ಮರಳು ಮಾಫಿಯಾಗಳೊಂದಿಗೆ ನಂಟು : ಕುಂಬಳೆ ಠಾಣೆಯ ಆರು ಪೊಲೀಸರ ಅಮಾನತು
ಮಂಜೇಶ್ವರ : ಮರಳು ಮಾಫಿಯಾಗಳೊಂದಿಗೆ ನಂಟು ಬೆಳೆಸಿ ಕೊಂಡು ಪೊಲೀಸಿನ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವುದನ್ನು ಪತ್ತೆ ಹಚ್ಚಿ ಕುಂಬಳೆ ಪೊಲೀಸ್ ಠಾಣೆಯ ಐದು ಪೊಲೀಸರನ್ನು ಹಾಗೂ ಇಲ್ಲಿಂದ ವರ್ಗಾವಣೆಗೊಂಡ ಒಂದು ಪೊಲೀಸನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ನಿರ್ದೇಶದಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕುಂಬಳೆ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಅಬ್ದುಲ್ ಸಲಾಂ, ಮನು, ಲಿನೇಶ್, ಅನೂಪ್, ಚಾಲಕ ಕೃಷ್ಣ ಪ್ರಸಾದ್ ಹಾಗೂ ಕುಂಬಳೆ ಠಾಣೆಯಿಂದ ಇತ್ತೀಚೆಗೆ ವರ್ಗಾವಣೆಗೊಂಡ ವಿನೋದ್ ಕುಮಾರ್ ಎಂಬಿವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ….