Headlines

ಕೇರಳದಲ್ಲಿ ವಿ.ಡಿ. ಸತೀಶನ್ ಪೊಲೀಸ್ ಕೂಡ ಪಿಣರಾಯಿ ಪೊಲೀಸರ ಹಾದಿಯಲ್ಲಿ: ಎಂ.ಎಲ್. ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಪ್ರಸ್ತುತ ವಿ.ಡಿ. ಸತೀಶನ್ ಅವರ ಪೊಲೀಸರು ಸಹ ಪಿಣರಾಯಿ ಪೊಲೀಸರ ಹಾದಿಯಲ್ಲೇ ಸಾಗುತ್ತಿದ್ದಾರೆ. ಧಾರ್ಮಿಕ ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಮತ್ತು ಭಯೋತ್ಪಾದಕರಿಗೆ ಕೇರಳವು ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ. ಕರ್ನಾಟಕದ ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು…

Read More

ಪಿಎಂಶ್ರೀ ಸರಕಾರಿ ಪ್ರೌಢಶಾಲೆ (RMSA) ವಿಟ್ಲದಲ್ಲಿ ನೂತನ ಎಸ್‌ಡಿಎಂಸಿ ರಚನೆ

ವಿಟ್ಲ: ಪಿಎಂಶ್ರೀ ಸರಕಾರಿ ಪ್ರೌಢಶಾಲೆ (RMSA) ವಿಟ್ಲದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಆಯ್ಕೆ ಸಭೆಯು ಜುಲೈ 14ರಂದು ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರವೀಣ್ ಎಂ. ಹಾಗೂ ಸದಸ್ಯರಾಗಿ ಅನಿತಾ, ವಿಶಾಲಕ್ಷಿ, ಅನುಶ್ರೀ, ದಾಕ್ಷಾಯಿಣಿ, ವಿಜಯ, ಅಬ್ದುಲ್ ರಹಿಮಾನ್, ವೆಂಕಟರಮಣ ಹಾಗೂ ರಾಜಶೇಖರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆ ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ,…

Read More

ಬಾಂಗ್ಲಾದೇಶಿ ‘ನುಸುಳುಕೋರರ ಪ್ರವೇಶ ಕೇಂದ್ರದ ವೈಫಲ್ಯ’ – ಎಸ್‌ಡಿಪಿಐ ಆರೋಪ

ಮಂಗಳೂರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕುತ್ತಾರೆ. ಇದ್ರಲ್ಲಿ ಅವರು ಮಂಗಳೂರಲ್ಲಿ ಬಾಂಗ್ಲಾದೇಶಿಗಳು ಇದ್ದಾರೆ, ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದರು. ಆದ್ರೆ ವಾಸ್ತವವಾಗಿ ಮಂಗಳೂರಲ್ಲಿ ಬಾಂಗ್ಲಾದೇಶದಿಂದ ನುಸುಳುಕೋರರು ಯಾವುದೇ ದಾರಿ ಇಲ್ಲ. ಪಶ್ಚಿಮ ಬಂಗಾಳದ ಮೂಲಕ ಬರಬೇಕು. ಅಲ್ಲಿ ಗಡಿ ಕಾಯುವವರು ಕರ್ನಾಟಕದವರಲ್ಲ‌. ಬದಲಾಗಿ ಕೇಂದ್ರ ಸರ್ಕಾರದಿಂದ ನಿಯೋಜಿಗೊಂಡ ಭದ್ರತಾ ಕಡೆಯವರು ಎಂದು ಎಸ್ ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರ್…

Read More

ಸಾವಿನಲ್ಲೂ ಸಾರ್ಥಕತೆ: ವೈದ್ಯಕೀಯ ಶಿಕ್ಷಣಕ್ಕಾಗಿ ಮೃತದೇಹ ದಾನ ಮಾಡಿದ ಕಾರ್ಮಿನ್ ಪಿರೇರಾ ಕುಟುಂಬಕ್ಕೆ ವ್ಯಾಪಕ ಪ್ರಶಂಸೆ

ದೇರಳಕಟ್ಟೆ: “ಸಾವಿನ ನಂತರವೂ ಬದುಕಬಹುದು, ಸಮಾಜಕ್ಕೆ ಉಪಕಾರವಾಗುವ ಮೂಲಕ” ಎಂಬ ಸಂದೇಶವನ್ನು ಬೆಳ್ತಂಗಡಿ ತಾಲೂಕಿನ ಆರ್ವ ನಿವಾಸಿಗಳಾದ ದಿವಂಗತ ಕಾರ್ಮಿನ್ ಪಿರೇರಾ (70) ಅವರ ಕುಟುಂಬ ತಮ್ಮ ಆದರ್ಶ ನಿರ್ಧಾರದ ಮೂಲಕ ಸಾಕಾರಗೊಳಿಸಿದೆ. ತಮ್ಮ ನಿಧನದ ಬಳಿಕ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ತಮ್ಮ ಮೃತದೇಹವನ್ನು ದಾನ ಮಾಡುವ ಮೂಲಕ ಕಾರ್ಮಿನ್ ಪಿರೇರಾ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ನಿಧನರಾದ ಕಾರ್ಮಿನ್ ಪಿರೇರಾ ಅವರ ಮೃತದೇಹವನ್ನು ಅವರ ಕುಟುಂಬದವರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜುಗೆ ದಾನವಾಗಿ…

Read More

SIR ಸಮೀಕ್ಷೆ ವೇಳೆ ದಾಖಲೆ ಹುಡುಕಾಟದ ನಡುವೆ ಹೃದಯಾಘಾತ; ವ್ಯಕ್ತಿ ಸಾವು

ಉಳ್ಳಾಲ: SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಮಾಡೂರು ಶಾಲೆಯಲ್ಲಿ ಭಾನುವಾರ ಸಂಭವಿಸಿದೆ.ಮೃತರನ್ನು ಕೊಲ್ಯ ನಿವಾಸಿ ಹರೀಶ್ ಗಟ್ಟಿ ಎಂದು ಗುರುತಿಸಲಾಗಿದೆ. SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಮಾಡೂರು ಶಾಲೆಯಲ್ಲಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಹುಡುಕುತ್ತಿದ್ದ ಸಂದರ್ಭ ಹರೀಶ್ ಗಟ್ಟಿ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ನೆರವು ನೀಡಲು ಪ್ರಯತ್ನಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಕೌನ್ಸಿಲರ್ ಸುಜಿತ್ ಮಾಡೂರು, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ…

Read More

ಭಾರತೀಯ ಮೂಲದ ಅನಿಲ್ ಮೆನನ್‌ರ ಮೊದಲ ಬಾಹ್ಯಾಕಾಶ ಯಾತ್ರೆಗೆ ಯಶಸ್ವಿ ಚಾಲನೆ

ಕಝಾಕಿಸ್ತಾನ್: ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್ ತಮ್ಮ ಮೊದಲ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ರಷ್ಯಾದ ಸೋಯುಜ್ ಎಂಎಸ್-29 ರಾಕೆಟ್ ಮೂಲಕ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದತ್ತ ಅವರು ಪ್ರಯಾಣ ಬೆಳೆಸಿದ್ದಾರೆ. ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಹಾಗೂ ಅನ್ನಾ ಕಿಕಿನಾ ಅವರೊಂದಿಗೆ ಅನಿಲ್ ಮೆನನ್ ಸುಮಾರು ಎಂಟು ತಿಂಗಳು ಐಎಸ್‌ಎಸ್‌ನಲ್ಲಿ ವಾಸ್ತವ್ಯ ಹೂಡಿ ವಿವಿಧ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾಗವಹಿಸಲಿದ್ದಾರೆ. ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆ ಮತ್ತು ಬಯೋಪ್ರಿಂಟಿಂಗ್ ತಂತ್ರಜ್ಞಾನ ಕುರಿತ ಅಧ್ಯಯನ ನಡೆಸಲಿದ್ದಾರೆ….

Read More

ರೈತರ ವಿರುದ್ಧದ ಎಫ್‌ಐಆರ್ ಖಂಡಿಸಿದ ಕುಮಾರಸ್ವಾಮಿ

ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸ್ ಕ್ರಮವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. “ನಾಡಿದ್ದು ಮಂಡಲಹಳ್ಳಿಗೆ ಹೋಗುತ್ತೇನೆ. ತಾಕತ್ತಿದ್ದರೆ ನನ್ನ ವಿರುದ್ಧವೂ ಎಫ್‌ಐಆರ್ ದಾಖಲಿಸಲಿ” ಎಂದು ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಸಂಬಂಧವಿಲ್ಲದವರ ದೂರಿನ ಆಧಾರದಲ್ಲಿ ರೈತರ ವಿರುದ್ಧ ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ. ಜಮೀನಿನ ಸರ್ವೆಗೆ ಅಧಿಕಾರಿಗಳು ಬಂದಾಗ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. ರೈತರು ಶಾಂತಿಯುತವಾಗಿ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು….

Read More

ಹನಗೋಡು ಗ್ರಾಮ ಪಂಚಾಯಿತಿ ಎದುರು ಸಾರ್ವಜನಿಕರ ಪ್ರತಿಭಟನೆ

ಹನಗೋಡು: ಪಂಚಾಯಿತಿ ಪಿಡಿಒ ಅನಿತಾ ಅವರ ಕಾರ್ಯವೈಖರಿಯನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಹನಗೋಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ, ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡದೆ ಸ್ವೇಚ್ಛಾಚಾರದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಿಲ್‌ಗಳನ್ನು ಪಾವತಿಸದೆ ಗುತ್ತಿಗೆದಾರರನ್ನು ಹಾಗೂ ಸಾರ್ವಜನಿಕರನ್ನು ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳು ನಿರ್ಮಿಸಿಕೊಂಡಿರುವ ಕೊಟ್ಟಿಗೆ ಹಾಗೂ ಗೃಹ ಶೌಚಾಲಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ,…

Read More

ಹೆಬ್ರಿ ಎಂಆರ್‌ಎಫ್ ಘಟಕದಲ್ಲಿ ಅಗ್ನಿ ಅವಘಡ: ಸಮಗ್ರ ತನಿಖೆಗೆ ಶ್ರೀಕಾಂತ್ ಕುಚ್ಚೂರು ಆಗ್ರಹ

ಉಡುಪಿ: ಹೆಬ್ರಿ ತಾಲೂಕಿನ ತಾಲೂಕು ಪಂಚಾಯತ್ ಅಧೀನದಲ್ಲಿರುವ ಹೆಬ್ರಿಯ ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು ಆಗ್ರಹಿಸಿದರು. ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಫೆಬ್ರುವರಿ 14ರಂದು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟುಹೋಗಿ ಭಾರೀ ನಷ್ಟ ಉಂಟಾಗಿದೆ. ಕಳೆದ ಏಳು ತಿಂಗಳಿಂದ ಘಟಕದಲ್ಲಿ…

Read More

ಕುಕ್ಕೆಹಳ್ಳಿ ಕೊರಗಜ್ಜ ಕ್ಷೇತ್ರದಿಂದ ನವೆಂಬರ್‌ನಿಂದ ಹೊಸ ಯಕ್ಷಗಾನ ಮೇಳ ಆರಂಭ

ಉಡುಪಿ: ಕುಕ್ಕೆಹಳ್ಳಿ ಈಶ್ವರನಗರದಲ್ಲಿರುವ ಸ್ವಾಮಿ ಕೊರಗಜ್ಜ ಕ್ಷೇತ್ರದ ವತಿಯಿಂದ ಈ ವರ್ಷದ ನವೆಂಬರ್ ತಿಂಗಳಿನಿಂದ ‘ಆದಿ ಮಾಯೆ ಮೂಕಾಂಬಿಕಾ–ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಆರಂಭಗೊಳ್ಳಲಿದೆ ಎಂದು ಮೇಳದ ಯಜಮಾನ ಡಾ. ಕೆ. ಕೃಷ್ಣ ಕುಲಾಲ್ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಪ್ರಶ್ನಾ ಚಿಂತನೆಯ ಆಧಾರದಲ್ಲಿ 2019ರಲ್ಲಿ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ…

Read More
error: Content is protected !!