ಕುಂಬಳೆ ಟೋಲ್ ಪ್ಲಾಸಾ ಹಿಂಸಾಚಾರ ಪ್ರಕರಣ: ಇಬ್ಬರ ಬಂಧನ
ಕಾಸರಗೋಡು:ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಸಾದಲ್ಲಿ ಟೋಲ್ ವಸೂಲಿಗೆ ವಿರೋಧವಾಗಿ ನಡೆದ ಪ್ರತಿಭಟನೆಯ ವೇಳೆ ಅಕ್ರಮಾಚಾರ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೊಡಿಯಮ್ಮ, ಉಜಾರ್‌ನ ಫೈಸಲ್ ಅಬ್ದುಲ್ ರಹ್ಮಾನ್ (28) ಹಾಗೂ ಮಂಜೇಶ್ವರಂ, ವಾಮಂಜೂರು ಚೆಕ್ ಪೋಸ್ಟ್ ಸಮೀಪದ ನಿವಾಸಿ ಟಿ. ಅಬ್ದುಲ್ ನಾಸರ್ (46) ಅವರನ್ನು ಕುಂಬಳ ಪೊಲೀಸರು ಬಂಧಿಸಿದ್ದಾರೆ. ಆಕ್ಷನ್ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭ ಉಂಟಾದ ಸಂಘರ್ಷದ ವೇಳೆ ಟೋಲ್ ಪ್ಲಾಸಾದ ಮೇಲೆ ದಾಳಿ ನಡೆಸಿ ಉಪಕರಣಗಳನ್ನು ಹಾನಿಗೊಳಪಡಿಸಿದ ಆರೋಪದ…