ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಮಾನ್ಯತೆ ಐತಿಹಾಸಿಕ ಹೆಜ್ಜೆ: ತಾರಾನಾಥ ಗಟ್ಟಿ ಕಾಪಿಕಾಡ್

ಮಂಗಳೂರು: ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಿರುವುದು ತುಳುನಾಡಿನ ಇತಿಹಾಸದಲ್ಲಿ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯಾಗಿದೆ. ಈ ನಿರ್ಧಾರಕ್ಕಾಗಿ ಸಮಸ್ತ ತುಳುವರ ಪರವಾಗಿ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು. ತುಳು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ದ್ರಾವಿಡ ಭಾಷಾ ವಲಯದಿಂದ ಸ್ವತಂತ್ರವಾಗಿ ಬೆಳವಣಿಗೆ ಹೊಂದಿದ ಸಮೃದ್ಧ ಭಾಷೆಯಾಗಿದೆ. 1856ರಲ್ಲಿ ಭಾಷಾ ವಿಜ್ಞಾನಿ…

Read More

ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ: ಸಂತಸ ವ್ಯಕ್ತಪಡಿಸಿದ ಲೋಕೇಶ್ ಕುಲಾಲ್

ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಅಂಗೀಕರಿಸಿರುವುದು ಸಂತಸದ ವಿಚಾರವಾಗಿದೆ. ಈ ನಿರ್ಧಾರದಿಂದ ತುಳುವರ ಬಹುಕಾಲದ ಆಶಯಕ್ಕೆ ಮಾನ್ಯತೆ ದೊರೆತಿದ್ದು, ಭಾಷೆಯ ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ರಾಜಕೇಸರಿ ಸೇವಾ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಹೇಳಿದರು. ಸಮಾಜ ಸೇವೆಯ ಭಾಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಸಂಪೂರ್ಣ ನವೀಕರಿಸಿ ನೀಡುವ ಕಾರ್ಯವನ್ನು ಕೈಗೊಂಡಿರುವುದಾಗಿ ತಿಳಿಸಿದ ಅವರು, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ…

Read More

ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ಐತಿಹಾಸಿಕ ಹೆಜ್ಜೆ: ಸಂತೋಷ್ ಕುಮಾರ್ ಕೊಲ್ಯ

ಮಂಗಳೂರು: ತುಳು ಭಾಷೆಗೆ ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಎರಡನೇ ಸ್ಥಾನಮಾನ ನೀಡಿರುವುದು ತುಳುನಾಡಿನ ಜನತೆಗೆ ಐತಿಹಾಸಿಕ ಹಾಗೂ ಸಂಭ್ರಮದ ಕ್ಷಣವಾಗಿದೆ ಎಂದು ರಾಜಕೇಸರಿ ಸೇವಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಹೇಳಿದರು. ತುಳುವಿಗೆ ಅಧಿಕೃತ ಸ್ಥಾನಮಾನ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ವೈಯಕ್ತಿಕವಾಗಿ ಹಾಗೂ ರಾಜಕೇಸರಿ ಸೇವಾ ಟ್ರಸ್ಟ್ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು, ಈ ನಿರ್ಧಾರಕ್ಕಾಗಿ ಹಲವು ವರ್ಷಗಳಿಂದ ಹೋರಾಡಿದ ತುಳುಪರ ಸಂಘಟನೆಗಳು, ಸಾಹಿತಿಗಳು,…

Read More

ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಸ್ವಾಗತಾರ್ಹ: ಶಿವಪ್ರಸಾದ್ ಶೇಟ್

ಮಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವುದು ತುಳುನಾಡಿನ ಜನರ ಬಹುಕಾಲದ ಆಶಯಕ್ಕೆ ದೊರೆತ ಮಾನ್ಯತೆಯಾಗಿದೆ. ಈ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ‘ಗಿವ್ ಬ್ಯಾಕ್ ನಾಗರಿಕ ಅಭಿಯಾನ’ದ ಬೆಂಗಳೂರು ಸ್ಥಾಪಕಾಧ್ಯಕ್ಷ ಹಾಗೂ 2021-22ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಶೇಟ್ ಹೇಳಿದರು. ತುಳು ಭಾಷೆಗೆ ಆಡಳಿತಾತ್ಮಕ ಬಳಕೆಯ ಅವಕಾಶ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಜನಪ್ರತಿನಿಧಿಗಳು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಹಾಗೂ ಜನರ ಬೇಡಿಕೆಗಳನ್ನು ತುಳು ಭಾಷೆಯಲ್ಲೇ ಪರಿಣಾಮಕಾರಿಯಾಗಿ ಮಂಡಿಸಲು ಇದರಿಂದ…

Read More

ಮಸ್ಕತ್ ಇಂಡಿಯನ್ ಸ್ಕೂಲ್ ಬಾಸ್ಕೆಟ್‌ಬಾಲ್ ತಂಡಕ್ಕೆ ಮಂಜೇಶ್ವರದ ಅನೋಕಿ ಆರ್. ನಾಯಕಿ

ಮಂಜೇಶ್ವರ: ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟಕ್ಕೆ ಓಮನ್ ದೇಶದ ಮಸ್ಕತ್ ಇಂಡಿಯನ್ ಸ್ಕೂಲ್ ತಂಡದ ನಾಯಕಿಯಾಗಿ ಮಂಜೇಶ್ವರದ ಅನೋಕಿ ಆರ್. ಆಯ್ಕೆಯಾಗಿದ್ದಾರೆ. ಮಂಜೇಶ್ವರ ಹೊಸಂಗಡಿ ಅಂಗಡಿಪದವು ನಿವಾಸಿಗಳಾದ ಅಶ್ವಿನಿ ಮತ್ತು ರೋಹಿದಾಸ್ ಬಿ.ಎಂ. ದಂಪತಿಯ ಪುತ್ರಿಯಾಗಿರುವ ಅನೋಕಿ ಆರ್. ಪ್ರಸ್ತುತ ಕುಟುಂಬದೊಂದಿಗೆ ಮಸ್ಕತ್‌ನಲ್ಲಿ ವಾಸವಾಗಿದ್ದು, ಮಸ್ಕತ್ ಇಂಡಿಯನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 21ರಿಂದ ಬಿಹಾರದಲ್ಲಿ ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟ ನಡೆಯಲಿದ್ದು, ವಿಶ್ವದ ವಿವಿಧ ದೇಶಗಳ ಇಂಡಿಯನ್ ಸ್ಕೂಲ್ ತಂಡಗಳು ಸೇರಿದಂತೆ ಭಾರತದ ಕೇಂದ್ರೀಯ ತಂಡ…

Read More

ಜಮೀರ್ ಅಹ್ಮದ್ ಖಾನ್ ವಿರುದ್ಧದ ಹೇಳಿಕೆ ಹಿಂಪಡೆಯಲಿ: ಸಿರಾಜ್ ಬಜ್ಪೆ

ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ಅವರು ಸಚಿವ ಹಾಗೂ ಸಮುದಾಯದ ನಾಯಕ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಅಹಿಂದ ಚಳುವಳಿಯ ಜಿಲ್ಲಾ ಮುಖ್ಯ ಸಂಚಾಲಕ ಸಿರಾಜ್ ಬಜ್ಪೆ ಮನವಿ ಮಾಡಿದ್ದಾರೆ . ಹಜ್ ಭವನದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ ಭವನ ನಿರ್ಮಾಣಕ್ಕಾಗಿ ಜಾಗವನ್ನು ದಾನ ಮಾಡಿದ ಇನಾಯತ್ ಅಲಿ…

Read More

ಮೂರು ಗಂಟೆಗಳಲ್ಲಿ ಬದಲಾಯ್ತು ಚಿತ್ರಣ: ಕಸದ ಕೊಂಪೆಯಾಗಿದ್ದ ಎರಡು ಬಸ್ ನಿಲ್ದಾಣಗಳಿಗೆ “ಮೀಡಿಯಾ ಮನಸು”ಗಳಿಂದ ಸಿಕ್ಕಿತು ಮರುಜೀವ!

ಸುರತ್ಕಲ್: ನಿತ್ಯ ನೂರಾರು ಪ್ರಯಾಣಿಕರು ಬಂದು ಹೋಗುವ ಬಸ್ ನಿಲ್ದಾಣ. ಅತ್ತ ದಿನದ ಹಿಂದಷ್ಟೇ ನಗರಪಾಲಿಕೆ ಸ್ವಚ್ಛತಾ ಕಾರ್ಮಿಕರು ಸುತ್ತಲೂ ಬೆಳೆದಿದ್ದ ಹುಲ್ಲನ್ನೇನೋ ಕತ್ತರಿಸಿ ತಮ್ಮ ಜವಾಬ್ದಾರಿ ಮುಗಿಸಿದ್ದರು. ಆದರೆ, ಬಸ್ಸಿಗಾಗಿ ಕಾಯುವ ಸಾರ್ವಜನಿಕರು ನಿಲ್ದಾಣದೊಳಗೆ ಕಾಲಿಟ್ಟರೆ ಒಂದೆರಡು ನಿಮಿಷ ಕುಳಿತುಕೊಳ್ಳಲೂ ಸಾಧ್ಯವಾಗದಷ್ಟು ಅಸಹ್ಯಕರ ವಾತಾವರಣ ಅಲ್ಲಿಸಿತ್ತು. ಇಂತಹ ಸ್ಥಿತಿಯನ್ನು ಕಂಡು ಸುಮ್ಮನೆ ಮುಖ ತಿರುಗಿಸಿ ಹೋಗದೆ, ಜವಾಬ್ದಾರಿಯುತ ನಾಗರಿಕನೊಬ್ಬ ಈ ಸಮಸ್ಯೆಯನ್ನು ‘ಮೀಡಿಯಾ ಮನಸುಗಳು’ ತಂಡದ ಗಮನಕ್ಕೆ ತಂದರು. ಅಲ್ಲಿಂದ ಶುರುವಾಗಿದ್ದೇ ನೋಡಿ ನಿಜವಾದ ಬದಲಾವಣೆಯ…

Read More

ಕೌಟುಂಬಿಕ ಕಲಹದ ಹಿನ್ನೆಲೆ: ವ್ಯಕ್ತಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಪೆರಬೆ ಗ್ರಾಮದ ಎರ್ಮಾಳ ಅರಣ್ಯದಲ್ಲಿ ಗುರುವಾರ ರಾತ್ರಿ ನಡೆದಿದೆ. ಆತ್ಮ ಹತ್ಯೆ ಮಾಡಿಕೊಂಡವರನ್ನು ಪೆರಾಬೆ ಗ್ರಾಮದ ಇಡಾಳ ಕೋಡಿಯಡ್ಕ ನಿವಾಸಿ ಶೇಖರ ಗೌಡ(೪೪) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸಂಸಾರದಲ್ಲಿ ಒಡಕು ಮೂಡಿ ಪತಿ ಹಾಗೂ ಪತ್ನಿ ಮಧ್ಯೆ ಸಂಘರ್ಷ ಉಂಟಾಗಿತ್ತು. ಇದರಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ಗಂಗಾಧರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆತ್ಮ ಹತ್ಯೆ ಮಡಿಕೊಂಡಿರುವ ಶೇಖರ ಗೌಡ ಸಾಮಾಜಿಕವಾಗಿ…

Read More

ಮೀನುಗಾರಿಕೆ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಸಿಎಂ

ಮಂಗಳೂರು: ಮೀನುಗಾರಿಕೆ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮೀನುಗಾರರು, ಮೀನು ಮಾರಾಟಗಾರರು, ವರ್ತಕರು ಹಾಗೂ ಜೆಟ್ಟಿ ಪ್ರದೇಶಗಳ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಹಲವು ಬೇಡಿಕೆಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಮೀನುಗಾರಿಕಾ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವ್ಯವಹಾರ ಚಟುವಟಿಕೆಗಳನ್ನು ಅಕ್ರಮವಾಗಿ ಸ್ಥಗಿತಗೊಳಿಸಿರುವುದು ಕಂಡುಬಂದರೆ ತನಿಖೆ…

Read More

ವಿರಾಜ್ ಅಡೂರ್‌ಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ಪುರಸ್ಕಾರ……!

ಕಾಸರಗೋಡು: ಜಿಲ್ಲೆಯ ಖ್ಯಾತ ಕವಿ ವಿರಾಜ್ ಅಡೂರ್ ಅವರು ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಅ.11ರಿಂದ 20ರವರೆಗೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ‘ಕಾಸರಗೋಡು ದಸರಾ ಕವಿ ಸಮ್ಮೇಳನ’ದಲ್ಲಿ ವಿರಾಜ್ ಅಡೂರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಸಾಹಿತ್ಯ ಸಂಘಟಕ ಬಿ….

Read More
error: Content is protected !!