೊದಲ ಸಂಬಳದ ಹಿಂದೆ ಅಡಗಿದ ಕಣ್ಣೀರು…!

ಇಂಜಿನಿಯರಿಂಗ್‌ ಓದಿ ಉದ್ಯೋಗ ಪಡೆದು, ಜೀವನದ ಮೊದಲ ಸಂಬಳ ಕೈಗೆ ಬಂದ ದಿನ. ಅವನ ಕಣ್ಣುಗಳಲ್ಲಿ ಸಂತೋಷದ ಹೊಳಪು, ಹೃದಯದಲ್ಲಿ ಕೃತಜ್ಞತೆಯ ಅಲೆ. ಮನೆಗೆ ಬಂದು ಆ ಸಂಬಳವನ್ನು ತಾಯಿಯ ಕೈಯಲ್ಲಿಟ್ಟು, ಅಮ್ಮಾ… ಇದನ್ನು ಅಪ್ಪನಿಗೆ ಕೊಡಿ ಎಂದನು. ಆಗ ತಾಯಿ ಮೃದುವಾಗಿ ನಗುತ್ತಾ ಹೇಳಿದಳು: ಮಗನೇ, ನೀನೇ ನಿನ್ನ ಕೈಯಿಂದ ಕೊಡು. ಅದು ನಿನ್ನ ಅಪ್ಪನಿಗೆ ತುಂಬಾ ಸಂತೋಷ ಕೊಡುತ್ತದೆ… ಆದರೆ ಮಗನ ಕಣ್ಣುಗಳು ತೇವಗೊಂಡವು. ಗಂಟಲು ಬಿಗಿಯಿತು. ನಿಧಾನವಾಗಿ ಹೇಳಿದನು: “ಇಲ್ಲ ಅಮ್ಮಾ… ನೀವೇ…

Read More

“ಪತಿದೇವರು”

ಒಂದು ಊರಲ್ಲಿ ಗಂಡ ಹೆಂಡತಿ ಇದ್ರು, ಹೆಂಡತಿ ಜಗಳಗಂಟಿಯಾಗಿದ್ದಳು, ಪ್ರತೀ ದಿನ ಯಾವುದಾದರೂ ಒಂದು ಕಾರಣ ಇಟ್ಕೊಂಡು, ಗಂಡನ ಜೊತೆಗೆ ಜಗಳ ಮಾಡುತ್ತಿದ್ದಳು,ಕಾರಣ ಅವಳು ತಂದೆ ತಾಯಿ ಮುದ್ದಿನಿಂದ ಸಾಕಿದ ಅವರ ಒಬ್ಬಳೇ ಮಗಳು, ನನ್ನನ್ನು ಗಂಡ ಬಿಟ್ಟರೂ ಕೊನೆವರೆಗೂ ಹೆತ್ತವರು ನೋಡಿಯಾರು ಎಂಬ ಭ್ರಮೆ ಅವಳ ಮನಸ್ಸಿನಲ್ಲಿತ್ತು ಹೀಗೆ ಮುಂದುವರಿದು ಒಂದು ದಿನ ಗಂಡನಲ್ಲಿ ಜಗಳ ಮಾಡ್ತಾ ಇರಬೇಕಾದ್ರೆ ಇವಳಿಗೆ ಎದೆ ನೋವು ಸುರು ಆಯ್ತು, ಗಂಡನಲ್ಲಿ ಹೇಳದೆ ತವರು ಮನೆಗೆ ಹೋಗಿ ಹೆತ್ತವರ ಜೊತೆ…

Read More

ಮುಜಫರಾಬಾದ್‌ನಲ್ಲಿ ಪಾಕಿಸ್ತಾನ ಸೇನಾ ಹೆಲಿಕಾಪ್ಟರ್ ಪತನ: 21 ಸೈನಿಕರು ದುರ್ಮರಣ

ಮುಜಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫರಾಬಾದ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಗೆ ಸೇರಿದ ಎಂಐ-17 (Mi-17) ಹೆಲಿಕಾಪ್ಟರ್ ಪತನಗೊಂಡ ಪರಿಣಾಮ 21 ಸೈನಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ದುರ್ಘಟನೆಯು ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯ ಹಾಗೂ ವಾಯುಯಾನ ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಮಿಲಿಟರಿ ಸಿಬ್ಬಂದಿಯೂ ಮೃತಪಟ್ಟಿದ್ದು, ಯಾರೂ ಬದುಕುಳಿದಿಲ್ಲ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಐಎಸ್‌ಪಿಆರ್ (ISPR) ತಿಳಿಸಿದೆ. ಅಪಘಾತ ಸಂಭವಿಸಿದ ತಕ್ಷಣ ರಕ್ಷಣಾ ಮತ್ತು ಪರಿಹಾರ ತಂಡಗಳು…

Read More

ನಾಡೋಜ ಕವಿ ಡಾ. ಕಯ್ಯಾರ ಕಿನ್ಹಣ್ಣ ರೈ ಸ್ಮಾರಕ ಸಾಂಸ್ಕೃತಿಕ ಭವನ ವೀಕ್ಷಿಸಿದ ಶಾಸಕ ಕಲ್ಲಟ್ರ ಮಾಹಿನ್ ಹಾಜಿ

ಕಾಸರಗೋಡು, ಜೂ.11: ಕರ್ನಾಟಕ ಏಕೀಕರಣ ಹೋರಾಟಗಾರ, ನಾಡೋಜ ಕವಿ ಡಾ. ಕಯ್ಯಾರ ಕಿನ್ಹಣ್ಣ ರೈ ಅವರ ಸ್ಮರಣಾರ್ಥ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡು ಜಿಲ್ಲೆಯ ಪೆರಡಾಳದಲ್ಲಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ಕಾಸರಗೋಡಿನ ನೂತನ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಭೇಟಿ ನೀಡಿ ವೀಕ್ಷಿಸಿದರು. ಭವನದ ನಿರ್ಮಾಣ, ಸೌಲಭ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾದ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದ ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಭವನದ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ…

Read More

ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಸಾವು

ಉಡುಪಿ: ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ ಸಮೀಪ ಹೆರಂಜೆಯಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ದಕ್ಷ್ ಪೂಜಾರಿ (1.5) ಎಂದು ಗುರುತಿಸಲಾಗಿದೆ. ಈತ ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದಾನೆ. ದಕ್ಷ್ ಗೆ ದಿಯಾ (6) ಎಂಬ ಅಕ್ಕ ಇದ್ದು, ಆಕೆ ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಪ್ರಶಾಂತ್ ಪೂಜಾರಿ ಅವರು ಕಳೆದ ಸುಮಾರು…

Read More

ಪರಮ ಏಕಾದಶಿ ವೈಭವ: ಶ್ರೀ ವಿಠೋಭ ರುಕುಮಾಯಿ ಸನ್ನಿಧಿಯಲ್ಲಿ ಭಕ್ತಿಸಾಗರ

ಮಂಗಳೂರು, ಜೂ.11: ಅಧಿಕ ಮಾಸದ ಪವಿತ್ರ ಪರಮ ಏಕಾದಶಿ ಪ್ರಯುಕ್ತ ಮಂಗಳೂರಿನ ವಿ.ಟಿ. ರಸ್ತೆಯ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಭಕ್ತಿ, ಸಂಭ್ರಮ ಹಾಗೂ ವೈಭವ ಮನೆ ಮಾಡಿದೆ. ಶ್ರೀ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ಪರಮ ಏಕಾದಶಿಯ ಅಂಗವಾಗಿ ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ದೇವರಿಗೆ ಪ್ರಿಯವಾದ ವಿವಿಧ ತರಕಾರಿ, ಹಣ್ಣು-ಹಂಪಲು ಹಾಗೂ ಸುಂದರ ಪುಷ್ಪಗಳಿಂದ ಸಿಂಗಾರಗೊಂಡಿರುವ ಶ್ರೀ ವಿಠೋಭ ರುಕುಮಾಯಿ ದೇವರ ದಿವ್ಯ ಅಲಂಕಾರ ಭಕ್ತರನ್ನು ಆಕರ್ಷಿಸುತ್ತಿದೆ. ಬೆಳಿಗ್ಗೆಯಿಂದಲೇ ವಿವಿಧ ಭಜನಾ ಮಂಡಳಿಗಳ ಸಂಕೀರ್ತನೆಯ ನಾದದೊಂದಿಗೆ ದೇವಳದಲ್ಲಿ…

Read More

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೆಸ್ಕಾಂ ಸಿಬ್ಬಂದಿಗೆ ಹೃದಯಾಘಾತ: ಉದ್ಯೋಗಿ ಸಾವು

ಬಂಟ್ವಾಳ, ಜೂ.11: ಕರ್ತವ್ಯದಲ್ಲಿದ್ದ ವೇಳೆ ಮೆಸ್ಕಾಂ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು–ಕುಂದಾಯಗೋಳಿ ಪ್ರದೇಶದಲ್ಲಿ ನಡೆದಿದೆ. ಮೂಲತಃ ಮಿತ್ತೂರು ನಿವಾಸಿ ಚಂದ್ರಶೇಖರ ನಾಯ್ಕ (55) ಮೃತ ದುರ್ದೈವಿ. ಅವರು ಮೆಸ್ಕಾಂ ಪಾಣೆಮಂಗಳೂರು ಶಾಖೆಯಲ್ಲಿ ಸಹಾಯಕ ಮೆಕ್ಯಾನಿಕ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಾಹ್ನ ವೇಳೆ ಶಂಭೂರು ಸಮೀಪದ ಕುಂದಾಯಗೋಳಿಯಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಚಂದ್ರಶೇಖರ ನಾಯ್ಕ ಅವರು ಸಹೋದ್ಯೋಗಿಗಳೊಂದಿಗೆ ಕಂಬ…

Read More
error: Content is protected !!