ಪ್ರಶಾಂತಿಯಲ್ಲಿ ದೈವಿಕ ಅನುಗ್ರಹದೊಂದಿಗೆ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭ
ಬಾಯಾರು, ಜೂನ್ 2: ಬಾಯಾರಿನ ಪ್ರಶಾಂತಿ ವಿದ್ಯಾ ಕೇಂದ್ರವು ತನ್ನ 2025-2026ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸಾಂಪ್ರದಾಯಿಕ ಸಂಸ್ಕೃತಿ ಆಚಾರಗಳ ವಿಧಿವಿಧಾನ ದೊಂದಿಗೆ ಉತ್ಸಾಹ ಮತ್ತು ಆಧ್ಯಾತ್ಮಿಕ ವೈಭವದೊಂದಿಗೆ ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷಕ್ಕೆ ದೈವಿಕ ಆಶೀರ್ವಾದವನ್ನು ಕೋರುತ್ತಾ, ಅರ್ಚಕ ವೇದಮೂರ್ತಿ ಶ್ರೀ ನವನೀತ ಕೃಷ್ಣ ಬೋಳoತಕೋಡಿ ಮತ್ತು ಸಹ-ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಸರಸ್ವತಿ ಹವನದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀಡಿದ ಭಾವಪೂರ್ಣ ಭಕ್ತಿಪೂರ್ವ ಭಜನೆಗಳಿಂದ ಪ್ರಶಾಂತ ವಾತಾವರಣವು ಸಮೃದ್ಧವಾಗಿತ್ತು. ನಂತರ…