Headlines

ಅಕ್ಟೋಬರ್ 25 ರಂದು ದುಬೈನಲ್ಲಿ ‘ದುಬೈ ಗಡಿನಾಡ ಉತ್ಸವ’ .ಗಡಿನಾಡ ರತ್ನ ಪ್ರಶಸ್ತಿ ಪ್ರದಾನ, ಸಾಧಕರಿಗೆ ಮತ್ತು ಸಾಧಕ ಸಂಸ್ಥೆಗೆ ಗೌರವ ಸನ್ಮಾನ .

ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ “ಗಡಿನಾಡ ಉತ್ಸವ -2025” ಕಾರ್ಯಕ್ರಮವು ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ನಡೆಯಲಿದೆ.ಸಂಜೆ ನಾಲ್ಕು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸನ್ಮಾನ ನಂತರ ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ,ಗಾಯಕ ಗಾಯಕಿಯರಿಂದ ಸಂಗೀತ ಸುಧೆ,ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ…

Read More

ಮತ್ತೆ ಹಿಂಗಾರು ಮಳೆ ಆರ್ಭಟ

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾದ ಹಿನ್ನೆಲೆ ಮುಂದಿನ 1 ವಾರ 13 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಸೈಕ್ಲೋನ್ ಆಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗುವ ಸಂಭವ ಇದೆ. ಅಕ್ಟೋಬರ್ 22ರಿಂದ 27ರವರೆಗೆ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ. ಭಾರಿ ಮಳೆಯಾಗುವ ಸಂಭವ…

Read More

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಪೊಲೀಸರ ಜೀಪಿಗೆ ಡಿಕ್ಕಿ ಪಡಿಸಿ ಕೊಲೆಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ ಇಂದು ಮುಂಜಾನೆ ಆರೋಪಿ ಅಬ್ದುಲ್ಲಾ (40 ವರ್ಷ), ಐಚರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸುತ್ತಿದ್ದನು ಆತನೇ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿಯೂ ವಾಹನದಲ್ಲಿದ್ದ. ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಆತನು ನಿಲ್ಲಿಸದೆ ಇದ್ದು ಪೊಲೀಸ್‌ರು ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದರು, ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ. ಆಗ ಪಿಎಸ್ಐ ರವರು ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ ಒಂದನ್ನು ಐಚರ್ ವಾಹನದ…

Read More

ಅಭಿವೃದ್ಧಿ ಪ್ಯಾಕೇಜ್ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ – ಮಂಜೇಶ್ವರ ಸಾರ್ವಜನಿಕ ಆರೋಗ್ಯ ಕೇಂದ್ರ,ಆಧುನಿಕ ಕಟ್ಟಡದ ಶಿಲಾನ್ಯಾಸ,NHM ನಿಧಿಯಿಂದ ಔಷಧಾಲಯ ಮತ್ತು ವೈಟಿಂಗ್ ಏರಿಯಾ ಉದ್ಘಾಟನೆ

ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಮಂಜೇಶ್ವರ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕಾಗಿ ನಿರ್ಮಿಸುವ ಆಧುನಿಕ ಕಟ್ಟಡದ ಶಿಲಾನ್ಯಾಸ ಹಾಗೂ NHM ನಿಧಿಯಿಂದ ನಿರ್ಮಿಸಲಾದ ಔಷಧಾಲಯ ಮತ್ತು ವೈಟಿಂಗ್ ಏರಿಯಾವನ್ನು ಗೌರವಾನ್ವಿತ ಆರೋಗ್ಯ ಸಚಿವರಾದ ಶ್ರೀಮತಿ ವೀಣಾ ಜಾರ್ಜ್ ಆನ್ ಮಂಗಳವಾರ ಬೆಳಿಗ್ಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರದ ಗೌರವಾನ್ವಿತ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ವಹಿಸಿದರು.. ಈ ಕಾರ್ಯಕ್ರಮದಲ್ಲಿ ತ್ರಿಸ್ಥರ ಪಂಚಾಯತ್ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು…

Read More

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ದಿಂದ ಕ್ಲಸ್ಟರ್ ಬಹಿಷ್ಕಾರ ಹಾಗೂ ಮನವಿ ಸಲ್ಲಿಕೆ

ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಂವಿಧಾನಿಕ ಮತ್ತು ಭಾಷಾ ಹಕ್ಕುಗಳನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಕ್ಲಸ್ಟರ್ ಬಹಿಷ್ಕಾರ ನಡೆಸಲಾಯಿತು. ತದನಂತರ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಪಜಿಲ್ಲಾ ಕಚೇರಿಗೆ ಭೇಟಿ ನೀಡಿ, ಶಿಕ್ಷಕರ ಕೈ ಪಿಡಿಗಳನ್ನು ಒದಗಿಸಬೇಕು, ಶಾಸ್ತ್ರೋತ್ಸವ ಮತ್ತು ಕಲೋತ್ಸವಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನು ನೀಡಬೇಕು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು, ದ್ವಿ…

Read More

ಅಕ್ಟೋಬರ್ 24 ಕ್ಕೆ ಬೋಳೂರಿನ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ …. !

ಇತಿಹಾಸ ಪ್ರಸಿದ್ಧ ಬೋಳೂರಿನ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭವು ಅಕ್ಟೋಬರ್ 24 ರಂದು ಪೂರ್ವಾಹ್ನ 8.04 ರಿಂದ ಶುರುವಾಗಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಲ್ಬಾವಿ ತಿಳಿಸಿದರು . ಅವರು ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಅಂದಾಜು ೩. ೯೨ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಕಾರ್ಯನಡೆಯುವ ಈ…

Read More

ಮಿಡಲ್ ಕ್ಲಾಸ್ ಫ್ಯಾಮಿಲಿ’ ಅಕ್ಟೋಬರ್ 25ರಿಂದ ಯೂಟ್ಯೂಬ್ ನಲ್ಲಿ ಬಿಡುಗಡೆ .

ಮಂಗಳೂರು:ಥಿಯೇಟರ್‌ನಲ್ಲಿ ಬರೋಬ್ಬರಿ 160 ದಿನಗಳ ಕಾಲ ಆರ್ಭಟಿಸಿದ್ದ ತುಳು ಚಿತ್ರ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಅಕ್ಟೋಬರ್ 25ರಿಂದ ಯೂಟ್ಯೂಬ್ ನಲ್ಲಿ ಉಚಿತವಾಗಿ ವೀಕ್ಷಕರಿಗೆ ದೊರೆಯುವ ಮೂಲಕ ತುಳು ಚಿತ್ರಪ್ರೇಮಿಗಳಿಗೆ ಮನರಂಜಿಸಲು ಸಜ್ಜಾಗಿದೆ ಎಂದು ಚಿತ್ರ ತಂಡ ಘೋಷಿಸಿದೆ. ಈ ಕುರಿತಂತೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ಆನಂದ್ ಎನ್. ಕುಂಪಲ, ನಿರ್ದೇಶಕ ರಾಹುಲ್ ಅಮೀನ್, ನಾಯಕ ನಟ ವಿನಿತ್ ಕುಮಾರ್ ಮತ್ತು ನಾಯಕ ನಟಿ ಸಮತಾ ಅಮೀನ್ 2025ರ ಜನವರಿ 31ರಂದು ತುಳುನಾಡಿನಾದ್ಯಂತ ಅದ್ಧೂರಿಯಾಗಿ…

Read More

ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ಗೋವುಗಳಿಗೆ ಗೋ ಪೂಜೆ

ಮಂಗಳೂರು: ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಶ್ರೀಯುತ ಗುರುರಾಜ್ ಭಟ್ ರವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ 33 ಕೋಟಿ ದೇವತೆಗಳ ಅವಾಸಸ್ಥಾನವಾಗಿರುವ ಗೋ- ಮಾತೆಯ ಪೂಜೆಯನ್ನು ಆಚರಿಸಲಾಯಿತು. ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನ, ಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ – ಸಾಮರಸ್ಯ ಮಂಗಳೂರು ಅಧ್ಯಕ್ಷೆ…

Read More

ಯಂಗ್‌ ಇಂಡಿಯನ್ಸ್ ಆಲೋಚನೆಗಳಿಂದ ಶ್ರೀಮಂತವಾಗಲಿದೆ ಕರಾವಳಿಯ ಕಡಲ ಕಿನಾರೆ …. !

ಮಂಗಳೂರು: ಯಂಗ್‌ ಇಂಡಿಯನ್ಸ್ (Yi) ಎನ್ನುವುದು ಭಾರತದ ಯುವಕರು ಒಟ್ಟುಗೂಡಿ, ನಾಯಕತ್ವ ವಹಿಸಿ, ಸಹಸ್ರಜನಶೀಲತೆಯ ಮೂಲಕ ಭಾರತದ ಭವಿಷ್ಯವನ್ನು ಪ್ರಭಾವಿತಗೊಳಿಸುವ ಚಳುವಳಿಯಾಗಿದೆ. ಇದು ಭಾರತೀಯ ಕೈಗಾರಿಕಾ ಪರಿಷತ್ (Confederation of Indian Industry – CII)ನ ಅವಿಭಾಜ್ಯ ಅಂಗವಾಗಿದ್ದು ಸರ್ಕಾರೇತರ, ಲಾಭರಹಿತ, ಕೈಗಾರಿಕೆ ಮುನ್ನಡೆಸುವ ಮತ್ತು ನಿರ್ವಹಿಸುವ ಸಂಸ್ಥೆಯಾಗಿದೆ ಇದು ಭಾರತದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವಹಿಸುವ ಸಂಸ್ಥೆಯಾಗಿದ್ದು ಈಗಾಗಲೇ ಸಾಕಷ್ಟು ಸಾಹಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಿದೆ ಎಂದು ಸಾಲೋಮೆ ಲೋಬೊ ಪೆರೇರಾ ತಿಳಿಸಿದರು . ನಗರದ…

Read More

11 ತಿಂಗಳ ಮಗು ನೀರಿನ ಟಬ್ ಗೆ ಬಿದ್ದು ಸಾವು !

ಬೆಂಗಳೂರು: ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್ ಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಬಾಲಕಿಯನ್ನು ಖುಷಿ ಎಂದು ಗುರುತಿಸಲಾಗಿದೆ. ಚನ್ನಪಟ್ಟಣದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಂಷಾದ್ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ತೀವ್ರ ಬಾಯಾರಿಕೆಯಿಂದ ಪತ್ನಿ ಮುಸ್ಕಾನ್ ಅವರ ಬಳಿ ಕುಡಿಯಲು ನೀರು ಕೇಳಿದ್ದರು. ಪತಿಗಾಗಿ ನೀರು ತರಲು ಮುಸ್ಕಾನ ಅಡುಗೆ ಮನೆಗೆ ತೆರಳಿದ್ದಾಗ, ಮನೆಯೊಳಗೆ ಆಟವಾಡುತ್ತಿದ್ದ ಮಗು ಖುಷಿ ಟಬ್‌ನಲ್ಲಿದ್ದ ನೀರಿನೊಳಗೆ ಬಿದ್ದಿದೆ….

Read More
error: Content is protected !!