ದುಬೈಗೆ ಹೋಗುವ ಮಂಜೇಶ್ವರ ಶಾಸಕರಿಗೆ ದೇರಂಬಲ ಸೇತುವೆ ನೋಡಲು ಸಮಯವಿಲ್ಲ -ಆದರ್ಶ ಬಿ ಎಂ

ಮಿಯಪದವು : ಮಂಜೇಶ್ವರ ಶಾಸಕರು ಮಂಜೇಶ್ವರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತಿಲ್ಲ… ಪ್ರತಿ ತಿಂಗಳು ದುಬೈಗೆ ಹೋಗುವ ಮಂಜೇಶ್ವರ ಶಾಸಕರಿಗೆ ದೇರಂಬಳ ಸೇತುವೆ ಅನಾಸ್ಥೆ ನೋಡಲು ಸಮಯ ವಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಆದರ್ಶ ಬಿ ಎಂ ಶಾಸಕರ ಬೇಜವಾಬ್ದಾರಿ ಯನ್ನು ಖಂಡಿಸಿದರು.

ಮೀoಜ – ಪೈವಳಿಕೆ -ಮಂಗಲ್ಪಾಡಿ ಸಂಪರ್ಕ ದೇರಂಬಳ ಸೇತುವೆ ಸಂಚಾರಕ್ಕೆ ಅಯೋಗ್ಯವಾಗಿ 4 ವರ್ಷ ಕಳೆಯಿತು.. ಮಂಜೇಶ್ವರ ಶಾಸಕರು ಕಣ್ಣಿದ್ದು ಕುರುಡರಂತೆ ವರ್ತಿಸುವುದು ಬೇಜವಾಬ್ದಾರಿ ಮಾತ್ರ ಅಲ್ಲ ಅಹಂಕಾರದ ಪರಮಾವಾದಿ ಎಂದು ಆದರ್ಶ ಬಿ ಎಂ ಪ್ರತಿಕ್ರಿಯಿಸಿದರು.

ಮತದಾನ ಮಾಡುವಾಗ ಜನತೆ ಚಿಂತಿಸ ದಿದ್ದರೆ ಇದೆಲ್ಲ ನಡೆಯುತ್ತೆ..
ಕುರುಡಪದವು – ಲಾಲ್ಬಾಗ್ Pwd ರಸ್ತೆ, ಬಾಯರ್ -ಕನಿಯಲ ರಸ್ತೆಆಗಿ ತಿಂಗಳು ಆಗುವ ಮೊದಲೇ ನಾಶವಾಗಿದೆ ,
ದೇರಂಬಳ ಸೇತುವೆ, ಮುನ್ನಿಪಾಡಿ ಸೇತುವೆ ಅಪಾಯವನ್ನು ಕರೆಯುತಿದೆ ಶಾಸಕರರು ಪರಿಹಾರ ಕಾಣುವ ಬದಲು ವಿದೇಶದಲ್ಲಿ ಸುತ್ತುತಿದ್ದಾರೆ ಎಂದು ಅವರು ಆರೋಪಿಸಿದರು
ಬಿಜೆಪಿ ಮಂಜೇಶ್ವರ ಮಂಡಲ ಪೈವಳಿಕೆ,ಮೀoಜ, ವರ್ಕಾಡಿ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ನಾಯಕರಾದ ಮಣಿಕಂಠ ರೈ, ಹರೀಶ್ ನರಂಪಾಡಿ, ಚಂದ್ರವತಿ ಶೆಟ್ಟಿ, ಸಲೀಲ್ ಮಾಸ್ಟರ್, ಸತ್ಯಶಂಕರ್ ಭಟ್, ಗಣೇಶ ಪ್ರಸಾದ್ ನಾಯ್ಕ್, ಭಾಸ್ಕರ್ ಪೊಯ್ಯೇ, ಚಂದ್ರಹಾಸ್ ಬೇಜ್ಜ, ಕೆ ವಿ ಭಟ್, ತುಳಸಿ ಕುಮಾರಿ, ಮೊದಲದವರು ಉಪಸ್ಥಿತರಿದ್ದರು ಯತೀರಾಜ್ ಶೆಟ್ಟಿ ಸ್ವಾಗತಿಸಿ -ನವೀನ್ ಬೇಜ್ಜ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!