ಉಡುಪಿ ಶ್ರೀ ಕೃಷ್ಣಮಠದಲ್ಲಿ ಅನ್ನದಾನಕ್ಕೆ ಯಾವುದೇ ಸಮಸ್ಯೆ ಇಲ್ಲ : ಅಡುಗೆ ಅನಿಲ ಮುಗಿದರೂ ಕಟ್ಟಿಗೆ ಒಲೆಯಲ್ಲಿ ಭೋಜನ ವ್ಯವಸ್ಥೆ ಸಿದ್ಧ !
ಉಡುಪಿ:ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಹಾಗೂ ಊಟೋಪಚಾರ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ಭೋಜನ ಸ್ವೀಕರಿಸುವ ಉಡುಪಿ ಶ್ರೀ ಕೃಷ್ಣಮಠವನ್ನು “ಅನ್ನ ಬ್ರಹ್ಮನ ದೇಗುಲ” ಎಂದೇ ಕರೆಯಲಾಗುತ್ತದೆ. ಇಲ್ಲಿ ಪರಂಪರೆಯಿಂದ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಪದ್ಧತಿ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಡುಗೆ ಕಾರ್ಯಕ್ಕೆ ಅನಿಲದ ಅವಲಂಬನೆಯೂ ಹೆಚ್ಚಾಗಿದೆ.ಸದ್ಯ ಅಡುಗೆ ಅನಿಲ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ….
ಅಮೆರಿಕಾ ನೀತಿಯಿಂದ ಜಾಗತಿಕ ಸಂಕಷ್ಟ: ಪ್ರಧಾನಿ ನಡೆ ಟೀಕಿಸಿದ ಹರೀಶ್ ಕುಮಾರ್
ಮಂಗಳೂರು: ಇರಾನ್–ಅಮೆರಿಕಾ–ಇಸ್ರೇಲ್ ನಡುವಿನ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಸಂಕಷ್ಟ ಉಂಟುಮಾಡುವ ಸಾಧ್ಯತೆ ಇದೆ. ಅಮೆರಿಕಾದ ಉದ್ದಟ ನೀತಿಯಿಂದ ವಿಶ್ವಕ್ಕೆ ದೊಡ್ಡ ಕಂಟಕ ಎದುರಾಗಿದ್ದು, ತೈಲ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರಿಸ್ಥಿತಿಯಿಂದ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆ ಮೇಲೆ ಪರಿಣಾಮ ಬಿದ್ದು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ…
ಪಂಚರಾಜ್ಯಗಳ ಚುನಾವಣಾ ಕಹಳೆ ಮೊಳಗಲು ಕ್ಷಣಗಣನೆ! ಕೇರಳದಲ್ಲಿ ಮಾರ್ಚ್ 16 ಅಥವಾ 17 ಕ್ಕೆ ಸಾಧ್ಯತೆ
ಮಂಜೇಶ್ವರ: ದೇಶದ ರಾಜಕೀಯ ರಂಗದಲ್ಲಿ ಈಗ ತೀವ್ರ ಸಂಚಲನ! ಕೇರಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಬಿಗ್ ಅಪ್‌ಡೇಟ್ ಇಲ್ಲಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚ್ಚೇರಿ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಮಾರ್ಚ್ 15ರ ನಂತರ ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.ಈ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಅಂದರೆ…
ಕೇರಳದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ: ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ತಿರುವನಂತಪುರಂ: ಕೇರಳದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಈ ಸಭೆಯಲ್ಲಿ ಹಲವು ಸಚಿವರು, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವುದರಿಂದ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ. ಪ್ರಸ್ತುತ ಕೇರಳಕ್ಕೆ ಒಟ್ಟು…
ಮುಖವಾಡಗಳ ಹಿಂದೆ ಮರೆಯದ ಸತ್ಯ
ಮಾನವ ಸಮಾಜವು ನಿಜ ಮತ್ತು ನಾಟಕದ ನಡುವೆ ನಡೆಯುವ ಒಂದು ವಿಚಿತ್ರ ನಾಟಕಮಂದಿರದಂತಿದೆ. ಇಲ್ಲಿ ಹಲವರು ತಮ್ಮ ನಿಜವಾದ ವ್ಯಕ್ತಿತ್ವವನ್ನು ಮರೆಮಾಚಿ, ಸಮಾಜದ ಮುಂದೆ ಬೇರೆ ರೀತಿಯ ಮುಖವಾಡಗಳನ್ನು ಧರಿಸಿ ಬದುಕುತ್ತಾರೆ. ಗೌರವ, ಸ್ಥಾನಮಾನ, ಲಾಭ ಅಥವಾ ಜನಪ್ರಿಯತೆ ಪಡೆಯಲು ಕೆಲವರು ತಮ್ಮ ನಿಜವಾದ ಸ್ವಭಾವವನ್ನು ಮರೆಮಾಡಿ ಕಪಟತನದ ಬದುಕನ್ನು ನಡೆಸುತ್ತಾರೆ. ಆದರೆ ಎಷ್ಟೇ ಮುಖವಾಡಗಳನ್ನು ಹಾಕಿಕೊಂಡರೂ ಅದರ ಹಿಂದೆ ಇರುವ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವು ಅನೇಕ ರೀತಿಯ ಮುಖವಾಡಗಳನ್ನು ನೋಡುತ್ತೇವೆ. ಕೆಲವರು…
ಪತಿಯ ಹಿಂಸೆ ಆರೋಪ: ಹಿಂದೂ ಧರ್ಮಕ್ಕೆ ಮರಳಿದ ಮಿಸ್ ಇಂಡಿಯಾ ಅರ್ಥ್ 2019 ವಿಜೇತೆ ಸಯಲಿ ಸರ್ವೆ
ಪುಣೆ: ಮಹಾರಾಷ್ಟ್ರದ ಪುಣೆಯ ಮೂಲದ ಮಾದರಿ ಹಾಗೂ ಮಿಸ್ ಇಂಡಿಯಾ ಅರ್ಥ್ 2019 ವಿಜೇತೆ ಸಯಲಿ ಸರ್ವೆ ತಮ್ಮ ಪತಿ ಆತಿಫ್ ತಾಸೆ ವಿರುದ್ಧ ಹಿಂಸೆ ಹಾಗೂ ಬಲವಂತದ ಮತಾಂತರದ ಆರೋಪ ಮಾಡಿದ್ದು, ಬಳಿಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ. ಸಯಲಿ ಸರ್ವೆ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಆತಿಫ್ ತಾಸೆ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಅತೀಜಾ ಎಂದು ಬದಲಿಸಿಕೊಂಡಿದ್ದರು. ಆದರೆ ನಂತರ ಪತಿಯಿಂದ ಮಾನಸಿಕ…
ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಟ್ರಸ್ಟ್ ವತಿಯಿಂದ 300 ಕುಟುಂಬಗಳಿಗೆ 50 ಲಕ್ಷ ರೂ. ಸಹಾಯ ಹಸ್ತ
ಮುಲ್ಕಿ: ಸಮಾಜದ ಉತ್ಕರ್ಷಕ್ಕಾಗಿ ಜೀವನವನ್ನೇ ಸಮರ್ಪಿಸಿದ್ದ ವಿಜಯ ಬ್ಯಾಂಕಿನ ವಿಜಯಶಿಲ್ಪಿ ಮುಲ್ಕಿ ಸುಂದರರಾಮ ಶೆಟ್ಟಿ ಅವರ ನೆನಪಿನಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ 300ಕ್ಕೂ ಹೆಚ್ಚು ಕುಟುಂಬಗಳಿಗೆ ಒಟ್ಟು ಸುಮಾರು 50 ಲಕ್ಷ ರೂ. ಮೌಲ್ಯದ ಸಹಾಯ ಹಸ್ತ ನೀಡಲಾಗುತ್ತಿದೆ. ಉನ್ನತ ಹುದ್ದೆ ಮತ್ತು ಅಧಿಕಾರದಲ್ಲಿದ್ದರೂ ಸಮಾಜದ ಸಂಪರ್ಕವನ್ನು ಉಳಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದವರು ಮುಲ್ಕಿ ಸುಂದರರಾಮ ಶೆಟ್ಟಿ. ರಾಷ್ಟ್ರೀಕೃತ ವಿಜಯ ಬ್ಯಾಂಕಿನಲ್ಲಿ ಕರಾವಳಿ ಭಾಗದ ಅನೇಕ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ, ಆ…
ಕಾನಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಪದವು ಕಾನಡ್ಕದಲ್ಲಿರುವ ಡಾಲ್ಫಿ ಡಿ’ಸೋಜಾ ಮನೆ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಸುಮಾರು 25 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಈ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಆದರೆ ಬಳಿಕ ಅನುದಾನ…
ಕುಂಬಳೆಯಲ್ಲಿ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಆರಂಭ
ಕುಂಬಳೆ: ಶ್ರೀಶ್ರೀ ರವಿಶಂಕರ್ ಗುರುಜಿ ಅವರ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಕಾರ್ಯಕ್ರಮವು ಕಳೆದ ದಿನ ಕುಂಬಳೆಯ ನಾರಾಯಣ ಮಂಗಲಂ ಶ್ರೀ ಚೀರುಂಬ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮವು ಮಾರ್ಚ್ 13, 14 ಮತ್ತು 15ರಂದು ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ಸಜಿ ನಿಸಾನ್ ಅವರು “ಭಗವದ್ಗೀತೆಯ ಮೂಲಕ ಜೀವನದಲ್ಲಿ ಯಶಸ್ಸು” ಎಂಬ ವಿಷಯದ ಕುರಿತು ತರಬೇತಿಗೆ ನೇತೃತ್ವ…
