‘ಕೆಡಿ – ದಿ ಡೆವಿಲ್’ ಹಾಡಿಗೆ ವಿವಾದದ ಬೆಂಕಿ – ಡಬಲ್ ಮೀನಿಂಗ್‌ಗೆ ಕನ್ನಡಿಗರ ಆಕ್ರೋಶ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ – ದಿ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ಬೆನ್ನಲ್ಲೇ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡಿನ ಸಾಹಿತ್ಯವು ಅತ್ಯಂತ ಅಸಭ್ಯತೆಯಿಂದ ಕೂಡಿದೆ ಮತ್ತು ದ್ವಂದ್ವಾರ್ಥ (Double Meaning) ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಚಿತ್ರದ ಹಾಡಿನಲ್ಲಿ ಬಳಸಲಾಗಿರುವ ಕೆಲವು ಪದಗಳು ಸಭ್ಯ ಸಮಾಜಕ್ಕೆ ಮುಜುಗರ…
