Headlines

ಮಚ್ಚಂಪಾಡಿಯಲ್ಲಿ, ಹೈಟೆನ್ಷನ್ ಲೈನ್ ಅಪಾಯ; ಸ್ಥಳೀಯರು ಮತ್ತು ಪಕ್ಷಿಗಳ ಪ್ರಾಣಕ್ಕೆ ಬೆದರಿಕೆ

ಮಂಜೇಶ್ವರ: ಮಚ್ಚಂಪಾಡಿ ಪುಚ್ಚತ್ತ್ ವಯಲ್ ಜುಮಾ ಮಸೀದಿ ರಸ್ತೆ ಸಮೀಪ ಹಾದುಹೋಗುವ ಹೈಟೆನ್ಷನ್ (ಎಚ್.ಟಿ.) ವಿದ್ಯುತ್ ತಂತಿಗಳು ಸ್ಥಳೀಯರ ಸುರಕ್ಷತೆಗೆ ದೊಡ್ಡ ಅಪಾಯವಾಗಿವೆ. ಕಿರಿದಾದ ರಸ್ತೆಯ ಅಂಚಿನಲ್ಲಿರುವ ಸಾಮಾನ್ಯ ಮನೆಗಳ ವಿದ್ಯುತ್ ಲೈನ್‌ಗಳ ಮೇಲೆ ಈ ಅಪಾಯಕಾರಿ ಹೈಟೆನ್ಷನ್ ಲೈನ್ ಹಾದುಹೋಗುತ್ತಿದೆ. ಈ ಲೈನ್‌ಗಳು ತೆಂಗಿನ ಮರಗಳು, ಅಡಿಕೆ ಮರಗಳು ಮತ್ತು ಮನೆಗಳಿಗೆ ತೀರಾ ಹತ್ತಿರದಲ್ಲಿವೆ. ಬಲವಾದ ಗಾಳಿ ಮತ್ತು ಮಳೆಯ ಸಮಯದಲ್ಲಿ ತೆಂಗಿನ ಗರಿಗಳು ಲೈನ್‌ಗೆ ತಗುಲಿ ಬೆಂಕಿ ಕಿಡಿಗಳು ಹೊತ್ತಿಕೊಳ್ಳುತ್ತವೆ. ಇಂತಹ ಘಟನೆಗಳು ದೊಡ್ಡ…

Read More

ತುಳು ಸಿನಿಮಾ ‘ಪಿದಾಯಿ’ ಸೆಪ್ಟೆಂಬರ್ 12ನೇ ತಾರೀಕಿನಂದು ತೆರೆಗೆ

ಮಂಗಳೂರು: ನಮ್ಮ ಕನಸು ಬ್ಯಾನರ್ ಅಡಿಯಲ್ಲಿ ಕೆ. ಸುರೇಶ್ ಅವರ ನಿರ್ಮಾಣದ , ರಮೇಶ್ ಶೆಟ್ಟಿಗಾರ್ ಕಥೆ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12ನೇ ತಾರೀಕಿನಂದು ಕರಾವಳಿಯಾದ್ಯಂತ ಬೆಳ್ಳಿ ತೆರೆಯ ಮೇಲೆ ಬಿಡುಗಡೆಯಾಗಲಿದೆ‌ ಎಂದು ನಟಿ ರೂಪಾ ವರ್ಕಾಡಿ ತಿಳಿಸಿದರು . ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಮಾ, ಜಾರ್ಖಂಡ್‌ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…

Read More

ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಅಕ್ಟೋಬರ್ 1 ರಂದು

ಮಂಗಳೂರು :ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 1 ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ನಡೆಯಲಿರುವುದು ಎಂದು ಮಿಥುನ್ ರೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುವ, ಅದನ್ನು…

Read More

ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ.

ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶ್ರೀ ಶಂಕರನಾರಾಯಣ ಭಟ್ ಸಾದಂಗಾಯ, ನಿವೃತ್ತ ಮುಖ್ಯಶಿಕ್ಷಕರು,ಜಿ.ಎಚ್.ಎಸ್.ಎಸ್ ಮಂಗಲ್ಪಾಡಿ ಇವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು. ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಕುಮಾರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಎ ಯು ಪಿ ಎಸ್ ಆನೆಕಲ್ ಶಾಲೆಯ ನಿವೃತ್ತ ಮುಖ್ಯಶಿಕ್ಷರಾದ ಸತ್ಯನಾರಾಯಣ ಭಟ್, ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಹಾಗೂ ಸನ್ಮಾನಿತರ ಧರ್ಮಪತ್ನಿ ನಿರ್ಮಲಾ ಟೀಚರ್…

Read More

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ:

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಎಂ.ಸಿ ಅವರು ನಿರ್ವಹಿಸಿದರು. ಸ್ಪರ್ಧೆಯಲ್ಲಿ ಲಿಂಗಪ್ಪ ಕುಬಣೂರು ,ದಯಾನಂದ ಸೋಂಕಾಲ್,ಕೃಷ್ಣ ಕೆಪಿ ಸೋಂಕಾಲ್ ತೀರ್ಪುಗಾರರಾಗಿ ಸಹಕರಿಸಿದರು. ಆ ಬಳಿಕ ಹರೀಶ್ ಎಂ.ಜಿ ,ರಾಮಚಂದ್ರ ಎಂ ,ವೇದಿಕೆ ಅಧ್ಯಕ್ಷರಾದ ಕಿಶೋರ್ ಕುಮಾರ್ ಅವರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಮಿತಾ ಸುರೇಶ್ ನಿರೂಪಿಸಿದರು.

Read More

ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ(ರಿ) ವತಿಯಿಂದ ಓಣಂ ಹಬ್ಬ ಆಚರಣೆ

ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ(ರಿ)K.G.D. 6412 ಇದರ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ ಹಾಗೂ ಔತಣ ಕೂಟ ನಡೆಯಿತು. ಈ ಕಾರ್ಯಕ್ರಮವನ್ನು p.k ಅಹ್ಮದ್ ಹುಸ್ಸೈನ್ ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದ್ಶರು ದೀಪ ಬೆಳಗಿಸಿ ಉದ್ಘಾಟಿಸಿದರು ಇದರ ಅಧ್ಯಕ್ಷತೆಯನ್ನು ಯುವಶಕ್ತಿ ಲೈಬ್ರೆರಿ ಅಧ್ಯಕ್ಷರದ ಲಕ್ಷ್ಮನ ಪೂಜಾರಿ ವಹಿಸಿದರು ಮಂಜೇಶ್ವರ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ u ಶೆಟ್ಟಿ Y F C…

Read More

ಶ್ರೀ ಸತ್ಯನಾರಾಯಣ ಭಜನಾ ಮಂದಿರ(ರಿ.) ಅಂಬೇಡ್ಕರ್ ನಗರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಶ್ರೀ ಸತ್ಯನಾರಾಯಣ ಭಜನಾ ಮಂದಿರ(ರಿ.) ಅಂಬೇಡ್ಕರ್ ನಗರ, ಉದ್ಯಾವರ ಗುತ್ತು, ಮಂಜೇಶ್ವರ.ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಉದಯ ಪೂಜಾರಿ ಅವರು ನೆರವೇರಿಸಿದರು. ವಾರ್ಷಿಕೋತ್ಸವವು ನವೆಂಬರ್ 15 ರಿಂದ 17 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂದಿರದ ಗೌರವಾಧ್ಯಕ್ಷರಾದ ಶ್ರೀ ಐತಪ್ಪ ಜಿ, ಉಪಾಧ್ಯಕ್ಷ ಶ್ರೀ ಲಕ್ಷ್ಮಣ,ಕೋಶಾಧಿಕಾರಿ ಶ್ರೀ ರಾಮ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಸಾವಿತ್ರಿ, ಅಧ್ಯಕ್ಷೆ ಶ್ರೀಮತಿ ಸವಿತಾ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಉದಯ ಪೂಜಾರಿಯವರನ್ನು ಶಾಲು…

Read More

ಮಳಿoಗರೇ ನಾರಾಯಣ ಗುರು ಮಂದಿರದಲ್ಲಿ-171ನೇ ನಾರಾಯಣ ಗುರು ಜಯಂತಿಯನ್ನು ಆಚರಣೆ

ಕುಂಬಳೆ :ಮಳಿoಗರೇ ನಾರಾಯಣ ಗುರು ಮಂದಿರದಲ್ಲಿ ಮೊರ ಶ್ರೀ ಐವರ್ ಭಗವತಿ ಕಣ್ಣೂರು ಯುವಜನ ಸಂಘ ಮಳಿoಗರೆ ಇವರ ವತಿಯಿಂದ 171ನೇ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಗರು ಮಂದಿರದ ಅಧ್ಯಕ್ಷ ರಾದ ಭಾಸ್ಕರ ಕುಂಬಳೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯನ್ ಬದಿಯಡ್ಕ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಭಾಗವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬಳೆ ಹಾಗೂ ಮಾದವ ಕುಂಬಳೆ ಸಂಘದ…

Read More

ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಅಂಗವಾಗಿ ನಾರಾಯಣಗುರು ವೃತ್ತದಲ್ಲಿರುವ ಪೂಜ್ಯರ ಪ್ರತಿಮೆಗೆ ಶಾಸಕ ವೇದವ್ಯಾಸ ಕಾಮತ್ ರವರು ಪುಷ್ಪ ನಮನ

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಅಂಗವಾಗಿ ನಗರದ ನಾರಾಯಣಗುರು ವೃತ್ತದಲ್ಲಿರುವ ಪೂಜ್ಯರ ಪ್ರತಿಮೆಗೆ ಶಾಸಕ ವೇದವ್ಯಾಸ ಕಾಮತ್ ರವರು ಪುಷ್ಪ ನಮನಗಳನ್ನು ಸಲ್ಲಿಸಿದರು. ನಂತರ ಮಾತನಾಡಿದ ಅವರು, ಪೂಜ್ಯರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಹಿಂದುಳಿದವರ ಸಹಿತ ಸರ್ವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಂತ. ಕೇರಳದಲ್ಲಿ ಹುಟ್ಟಿದ ಅವರು ಅಲ್ಲಿನ ಅವ್ಯವಸ್ಥೆಯ ವಿರುದ್ಧ ಹಿಂದೂ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಿದ್ದರು. ಹಿಂದಿನ…

Read More

ಅನುಕರಣೀಯ ವ್ಯಕ್ತಿತ್ವ -ಆದರ್ಶ ಮಹಿಳೆ -ಶ್ರೀಮತಿ ಗಾಯತ್ರಿ ನಾಗೇಶ್ -ಕೃತಿ ಬಿಡುಗಡೆ

ಕಾಸರಗೋಡು : ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಪ್ರಕಾಶನದ ಒಂಬತ್ತನೇ ಕೃತಿ “ಆದರ್ಶ ಮಹಿಳೆ ಗಾಯತ್ರಿ ನಾಗೇಶ್ “ಎಂಬ ವ್ಯಕ್ತಿ ಚಿತ್ರಣ ಕೃತಿ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಶರವು ದೇವಸ್ಥಾನ ದ ಬಳಿಯ ಬಾಳಮ್ ಭಟ್ ಹಾಲ್ ನಲ್ಲಿ ಜರಗುವ “ಗಾಯತ್ರಿ ನಾಗೇಶ್ ಸಂಸ್ಮರಣೆ -ನುಡಿ ನಮನ -ಕೃತಿ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಗೊಳ್ಳಲಿದೆ. ಕಾರ್ಯಕ್ರಮ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ…

Read More
error: Content is protected !!