ಮಂಜೇಶ್ವರದೆಲ್ಲೆಡೆ ಸಂಭ್ರಮದ ಈದ್ ಮಿಲಾದ್.
ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ (ಸ.ಅ.ವ) ಅವರ ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್ ನಬಿ ಪವಿತ್ರತೆಯೊಂದಿಗೆ ಹಾಗೂ ಭಕ್ತಿ ಭಾವದಿಂದ ಮಂಜೇಶ್ವರದಾದ್ಯಂತ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಮೌಲೂದ್ ಪಠಣ, ಧಾರ್ಮಿಕ ಉಪನ್ಯಾಸಗಳು ಮತ್ತು ಪ್ರಾರ್ಥನೆಗಳು ನೆರವೇರಿದವು. ಮಂಜೇಶ್ವರದ ಪ್ರಮುಖ ಬೀದಿಗಳು ಹಸಿರು ಧ್ವಜಗಳು, ಬೆಳಕಿನ ಅಲಂಕಾರ ಮತ್ತು ಧಾರ್ಮಿಕ ಸಂದೇಶಗಳಿಂದ ಕಂಗೊಳಿಸಿತು. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರೂ ಶೋಭಾಯಾತ್ರೆಗಳಲ್ಲಿ ಪಾಲ್ಗೊಂಡು ಪ್ರವಾದಿಯ ಜೀವನೋಪದೇಶಗಳನ್ನು ಸ್ಮರಿಸಿದರು. ಧಾರ್ಮಿಕ ಪಂಡಿತರು ಪ್ರವಾದಿಯ ಆದರ್ಶಗಳನ್ನು ಪಾಲಿಸುವ ಮಹತ್ವವನ್ನು…
