ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಹಾಗೂ ಇವರ ಕುಟುಂಬದ ವಿರುದ್ಧ ನಿಂದನೆ ಸೌಜನ್ಯ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಕಾಲ ನ್ಯಾಯಾಂಗ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಹಾಗೂ ಇವರ ಕುಟುಂಬದ ವಿರುದ್ಧ ನಿಂದನೆ ಮಾಡಬಾರದು ಎಂಬ ಕೋರ್ಟ್ ಆದೇಶವನ್ನು ಪದೇ ಪದೇ ಉಲ್ಲಂಘಿಸಿದ  ಆರೋಪದಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಸೌಜನ್ಯ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪಿಯಾಗಿರುವ ಸೌಜನ್ಯಳ ಮಾವ ವಿಠ್ಠಲ ಗೌಡ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು…

Read More

ಮಂಗಳೂರು ದಕ್ಷಿಣದಲ್ಲಿ ಅಂಗನವಾಡಿ ನಿವೇಶನ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಹತ್ವದ ಸಭೆ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಗುರುತಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ನಮ್ಮ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 59 ಅಂಗನವಾಡಿಗಳಿಗೆ ನಿವೇಶನವಿಲ್ಲ. ಅದರಲ್ಲಿಯೂ 29 ಬಾಡಿಗೆ ಕಟ್ಟಡಗಳಲ್ಲಿವೆ. ಪುಟ್ಟ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸುಸಜ್ಜಿತ ಅಂಗನವಾಡಿ ಕೇಂದ್ರಗಳು ಅತ್ಯಂತ ಬಹು ಮುಖ್ಯವಾಗಿವೆ. ಹೀಗಿರುವಾಗ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಗುರುತಿಸುವ ಕೆಲಸವು ಶೀಘ್ರವಾಗಿ ನಡೆಯಬೇಕು. ಸಂಬಂಧಪಟ್ಟ ಅಧಿಕಾರಿಗಳು…

Read More

ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ

ಮಂಜೇಶ್ವರ: ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹೊಸಂಗಡಿಯಲ್ಲಿ ನಡೆಯಿತು . ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ಅಪಘಾತಗಳು ಈ ನಡುವೆ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ .ವಾಹನ ಚಾಲಕರು ಮತ್ತು ಸಂಚಾರಿಗಳು ಕೆಲವೊದು ನಿಯಮವನ್ನು ಪಾಲಿಸಬೇಕಾಗುವುದು,ನಿಯಮ ಮತ್ತು ಕರ್ಥವ್ಯಗಳನ್ನು ತಿಳಿಸುವ ಉದ್ದೇಶದಿಂದ“ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು” ಎಂಬ ವಿಷಯದಡಿ ಹೊಸಂಗಡಿಯಲ್ಲಿ ಆಟೋ ರಿಕ್ಷಾ ಚಾಲಕರು ಹಾಗೂ…

Read More

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದ ಹೋರಾಟದಲ್ಲಿ ಬಂಧಿತರಿಗೆ ಜಾಮೀನು

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದಂತೆ ಹೋರಾಟದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸ್‌ರು ಬಂಧಿಸಿದ್ದರು. ಆದರೆ ಸಮರನಾಯಕ ಎಂಎಲ್ ಎ ಸೇರಿದಂತೆ ಸುಬೈರ್, ಎ.ಕೆ. ಆರಿಫ್, ಅಶ್ರಫ್ ಕರ್ಳ್ಳ ಮುಂತಾದವರು ವಕೀಲರೊಂದಿಗೆ ಬೆಳಗ್ಗೆಯಿಂದ ನಡೆಸಿದ ಕಾನೂನು ಹೋರಾಟದ ಫಲವಾಗಿ, ಆ ಇಬ್ಬರಿಗೆ ಜಾಮೀನು ಮಂಜೂರಾಗಿದೆ. ಟ್ರೋಲ್ ಸಮರವು ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲಿ, ಸಮರವನ್ನು ಭಂಗಪಡಿಸಲು ಮಧ್ಯದಲ್ಲಿ ಯಾರು ನುಗ್ಗಿದ್ದಾರೆ? ಕ್ಷೇತ್ರದ ಎಂಎಲ್‌ಎ ಎ.ಕೆ.ಎಂ. ಅಶ್ರಫ್ ಅವರು ಜನರಿಗೆ ನಿಷೇಧಾಜ್ಞೆ ಇದೆ ಕಾರ್ಯಕರ್ತರಿಗೆ ಚದುರಿಹೋಗಲು ಹೇಳಿದರೂ ಅದನ್ನು ಕೇಳದೆ ಮುಂದುವರಿದ್ದಾರೆ ,…

Read More

ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ನ ನೂತನ ಕಾರ್ಯಾಲಯದ ಉದ್ಘಾಟನೆ

ಮಂಜೇಶ್ವರ: ಕಲೆ ಕ್ರೀಡೆ ಜೀವ ಕಾರುಣ್ಯ ಕಾರ್ಯಾಗಾರದಲ್ಲಿ ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ಗೆ 32 ನೇ ವರ್ಷ ಕ್ಕೆ ನೂತನ ಕಾರ್ಯಾಲಯವು 16 -01 -2026 ನೇ ಶನಿವಾರದಂದು ಉದ್ಘಾಟನೆಗೊಂಡಿತು. ಮಂಜೇಶ್ವರ ಪೊಯ್ಯಕಂಡದಲ್ಲಿ ನಿರ್ಮಿಸಲಾದ ನೂತನ ಕಾರ್ಯಾಲಯದ ಕಟ್ಟಡವನ್ನು ಮಂಜೇಶ್ವರದ ಶಾಸಕರಾದ ಎ.ಕೆ .ಎಂ ಅಶ್ರಫ್ ರವರು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ , ಅಸ್ತ್ರ ಗ್ರೂಪ್ ನ CEO ಲಂಚುಲಾಲ್ ಉಪಸ್ಥಿತರಿದ್ದರು . ಕಾರ್ಯಕ್ರಮ ಉದ್ಘಾಟಿಸಿ…

Read More

126 ಮಕ್ಕಳಿಂದ ಒಂದೇ ವೇದಿಕೆಯಲ್ಲಿ ಶತಸ್ಮರಣ-ಶತನಮನ-ಚೆಲ್ಡುವಾಲೆ ಭಜನಾ ಸಂಪನ್ನ

ಮಂಗಳೂರು: ಮಂಗಳೂರು ರಥಬೀದಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ ಸೇವೆಯನ್ನು ಸಮರ್ಪಿಸಿದರು. ಪುಟ್ಟ ಚಿಣ್ಣರಿಂದ ಹಿಡಿದು ಎಂಟನೇ ತರಗತಿಯ ತನಕ ಮಕ್ಕಳು ಶತಸ್ಮರಣ – ಶತನಮನ- ಚೆಲ್ಡುವಾಲೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಮಂಗಳೂರು ರಥಬೀದಿ ಶ್ರೀ ವೆಂಕಟರಮಣ…

Read More

ಫೆ.4 ರಿಂದ 10 ರವರೆಗೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು  ನೇಮೋತ್ಸವ.

ಮಂಗಳೂರು : ಮುಲ್ಕಿ ತಾಲೂಕಿನ ಸಸಿಹಿತ್ತು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ ಫೆಬ್ರವರಿ 4 ರಿಂದ 10 ರ ತನಕ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೆರ ಹೇಳಿದರು. ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿಸಿದ ಈ ಕ್ಷೇತ್ರ, ಸಸಿಹಿತ್ತುವಿನ ಕಡಲತಡಿಯ…

Read More

ಬೀಜ ಮಸೂದೆ,ವಿದ್ಯುತ್ ಮಸೂದೆಗಳು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳಿಗೆ ಮಾರಕ – ಕೆ ಯಾದವ ಶೆಟ್ಟಿ

ಕೇಂದ್ರ ಸರ್ಕಾರ ಜಾರಿಗೆ ಮಾಡಲು ಹೊರಟ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಯ ಉದ್ದೇಶಗಳನ್ನೇ ಬುಡಮೇಲುಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನೇ ಪ್ರದಾನವನ್ನಾಗಿಟ್ಟುಕೊಂಡು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ.ಇವುಗಳ ವಿರುದ್ಧ ದೇಶದ ಸಮಸ್ತ ಜನಕೋಟಿ ಒಂದಾಗಿ ಹೋರಾಡದಿದ್ದರೆ ದೇಶವನ್ನೇ ಉಳಿಸುವುದು ಕಷ್ಟಸಾದ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕರಾದ ಕೆ ಯಾದವ ಶೆಟ್ಟಿಯವರು ಆತಂಕ ವ್ಯಕ್ತಪಡಿಸಿದರು. ಅವರು ಬೀಜ ಮಸೂದೆ ವಿದ್ಯುತ್ ಮಸೂದೆ…

Read More

ಇ-ಖಾತಾ ಸಮಸ್ಯೆ ಕಾಂಗ್ರೆಸ್ ಕೃಪಾಪೋಷಿತ ಗ್ಯಾರಂಟಿ :- ಶಾಸಕ ಕಾಮತ್

ಮ.ನ.ಪಾ. ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಇನ್ನೂ ಸಹ ಜನರು ಹರಸಾಹಸ ಪಡುವಂತಾಗಿದ್ದು ದಪ್ಪ ಚರ್ಮದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಗ್ಗೆ ಚಿಂತೆಯೇ ಇಲ್ಲವಾಗಿರುವುದು ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ದಿನದಿಂದಲೂ ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಉಂಟಾಗಿದೆ. ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು, ಮಾರಾಟಗಾರರು ಇಲ್ಲಿಗೆ ಬಂದು ಹಲವು ದಿನಗಳ ನಂತರವೂ ತಮ್ಮ ಕೆಲಸವಾಗದೇ ಬರಿಗೈಯಲ್ಲಿ ಮರಳುತ್ತಿದ್ದಾರೆ. ಮೊನ್ನೆ…

Read More

ಬೆಳ್ಳಾರು: ಪ್ರಸಿದ್ಧ ವಾಸ್ತು ಶಿಲ್ಪಿ ಧರ್ಮೇದ್ರ ಆಚಾರ್ಯ ನಿಧನ

ಉಪ್ಪಳ: ಬೇಕೂರು ಬಳಿಯ ಬೆಳ್ಳಾರು ನಿವಾಸಿ ವಾಸ್ತು ಶಿಲ್ಪಿ ಧರ್ಮೇಂದ್ರ ಆಚಾರ್ಯ [78] ಅಲ್ಪ ಕಾಲದ ಅಸೌಖ್ಯದಿಂದ  ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರೋಹಿಣಿ, ಮಕ್ಕಳಾದ ಕಿರಣ್ ಆಚಾರ್ಯ, ಯತೀಶ್ ಆಚಾರ್ಯ, ಪವಿತ್ರ, ಸೊಸೆಯಂದಿರಾದ ಶ್ವೇತ, ದೀಕ್ಷಿತ, ಅಳಿಯ ಪಾಂಡುರoಗ ಆಚಾರ್ಯ, ಸಹೋದರಿ ಸೀತಾ, ಸಹೋದರ ಲಕ್ಷಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸoಸ್ಕಾರ  ಸಂಜೆ ಮನೆ ಪರಿಸರದಲ್ಲಿ ನಡೆಯಿತು.

Read More
error: Content is protected !!