Headlines

ವಯೋಶ್ರೀ ಯೋಜನೆಯಡಿಯಲ್ಲಿ ಹಿರಿಯ ಅಶಕ್ತರಿಗೆ ಸಹಾಯಕ ಉಪಕರಣ ವಿತರಣೆ

ಕಾಸರಗೋಡು : ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ 60 ವರ್ಷ ಮೇಲ್ಪಟ್ಟವರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು. ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಸ್ ಡೆಸ್ಕ್ ಮೂಲಕ ನೋಂದಾಯಿಸಿದವರಿಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಶ್ವಿನಿ ಎಂ.ಎಲ್. ಅವರು ಸಹಾಯಕ ಉಪಕರಣಗಳನ್ನು ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾ ಕಚೇರಿ ಡಾ. ಶ್ಯಾಮ್ ಪ್ರಕಾಶ್ ಮುಖರ್ಜಿ ಮಂದಿರದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು. 60 ವರ್ಷ ಮೇಲ್ಪಟ್ಟ ಹೆಸರು ನೋಂದಾಯಿಸಿದ ಹಿರಿಯ ಕಾರ್ಯಕರ್ತರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು.

Read More

ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಕಡವತ್ ನಲ್ಲಿ ಟಾಲ್ ಪ್ಲಾಝಾ ಸ್ಥಾಪಿಸಲು ನಾಗರಿಕರ ಅಡ್ಡಿ -ಸಂರಕ್ಷಣೆ ನೀಡುವಂತೆ ಪೊಲೀಸ್ ಮೊರೆ ಹೋದ ಗುತ್ತಿಗೆದಾರ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಕಡವತ್ ನಲ್ಲಿ ಟಾಲ್ ಪ್ಲಾಝಾ ಸ್ಥಾಪಿಸಲು ನಾಗರಿಕ ಹಿತಾಸಕ್ತಿಯ ಕ್ರಿಯಾ ಸಮಿತಿ ವಿರೋಧ ಒಡ್ಡಿ, ಕಾಮಗಾರಿ ತಡೆಯುತ್ತಿರುವುದರಿಂದ ಕಾರ್ಮಿಕರಿಗೆ ಸಂರಕ್ಷಣೆ ನೀಡಿ ಕಾಮಗಾರಿಗೆ ಭದ್ರತೆ ಒದಗಿಸಬೇಕೆಂದು ಗುತ್ತಿಗೆದಿರರಾದULPC ಸೊಸೈಟಿ ಪ್ರತಿನಿಧಿಗಳು ಪೋಲೀಸ್ ಮೊರೆ ಹೊರೆ ಹೋಗಿದ್ದಾರೆ. ಟಾಲ್ ಪ್ಲಾಝಾ ನಿರ್ಮಾಣದ ತಡೆಯಾಜ್ಞೆಯನ್ನು ಹೈಕೋರ್ಟು ಮಧ್ಯಂತರ ಆದೇಶದಲ್ಲಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮುಂದಿನ 60ದಿನದೊಳಗೆ ಟೋಲ್ ಪ್ಲಾಝಾ ನಿರ್ಮಿಸಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರಿಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅವರು ಕಾಮಗಾರಿ…

Read More

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಪುಟಾಣಿ ಮಕ್ಕಳಿಗೆ ಮಣ್ಣಿನ ಗಣಪತಿ ಸ್ಪರ್ಧೆ 2025 . ಆಗಸ್ಟ್ 27 ರಂದು ಮಧ್ಯಾಹ್ನ .

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಪುಟಾಣಿ ಮಕ್ಕಳಿಗೆ ಮಣ್ಣಿನ ಗಣಪತಿ ಸ್ಪರ್ಧೆ 27 ರಂದು ಮಧ್ಯಾಹ್ನ 2 ರಿಂದ 3:30 ಕ್ಕೆ ಲಾಲ್ ಭಾಗ್ ಸ್ಕೌಟ್ ಆಂಡ್ ಗೈಡ್ ಭವನದಲ್ಲಿ ನಡೆಯಲಿದೆ.ಈ ಸ್ಪರ್ಧೆಯಲ್ಲಿ 5 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು . .ಸ್ಪರ್ಧೆಗಳು ನಿಯಮ ಸೂಚಿ ಮತ್ತು ಮಾನದಂಡದ ಆಧಾರದಲ್ಲಿ ನಡೆಯಲಿದೆ.ಸ್ಪರ್ಧೆಯ ನೋಂದಣಿ ಆಗಸ್ಟ್ 25 ಕ್ಕೆ ಕೊನೆಯ ದಿನ .ಸ್ಪರ್ದಿಗಳು ಮಣ್ಣನ್ನು ತರಲು ಅವಕಾಶವಿದೆ.ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ…

Read More

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ಮುಸುಕುಧಾರಿಯ ಬಂಧನ..!

ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಎಸ್‌ಐಟಿ ಅಧಿಕಾರಿಗಳು ದೂರುದಾರ ‘ಮಾಸ್ಕ್‌ಮ್ಯಾನ್’ ಅವರನ್ನು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಆಗಸ್ಟ್ 23 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಮೂಲಗಳ ಪ್ರಕಾರ, ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಆಗಸ್ಟ್ 22 ರಂದು ಬೆಳಿಗ್ಗೆ 10 ರಿಂದ ಆಗಸ್ಟ್ 23 ರಂದು ಬೆಳಿಗ್ಗೆ 5 ಗಂಟೆಯವರೆಗೆ ದೂರುದಾರರನ್ನು…

Read More

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಮಯ ಮಕ್ಕಳ ಫೋಟೋ ಸ್ಪರ್ಧೆ 2025 .ಫೋಟೋ ಸಲ್ಲಿಕೆಗೆ ಕೊನೆಯ ದಿನಾಂಕ 25 ಆಗಸ್ಟ್ 2025.

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಮಯ ಮಕ್ಕಳ ಫೋಟೋ ಸ್ಪರ್ಧೆ 2025 ಆಯೋಜಿಸಲಾಗಿದೆ.ಭಾಗವಹಿಸುವವರು 1 – 10 ವರ್ಷ ದೊಳಗಿನ ಮಕ್ಕಳಾಗಿರಬೇಕು.ಛಾಯಾಚಿತ್ರ ಸ್ಪಷ್ಟವಾಗಿರಬೇಕು ಹಾಗೂ ಇತ್ತೀಚೆಗಿನದ್ದಾಗಿರಬೇಕು .ಛಾಯಾಚಿತ್ರದ ಹಿಂಭಾಗದಲ್ಲಿ ಮಗುವಿನ ಹೆಸರು ಮತ್ತು ಪೋಷಕರ ಸಂಪರ್ಕ ಸಂಖ್ಯೆ ಇರಬೇಕು .ಭಾಗವಹಿಸಲು ನಿಮ್ಮ ಮಗುವಿನ ಅತ್ಯುತ್ತಮ 1 ಚಿತ್ರವನ್ನು ಕಳುಹಿಸಿ ಒಂದು ಮುದ್ರಿತ ಹಾರ್ಡ್‌ ಕಾಪಿ ಛಾಯಾಚಿತ್ರವನ್ನು (ಗಾತ್ರ: 12X8 ಅಥವಾ 6X9 ಇಂಚು) ಸಲ್ಲಿಸಬೇಕು. ಎಲ್ಲಾ ಫೋಟೋಗಳನ್ನು ಸೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರದರ್ಶಿಸಲಾಗುತ್ತದೆ….

Read More

ಪ್ರತಾಪನಗರ 42 ನೇ ಸಾರ್ವಜನಿಕ ಗೌರಿ ಗಣೇಶೋತ್ಸವ ,8 ನೇ ವರ್ಷದ ಭಜನೋತ್ಸವ , ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ . ಆಗಸ್ಟ್ 24 ರಿಂದ.

ಉಪ್ಪಳ :ಪ್ರತಾಪನಗರ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಮಂದಿರದಲ್ಲಿ 42 ನೇ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಹಾಗೂ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಮತ್ತು 8 ನೇ ವರ್ಷದ ಭಜನೋತ್ಸವ ಆಗಸ್ಟ್ 24 ರಿಂದ 28 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ದಿನಾಂಕ 24 ರಂದು ಬೆಳಿಗ್ಗೆ 7 ರಿಂದ ಸಾಮೂಹಿಕ ಪ್ರಾರ್ಥನೆ ,ಗಣಹೋಮ .ಸಾಯಂಕಾಲ 3 30 ರಿಂದ ಬಜೆ ಹರಿನಾರಾಯಣ ಮಯ್ಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ…

Read More

ಕಾರ್ಯನಿರ್ವಹಣಾ ಶ್ರೇಷ್ಠತೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಕುಂಬಳೆ.

ಕುಂಬಳೆ: ಕಾರ್ಯನಿರ್ವಹಣಾ ಶ್ರೇಷ್ಠತೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯ ಕುಂಬಳೆ ಶಾಖೆ ಪೌರ ಸ್ವಾಗತ ಕಾರ್ಯಕ್ರಮ ನಡೆಯಿತು . ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ,ಹಿಂದುಳಿದ ವರ್ಗ ಖಾತೆ ಸಚಿವ ಓ .ಆರ್. ಕೇಳು ಉಧ್ಘಾಟಿಸಿದರು.ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಯಿರ ಯೂಸುಫ್ , ಸಂಸದ ರಾಜಮೋಹನ್ ಉಣ್ಣಿತಾನ್ ,ತ್ರಿಕರಿಪುರ ಶಾಸಕ ಎಂ ರಾಜಗೋಪಾಲನ್ , ಶಾಸಕ ಇ…

Read More

ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ.ಕೆ.ಶಿವಕುಮಾರ್.

ಬೆಂಗಳೂರು: “ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ ಮಾಡಬೇಕು ಎಂದು ಆಲೋಚನೆ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಎರಡನೇ ಸಭೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಮುಂದಿನ ಸಭೆಗೆ ಯಾರನ್ನು ಆಹ್ವಾನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ಬಂಡವಾಳ ಹೂಡಿಕೆದಾರರು, ಕೇಂದ್ರ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಯಲಾಗುತ್ತದೆ. ಕರಾವಳಿ ಭಾಗಕ್ಕೆ ಹೊಸ ರೂಪ ನೀಡಲಾಗುತ್ತದೆ” ಎಂದು ತಿಳಿಸಿದರು. “ಕರಾವಳಿ ಭಾಗದ ಜನಪ್ರತಿನಿಧಿಗಳು…

Read More

ಹದಗೆಟ್ಟ ರಸ್ತೆ ಸಂಚಾರ ಶೀಘ್ರ ಪುನರ್ ನಿರ್ಮಾಣಕ್ಕೆ ಶಾಸಕ ವೇದವ್ಯಾಸ್ ಕಾಮತ್ ಒತ್ತಾಯ

ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆಗಳು ಹಾಳಾಗಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇವೆಲ್ಲದರ ಪುನರ್ ನಿರ್ಮಾಣಕ್ಕಾಗಿ ತುರ್ತು ಕಾಮಗಾರಿ ಅಗತ್ಯವಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಗ್ರಹಿಸಿದರು. ಪ್ರಾಕೃತಿಕ ವಿಕೋಪದಿಂದಾಗಿರುವ ಹಾನಿಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ವಿಶೇಷ ಅನುದಾನ ಬಿಡುಗಡೆಗೊಳಿಸಿಲ್ಲ. ಎಲ್ಲವೂ ಕೇವಲ ಹಾಳೆಗಳಲ್ಲಿವೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ಇದೊಂತರಾ ಕನ್ನಡಿಯೊಳಗಿನ…

Read More

ಉಪ್ಪಳದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಅಗ್ನಿ ಅವಘಡ : ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ.

ಮಂಜೇಶ್ವರ : ಉಪ್ಪಳ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಹುಮಹಡಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಮಾಸ್ಟರ್ ಕಂಪ್ಯೂಟರ್ಸ್” ಎಂಬ ಸಂಸ್ಥೆಯಲ್ಲಿ ಬೆಂಕಿ ತಗುಲಿದ್ದು ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಹೊತ್ತಿ ನಾಶಗೊಂಡಿದೆ.ಮಾಹಿತಿ ಅರಿತು ಸ್ಥಳಕ್ಕೆ ಉಪ್ಪಳ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿ ವ್ಯಾಪಕವಾಗಿ ಹಬ್ಬಿದ ಪರಿಣಾಮ ಸ್ಥಳೀಯರಲ್ಲೂ ಆತಂಕ ಉಂಟಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ರೈಲ್ವೆ…

Read More
error: Content is protected !!