ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು.

ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 64 ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಪರವಾನಿಗೆ ವಿತರಿಸುವ ಅಧಿಕಾರ ಗ್ರಾಮ ಪಂಚಾಯತಿಗಿದೆ. ಆದರೆ, ಸಬ್-ಸೆಕ್ಷನ್ 5-A ಪ್ರಕಾರ ಲೇಔಟ್ ಅನುಮೋದನೆ ಮತ್ತು ಕಟ್ಟಡ ಪರವಾನಿಗೆ ವಿತರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 ಅನ್ನು ಪಾಲಿಸಬೇಕಾದ ಕಾರಣ, ಗ್ರಾಮ ಪಂಚಾಯತಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ, ಶಾಸಕ ಕಿಶೋರ್ ಕುಮಾರ್ ಪುತ್ತೂರು…

Read More

ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಿ ಬಸ್ ಸಂಚಾರ ಆರಂಭಕಾಞಂಗಾಡು -ಮೂನಾಂಕಡವ್ – ಸುಳ್ಯ ರೂಟ್

ಕಾಸರಗೋಡು : ಬಂದಡ್ಕ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಕಾಞಂಗಾಡು -ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಸಿ ಯ ಲಿಮಿಟೆಡ್ ಸ್ಟಾಪ್ ಆ. 14ರಂದು ಸಂಚಾರ ಆರಂಭಿಸಿತು‌. ಕಾಞಂಗಾಡು, ಪೆರಿಯ, ಮೂನಾಂಕಡವ್, ಕುಂಡಾಂಗುಳಿ, ಬಂದಡ್ಕ ದಾರಿಯಾಗಿ ಸುಳ್ಯಕ್ಕೆ ಸರ್ವೀಸ್ ನಡೆಸುವ ಬಸ್ ಸಂಚಾರವನ್ನು ಶಾಸಕ ಸಿ. ಎಚ್. ಕುಂಞಂಬು ಇಂದು ಬೆಳಿಗ್ಗೆ ಕುತ್ತಿಕ್ಕೋಲ್ ನಲ್ಲಿ ಸಂಚಾರ ಉದ್ಘಾಟಿಸಿದರು.ಮಲೆನಾಡು ಪ್ರದೇಶವಾದ ಕುತ್ತಿಕೋಲ್, ಬೇಡಗಂ ಪಂಚಿಯತಿನ ಜನತೆಗೆ ಈ ಬಸ್ ಸಂಚಾರದ ಮೂಲಕ ಅತಿ ಸುಲಭದಲ್ಲಿ ಸುಳ್ಯವನ್ನು ಸಂಪರ್ಕಿಸಬಹುದಾಗಿದೆ. ಚಿಕಿತ್ಸೆ, ಉನ್ನತಶಿಕ್ಷಣ,…

Read More

ರಾಮಾಯಣ ಮಾಸಾಚರಣೆಯ ಭಕ್ತಿಪೂರ್ಣ ಸಮಾರೋಪ – ವರದಿ

ಮಂಜೇಶ್ವರ ಪ್ರಖಂಡದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ, ದುರ್ಗಾ ವಾಹಿನೀ ಸಂಘಟನೆಗಳು ಸಂಯುಕ್ತವಾಗಿ, ಭಕ್ತಿ ಮತ್ತು ಉತ್ಸಾಹದ ವಾತಾವರಣದಲ್ಲಿ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಆಯೋಜಿಸಿತು. ಕಾರ್ಯಕ್ರಮವು ಕುಂಜತ್ತೂರು ಶ್ರೀ ಶಿವಶಕ್ತಿ ಸೀತಾರಾಮ ಭಜನಾ ಮಂದಿರದಲ್ಲಿ ಭವ್ಯವಾಗಿ ನಡೆಯಿತು. ಆರಂಭದಲ್ಲಿ ನಡೆದ ಭಜನಾ ಸತ್ಸಂಗದಲ್ಲಿ ಭಕ್ತರು ಶ್ರೀರಾಮ, ಸೀತಾ ದೇವಿ ಮತ್ತು ಇತರ ದೈವಗಳನ್ನು ಸ್ತುತಿಸಿ ಭಜನೆಯನ್ನು ಆಲಾಪಿಸಿದರು. ಭಾವಪೂರ್ಣ ಗಾನವು ಶಾಂತಿ ಮತ್ತು ಆಧ್ಯಾತ್ಮಿಕೋತ್ಸಾಹ ತುಂಬಿದ ವಾತಾವರಣವನ್ನು ನಿರ್ಮಿಸಿತು. ಸಭೆಯಲ್ಲಿ ಸ್ಥಳೀಯ…

Read More

ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಕರ್ಷಕ ಸಂಘದ ಪ್ರತಿಭಟನೆ.

ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಅಮೇರಿಕ ಅಧ್ಯಕ್ಷರು ಮತ್ತು ಭಾರತ ಪ್ರಧಾನಿ ವಿರುದ್ಧ ಎಡರಂಗ ಕರ್ಷಕ ಸಂಘಟನೆಗಳ ನೇತೃತ್ವದಲ್ಲಿ ಮಂಜೇಶ್ವರ ಹೊಸಂಗಡಿ ಪೇಟೆ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕರ್ಷಕ ಸಂಘದ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದ ಪ್ರತಿಭಟನಾ ಮೆರವಣಿಗೆ ಯನ್ನು ಕಿಸಾನ್ ಸಭಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ. ಕುಂಞಿಕಣ್ಣನ್ ಉದ್ಘಾಟಿಸಿ ಮಾತನಾಡಿದರು. ಸಿ. ಪಿ. ಐ ನೇತಾರ ರಾದ ಜಯರಾಮ ಬಳ್ಳಂಗು ಡೇಲು ಸ್ವಾಗತಿಸಿ, ನಾಯಕರಾದ ಕೆ. ಕಮಲಾಕ್ಷ, ಎಂ.ರಾಮಚಂದ್ರ,…

Read More

ದೇಶದ ಸ್ವಾತಂತ್ರ್ಯ ಸಂರಕ್ಷಣೆ ದೇಶ ಪ್ರೇಮಿಗಳ ಕರ್ತವ್ಯ – ನಿವೃತ್ತ ಸೇನಾನಿ ನಾರಾಯಣ ಶೆಟ್ಟಿ.

ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಓಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮನಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯರ್ ನಾರಾಯಣ ಶೆಟ್ಟಿ ಹೇಳಿದರು. ಬಾಯಿಕಟ್ಟೆ ಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವ ದಲ್ಲಿ ನಡೆದ ತಿರಂಗ ಯಾತ್ರೆ ಯನ್ನು ನಿವೃತ್ತ ಸೈನಿಕ ರಾದ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ…

Read More

ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸೆರೆ ಹಿಡಿದ ಅಬಕಾರಿ ಪೊಲೀಸರು.ಇಬ್ಬರ ಬಂಧನ .

ಮಂಜೇಶ್ವರ : ಮಂಜೇಶ್ವರ ಅಬಕಾರಿ ಇಲಾಖೆ ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆಫ್ಸಲ್ (32) ಹಾಗೂ ಅಶ್ರಫ್ (30) ಎಂಬ ಇಬ್ಬರನ್ನು ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಮಂಜೂರು ಚೆಕ್‌ಪೋಸ್ಟ್ ನಲ್ಲಿ ಕಾರು ತಪಾಸಣೆ ವೇಳೆ ಸೆರೆ ಹಿಡಿಯಲಾಗಿದೆ.. ಸಾಗಾಟ ಮಾಡುತ್ತಿದ್ದ ಕಾರಿನಿಂದ 214 ಕಿಲೋ ತೂಕದ ನಿಷಿದ್ಧ ತಂಬಾಕು ಉತ್ಪನ್ನಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಸುಮಾರು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ.ಇದೇ ರೀತಿ…

Read More

ಮತಗಳ ಲೂಟಿ ವಿಚಾರ ಪುತ್ತಿಗೆ ಮಂಡಲ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಾಗೂ ಚುನಾವಣಾ ಆಯೋಗಕ್ಕೆ ಪತ್ರ.

ಮತಗಳ ಲೂಟಿ ವಿಷಯದಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಕೋರಿ ಲೋಕಸಭೆಯ ವಿರೋಧ ಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಎತ್ತಿದ ಐದು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿ ಪುತ್ತಿಗೆ ಮಂಡಲಂ ಯುವ ಕಾಂಗ್ರೆಸ್ ಚುನಾವಣಾ ಆಯುಕ್ತರಿಗೆ ಪುತ್ತಿಗೆ ಅಂಚೆ ಕಛೇರಿಯಿಂದ ಪತ್ರ ಕಳುಹಿಸಿ ಪ್ರತಿಭಟನೆ ಮಾಡಿದರು . ಯುವ ಕಾಂಗ್ರೆಸ್ ಪುತ್ತಿಗೆ ಮಂಡಲ ಅಧ್ಯಕ್ಷ ದಯಾನಂದ ಬಾಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಕೇಶವ SR ಉದ್ಘಾಟಿಸಿದರು.ನೇತಾರರಾದ ಮಂಜೇಶ್ವರ ಮಂಡಲ ಅಧ್ಯಕ್ಷ ಜುನೈದ್ ಉರ್ಮಿ,…

Read More

ಮನೆಯ ಆವರಣ ಗೋಡೆಗೆ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಸ್ಕೂಟರ್ -ಸವಾರ ಸಾವು

ಉಳ್ಳಾಲ, ಆ. 13 : ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸವಾರ ಸಾವನ್ನಪ್ಪಿದ ಘಟನೆ ಆಗಸ್ಟ್ 12ರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ ಯಾನೆ ರಘು (44) ಎಂದು ಗುರುತಿಸಲಾಗಿದೆ.ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟಿಕಲ್ ಗುತ್ತಿಗೆದಾರರಾಗಿದ್ದ ರಾಘವೇಂದ್ರ ರಾಘವೇಂದ್ರ ಅವರು ಆ.12ರ…

Read More

ಕುಂಬಳೆ ರೈಲ್ವೆ ನಿಲ್ದಾಣ ಪರಿಸರ ಸ್ವಚ್ಛಗೊಳಿಸಿದ ಮೂಹಿಮತ್ ಶಾಲಾ ವಿದ್ಯಾರ್ಥಿಗಳು.

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪವಿದ್ದ ಕಾಡು, ಪೊದೆಗಳನ್ನು ಪುತ್ತಿಗೆ ಮೂಹಿಮತ್ ಹೈಯರ್ ಸೆಕೆಂಡರಿ ಶಾಲೆಯ ಲ್ಯಾಂಗ್ವೇಜ್ ಕ್ಲಬ್ ನ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿದರು. ನಿಲ್ದಾಣ ಪರಿಸರದಲ್ಲಿ ಸುತ್ತಲೂ ಕಾಡು ಪೊದೆ ಅವರಿಸಿದ ಕಾರಣ ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಈ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯವನ್ನು ರೈಲ್ವೆ ಅಧಿಕಾರಿಗಳು ಮತ್ತು ಪ್ರಯಾಣಿಕರು ಶ್ಲಾಗಿಸಿದರು. ವಿದ್ಯಾರ್ಥಿಗಳ ಜೊತೆ ಶಿಕ್ಷಕರಾದ ದೇವರಾಜ್, ಆಶಾಲತಾ, ರಾಜೇಶ್ವರಿ ಜೊತೆಗಿದ್ದರು.

Read More

ಸ್ಥಳೀಯಾಡಳಿತ ಚುನಾವಣೆ ವಾರ್ಡ್ ವಿಭಜನೆ ಪೂರ್ಣ -ಕಾಸರಗೋಡಿನಲ್ಲಿ ವಾರ್ಡುಗಳ ಸಂಖ್ಯೆ 725ಕ್ಕೆ ಏರಿಕೆ

ಕಾಸರಗೋಡು : ಸ್ಥಳೀಯಾಡಳಿತ ಚುನಾವಣಾ ಪೂರ್ವಭಾವಿ ವಾರ್ಡು ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ವಾರ್ಡುಗಳ ಸಂಖ್ಯೆ 725ಕ್ಕೇರಿದೆ. ಈ ಹಿಂದೆ ಜಿಲ್ಲೆಯಲ್ಲಿ 664 ವಾರ್ಡುಗಳಿದ್ದುವು. ವಾರ್ಡು ವಿಭಜನೆಯ ಬಳಿಕ ನೂತನವಾಗಿ 61ವಾರ್ಡುಗಳು ಹೆಚ್ಚಳಗೊಂಡಿವೆ. ನೂತನ ವಾರ್ಡುಗಳ ಡಿಜಿಟಲ್ ಭೂಪಟವನ್ನೂ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿದ್ದ 83 ಬ್ಲಾಕ್ ಪಂ. ವಾರ್ಡುಗಳ ಸಂಖ್ಯೆ 92ಕ್ಕೇರಿದೆ. 113ನಗರಸಭಾ ವಾರ್ಡುಗಳು 120ಕ್ಕೇರಿವೆ. 17ಜಿ.ಪಂ.ವಾರಡುಗಳು 18 ಆಗಿವೆ. ಒಟ್ಟು ಜಿಲ್ಲೆಯ ತ್ರಿಸ್ತರ ಪಂಚಾಯತಿನಲ್ಲಿ ಹಿಂದೆ 877ವಾರ್ಡುಗಳಿದ್ದುವು. ಈಗ ಇದು 955ಕ್ಕೇರಿದೆ. ಒಟ್ಟು ಕೇರಳದಲ್ಲಿ…

Read More
error: Content is protected !!