Headlines

25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಶ್ರೀಮತಿ ಪ್ರೇಮಲತಾ ಟೀಚರ್ ಗೆ ಗೌರವ ಸನ್ಮಾನ

ಮಂಜೇಶ್ವರ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜಿ.ಎಲ್. ಪಿ.ಯಸ್ ವಾಮಂಜೂರು ಶಾಲಾ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸೇರಿದಂತೆ ಶಾಲೆಯಲ್ಲಿ ಸುದೀರ್ಘ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಶ್ರೀಮತಿ ಪ್ರೇಮಲತಾ ಟೀಚರ್ ಇವರನ್ನು ಅವರ ಮನೆಗೆ ಭೇಟಿ ನೀಡಿ ಗೌರವಿಸಲಾಯಿತು.

Read More

ಕೂಡಲೇ ರಸ್ತೆಯ ಹೊಂಡಗಳನ್ನು ದುರಸ್ತಿಗೊಳಿಸಿ:- ಶಾಸಕ ಕಾಮತ್ ಸೂಚನೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕಸದ ಸಮಸ್ಯೆ ವಿಪರೀತವಾಗಿರುವುದು, ಬೀದಿ ದೀಪ, ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ತೊಂದರೆ ಅನುಭವಿಸಿರುವ ಪ್ರಕರಣಗಳು ನಡೆದಿದೆ. ವಿಪರೀತ ಮಳೆಯಿದ್ದರೂ ತಾತ್ಕಾಲಿಕವಾಗಿಯಾದರೂ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನಗರದಲ್ಲಿ ಕಸದ ಸಮಸ್ಯೆ ವಿಪರೀತವಾಗಿದ್ದು, ಗಾಂಧಿನಗರದ ಶಾಲೆಯ ಹತ್ತಿರ, ಮರೋಳಿಯ ಬಸ್…

Read More

ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರುನಲ್ಲಿ-ಈದ್ ಮೀಲಾದುನ್ನೆಬಿ ಸಡಗರ.

ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಮಂಗಳೂರು ಇದರ ಅದೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ 1500ನೇ ಈದ್ ಮೀಲಾದುನ್ನೆಬಿ ಸಡಗರ ಸಂಭ್ರಮದಿಂದ ದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರವೂಫ್ ರವರು ಧ್ವಜಾರೋಹಣ ಗೈದು ಪ್ರಸ್ತುತ ರ್ಯಾಲಿಗೆ ಚಾಲನೆ ನೀಡಿದರು.ಕಾರ್ಯಕ್ರಮನ್ನು ಜಮಾಅತ್ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆ ಮಾಡಿ ಉದ್ಘಾಟನೆ ಮಾಡಿದರು.ತನ್ನ ಭಾಷಣದಲ್ಲಿ ಈ ಮೀಲಾದ್ ರ್ಯಾಲಿ ಶಾಂತಿ ಸಮಾಧಾನ ಸೌಹಾರ್ದತೆಯನ್ನು ಸಾರುವುದಾಗಿದೆ.ಪರಸ್ಪರ ಸೌಹಾರ್ದತೆಯೊಂದಿಗೆ ಬಾಳೋಣ…

Read More

ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಓಣಂ ಆಚರಣೆ.

ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ನಮ್ಮ ಸಮಾಜದ ಮಹಿಳೆಯರು ಕೂಡ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಬೇಕು: ಭಾಗೀರಥಿ ರಾಮ ಚಕ್ಕಿಗುಡ್ಡೆ , ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಓಣಂ ಆಚರಣೆ : ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿಯ ಸಹಯೋಗದೊಂದಿಗೆ ವಾಮಂಜೂರು ಶಾಲೆಯಲ್ಲಿ ಓಣಂ ಆಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಶ್ರೀಮತಿ ಭಾಗೀರಥಿ ರಾಮ ಚಕ್ಕಿಗುಡ್ಡೆ ಉದ್ಘಾಟಿಸಿದರು. ಇಡೀ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ…

Read More

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತ ಗುಂಡಿಮಯ.

ಮಂಗಳೂರಿನ ಪ್ರತಿಷ್ಠಿತ ವೃತ್ತಗಳಲ್ಲಿ ಒಂದಾದ ಬಂಟ್ಸ್ ಹಾಸ್ಟೆಲ್ ವೃತ್ತದ ಆಸುಪಾಸಿನ ಮಾರ್ಗವು ಗುಂಡಿಗಳಿಂದ ತುಂಬಿದ್ದು ದುರಸ್ತಿ ಮರೀಚಿಕೆಯಾಗಿದೆ. ದಿನ ನಿತ್ಯವೂ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳು ಗು0ಡಿಗೆ ಬಿದ್ದು ಏಳುತ್ತಿವೆ. ಮಳೆ‌ ಬಂದರೆ ವಾಹನಗಳು ದೌಡಾಯಿಸುವಾಗ ಹೊಂಡದ ನೀರು ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕ ಮಾಡುತ್ತದೆ. ಮಾರ್ಗದ ತಿರುವಿನಲ್ಲಿ ಉಂಟಾದ ಗುಂಡಿಯಂತೂ‌ ಅಪಾಯಕ್ಕೆ ಆಸ್ಪದವನ್ನು ನೀಡುತ್ತಿದೆ. ಚರಂಡಿಗೆ ಹೊದಿಸಲಾದ ಸ್ಲಾಬ್ ನ ಸಿಮೆಂಟ್ ಎದ್ದು‌ ಹೋಗಿದ್ದು ಕಬ್ಬಿಣದ ಕಂಬಿ ಹೊರಗೆ ಬಂದಿದೆ. ಅದರ ದುರಸ್ತಿ ಕಾರ್ಯಗಳು…

Read More

ಮಕ್ಕಳನ್ನು ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಿ: ಖಾದರ್

ಮಂಗಳೂರು: ವಿದ್ಯಾರ್ಥಿಗಳು ದೇಶದ ಪರಂಪರೆ ಉಳಿಸಿಕೊಂಡು ಹೋಗುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಗತ್ಯ. ಮಕ್ಕಳನ್ನು ತಂದೆ, ತಾಯಂದಿರ ಮಾತ್ರವಲ್ಲದೆ ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಬೇಕಿದೆ ಎಂದು ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲಾ ಸಭಾಂಗಣದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ…

Read More

ಆನ್‌ಲೈನ್ ಟ್ರೇಡಿಂಗ್ ವಂಚನೆ: 6 ಮಂದಿ ಬಂಧನ

ಮಂಗಳೂರು: ಲೈನ್ ವಂಚನೆ ಪ್ರಕರಣಗಳಲ್ಲಿ ಒಟ್ಟು ಆರು ಮಂದಿ ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, ಒಟ್ಟು ೬ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್(೫೪), ಎಂಬವರಿಗೆ ಹೂಡಿಕೆ ಹೆಸರಿನಲ್ಲಿ ಒಟ್ಟು ೭೫,೦೦,೦೦೦ರೂ. ಹಣವನ್ನು ಆನ್‌ಲೈನ್ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸೆನ್ ಪೊಲೀಸರು, ಸುರತ್ಕಲ್ ಕೋಡಿಕೆರೆಯ ಮೊಹಮದ್ ಕೈಸ್(೨೦), ಹೆಜಮಾಡಿ ಕನ್ನಂಗಾರಿನ ಅಹಮದ್ ಅನ್ವೀಜ್ (೨೦), ಬಂಟ್ವಾಳ ಜೋಡುಮಾರ್ಗದ ಸಫ್ವಾನ್(೩೦), ತಾಸೀರ್(೩೧) ಎಂಬವರನ್ನು ಬಂಧಿಸಿ, ಮೊಬೈಲ್ ಫೋನ್‌ಗಳನ್ನು…

Read More

ಬಾವಿಯಲ್ಲಿ ಮಹಿಳೆಯ ಶವ ಪತ್ತೆ.

ಮಂಜೇಶ್ವರ:ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಸಮೀಪದ ಮೀಯಪದವು ಅಡ್ಕದಗುರಿ ಎಂಬಲ್ಲಿ ನಡೆದಿದೆ.ಅಡ್ಕದಗುರಿಯ ಐರಿನ್ ಡಿಸೋಜ (60) ಮೃತಪಟ್ಟವರು. ಬುಧವಾರ ರಾತ್ರಿ ಮಲಗಿದ್ದ ಐರಿನ್ ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ಮೃತದೇಹ ಮನೆ ಅಂಗಳದ ಬಾವಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತಲಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು. ಮಂಜೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

Read More

ಗುರುಭ್ಯೋ ನಮಃ

ಅಂಧಕಾರದ ಕತ್ತಲನ್ನು ದೂರ ಮಾಡಿ ಬದುಕಿಗೆ ಜ್ಞಾನಜ್ಯೋತಿಯ ಬೆಳಗಿಸಿ ಜಗದ ಮಾಯೊಳಗಿನ ಮಹಿಮೆಯ ತಿಳಿಸಿದ ನನ್ನೆಲ್ಲಾ ಗುರುಗಳಿಗೆ ಪ್ರಣಾಮಗಳು. ಇಂದು ನನ್ನ ಬದುಕಿನ ಸುಂದರ ಕ್ಷಣಕ್ಕೆ ಕಾರಣರಾದ ನನ್ನ ಗುರುಗಳ ಬಗ್ಗೆ ನಾನು ಹೇಳಲೇಬೇಕು. ಸೋಮಾರಿಯಾದ ನನ್ನಂಥಹಾ ವಿದ್ಯಾರ್ಥಿಯಲ್ಲೂ ಬರವಣಿಗೆಯ ಅಭಿರುಚಿಯನ್ನು ಬೆಳಸಿ, ನನ್ನಿಂದ ಅಸಾಧ್ಯ ಎಂದುಕೊಂಡಿದ್ದ ಸಾಹಿತ್ಯ ರಚನೆಗೆ ನೆರಳಾಗಿ, ಪ್ರತೀ ಅಕ್ಷರದ ಹಿಂದಿನ ಶಕ್ತಿಯಾಗಿ , ಬಾಳಿಗೆ ನವ ಕನಸನ್ನು ಕಾಣಲು – ಅದರ ಸಾಕ್ಷಾತ್ಕಾರ ಮಾಡಲು ಸಾಧ್ಯ ಪಡಿಸುವ ಸೂರ್ತಿಯಾಗಿ, ಪತ್ರಕರ್ತ ದಿಟ್ಟ…

Read More

ಚಂದ್ರ ಗ್ರಹಣ 2025

ಚಂದ್ರ ಗ್ರಹಣವು 2025 ರ ಕೊನೆಯ ಇದೇ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಚಂದ್ರ ಗ್ರಹಣವನ್ನು ಭಾರತದಲ್ಲಿ ನೋಡಬಹುದಾಗಿದೆ. ಸೆಪ್ಟೆಂಬರ್ 7ರ ಮಧ್ಯರಾತ್ರಿ 9:57 ಕ್ಕೆ ಶುರುವಾಗಿ 8ರ ಮಧ್ಯರಾತ್ರಿ 1:26 ರವರೆಗೆ ಗ್ರಹಣ ಕಾಲ ಇರಲಿದೆ. ಚಂದ್ರ ಗ್ರಹಣದ ಪೂರ್ಣ ಪ್ರಭಾವದ ಆರಂಭ ಮಧ್ಯರಾತ್ರಿ 12.28 ರಿಂದ 1.56 ರವರೆಗೆ ಇರಲಿದೆ.

Read More
error: Content is protected !!