Headlines

ಬೀದಿ ನಾಯಿಗಳ ಅಟ್ಟಹಾಸಕ್ಕೆ ನಾಗರಿಕರ ಮುಗಿಲು ಮುಟ್ಟಿದ ಆಕ್ರಂಧನ: ಅಧಿಕಾರಸ್ಥರ ಮಡುಗಟ್ಟಿದ ಮೌನದ ವಿರುದ್ಧ ಮುಸ್ಲಿಂ ಲೀಗ್ ನಿಂದ ಬೃಹತ್ ಪ್ರತಿಭಟನೆ.

ಮಂಜೇಶ್ವರ, ಆಗಸ್ಟ್ 22 – ಬೀದಿ ನಾಯಿಗಳ ಅಟ್ಟಹಾಸದಿಂದ ತತ್ತರಿಸಿರುವ ಮಂಜೇಶ್ವರ ಗ್ರಾಮಸ್ಥರ ಮುಗಿಲು ಮುಟ್ಟಿದ ಆಕ್ರಂಧನಕ್ಕೆ ಕಿಂಚತ್ತೂ ಬೆಲೆ ಕಲ್ಪಿಸಿದ ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಥರ ಮಡುಗಟ್ಟಿದ ಮೌನದ ವಿರುದ್ಧ ನಾಗರಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಿನ ರೀತಿಯಲ್ಲಿ ಸ್ಪೋಟಕಗೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.ಶುಕ್ರವಾರದಂದು ಪಂಚಾಯತು ಅಧಿಕಾರಸ್ಥರ ವಿರುದ್ಧ ಅವರ ನಿರ್ಲಕ್ಷ್ಯವನ್ನು ವಿರೋಧಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮಂಜೇಶ್ವರ ಪಂಚಾಯತು ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು. ಪಕ್ಷದ…

Read More

ತಿಮರೋಡಿ ಬಂಧನ ಓಕೆ , ಪೂಂಜಾ ಇಲ್ಲ ಯಾಕೆ ?ಇಷ್ಟೇ ಸಾಕೇ ? ಸಾರ್ವಜನಿಕರ ಪ್ರಶ್ನೆ .ಕಾಂಗ್ರೆಸ್ ನ ಮೃದು ನೀತಿಯೇ ?

ಬಿಜೆಪಿ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದರೆಂಬ ಆರೋಪದ ಹಿನ್ನಲೆಯಲ್ಲಿ ಸೌಜನ್ಯ ಪರ ಹೋರಾಟಗಾರ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸರು ಉಜಿರೆಯ ಅವರ ನಿವಾಸದಿಂದ ಬಂಧಿಸಿದರು .ನಂತರ ಕಾನೂನಿನಂತೆ ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ವ್ಯಕ್ತಿಯೊಬ್ಬರ ಬಗ್ಗೆ ಸಾರ್ವಜನಿಕವಾಗಿಯೋ ಸಾಮಾಜಿಕ ಜಾಲತಾಣಗಳ ಮೂಲಕವೋ ನಿಂದಿಸಿ ಅಪಮಾನ ಮಾಡಿದರೆ ಈ ರೀತಿಯ ಕ್ರಮಗೊಳ್ಳುವುದು ಉಚಿತ .ಆದರೆ ಸರಕಾರವು ಕೈಗೊಳ್ಳುವ ಕಾನೂನು…

Read More

ಮಂಜೇಶ್ವರ ಠಾಣಾ ಎ ಎಸ್ಸೈ ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆ : ಡೆತ್ ನೋಟ್ ಲಭಿಸಿರುವುದಾಗಿ ಸೂಚನೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ಎಎಸ್ಟೈ ಯೊಬ್ಬರು ಪೊಲೀಸ್ ಕ್ಟಾರ್ಟರ್ಸ್ ನೊಳಗೆ ಆತ್ಮಹತ್ಯೆಗೈದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಕುತ್ತಿಕೋಲ್ ನಿವಾಸಿ ಮಧು (50) ಸಾವನ್ನಪ್ಪಿದ ದುರ್ದೈವಿ. ಶುಕ್ರವಾರ ಬೆಳಿಗ್ಗೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಮಾಹಿತಿ ಅರಿತು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಒಂದು ಡೆತ್ ನೋಟ್ ಕ್ವಾರ್ಟರ್ಸ್‌ನಿಂದ ಪತ್ತೆಯಾಗಿದೆ ಎಂಬ ಮಾಹಿತಿ ಇದೆ. ಮಧು ಅವಿವಾಹಿತರಾಗಿದ್ದರು. ಠಾಣೆಗೆ ಬರುವ ನಾಗರಿಕರೊಡನೆ ಉತ್ತಮ ಸಂಬಂಧ…

Read More

ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ಪ್ರಶಾಂತ್ ರೈ ಮೆಮೋರಿಯಲ್ ಕ್ರಿಕೆಟ್ ಪಂದ್ಯಾಟ

ಮಿಯಪದವು : ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಕಾಸರಗೋಡು ಇದರ ನೇತೃತ್ವದಲ್ಲಿ ದಿವಂಗತ ಅಧ್ಯಾಪಕ ಪ್ರಶಾಂತ್ ರೈ ಅವರ ಸ್ಮರಣಾರ್ಥ ಇಂಡಿಪೆಂಡೆನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಪಂದ್ಯಾಟವನ್ನು ಮೀಯಪದವು ಯು ಪಿ ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿದರು. ಟಿ ಎಸ್ಸಿ ಯ ಅಧ್ಯಕ್ಷರಾದ ಸಂಜೀವ ಸಿ ಎಚ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರುಗಳಾದ ಉದಯ್ ಸಾರಂಗ್ ಮತ್ತು ಸದಾಶಿವ ಬಾಲಮಿತ್ರ,ಜತೆ ಕಾರ್ಯದರ್ಶಿ ರಘುವೀರ್ ಉಪಸ್ಥಿತರಿದ್ದರು. ಟಿ ಎಸ್ಸಿ ಕಾರ್ಯದರ್ಶಿ ಪ್ರಶಾಂತ್…

Read More

ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಇನ್ನಾದರೂ ಬಡವರಿಗೆ ಸೂರು ಕಲ್ಪಿಸಿ:- ಶಾಸಕ ಕಾಮತ್

ಮಂಗಳೂರಿನ ಶಕ್ತಿನಗರದಲ್ಲಿ ತಮಗೊಂದು ಮನೆ ನಿರ್ಮಾಣವಾಗುತ್ತದೆಂದು 2017ರಿಂದಲೂ ಬಡಜನರು ಹಕ್ಕುಪತ್ರಗಳನ್ನು ಹಿಡಿದುಕೊಂಡು ಆಸೆ ಕಂಗಳಿಂದ ಕಾಯುತ್ತಿದ್ದು, ಇದೀಗ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದ್ದು ಪ್ರಸ್ತುತ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ದಲ್ಲಾದರೂ ಆ ಬೇಡಿಕೆ ಈಡೇರಿಸಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದರು. ಈ ಭಾಗದ ಹಿಂದಿನ ಶಾಸಕರು 2017 ರಲ್ಲೇ 930 ಬಡ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟು ತರಾತುರಿಯಲ್ಲಿ, ಕಾಮಗಾರಿಯ ಗುದ್ದಲಿ ಪೂಜೆ ಸಹ ಮಾಡಿ ಬಿಟ್ಟಿದ್ದರು. ಆದರೆ ಉದ್ದೇಶಿತ ಯೋಜನೆಯ…

Read More

ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿದ ಜನತೆ : ಮಂಜೇಶ್ವರ ಗ್ರಾ. ಪಂ. ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ.

ಮಂಜೇಶ್ವರ: ಬೀದಿ ನಾಯಿಗಳ ದಾಳಿಯಿಂದ ಹೈರಾಣಾಗಿರುವ ಮಂಜೇಶ್ವರದ ಜನತೆ ಗುರುವಾರ ಗ್ರಾಮ ಪಂಚಾಯತ್‌ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಆತಂಕ ಮೂಡಿಸಿರುವ ಈ ಸಮಸ್ಯೆಯ ಬಗ್ಗೆ ವರ್ಷಗಳ ಹಿಂದೆಯಿಂದಲೇ ಹಲವಾರು ಬಾರಿ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಇದ್ದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯತೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ,…

Read More

ಕೇರಳ ಕಾಂಗ್ರೆಸ್ ನಲ್ಲಿ ಅಶ್ಲೀಲಾ ಸಂದೇಶ ವಿವಾದ. ಇಕ್ಕಟ್ಟಿನಲ್ಲಿ ಕೆಪಿಸಿಸಿ..ಶಿಸ್ತು ಕ್ರಮಕ್ಕೆ ಆಗ್ರಹಿಸಿ ವಿಪಕ್ಷ ಗಳಿಂದ ವ್ಯಾಪಕ ಪ್ರತಿಭಟನೆ.ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್

ತಿರುವನಂತಪುರಂ : ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಹಾಗೂ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿಯಲ್ಲಿದ್ದ ರಾಜ್ಯ ಕಾಂಗ್ರೆಸ್ ಸಮಿತಿಗೆ ಯುವ ಕಾಂಗ್ರೆಸ್ ಅಧ್ಯಕ್ಷರ ಅಶ್ಲೀಲಾ ಸಂದೇಶ ವಿವಾದ ತೀವ್ರ ಮುಜುಗರ ಉಂಟು ಮಾಡಿದ್ದೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಉಭಯ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಪ್ರಚಾರ ಕಾರ್ಯದಲ್ಲಿ ಇದೊಂದು ಅಸ್ತ್ರವಾಗಲಿದೆ ಎಂಬ ಆತಂಕ ಕೆಪಿಸಿಸಿ ಗೆ ಇದೆ. ಯುವ ನಟಿ ಹಾಗೂ ಮಾಜಿ ಮಾಧ್ಯಮ ಪ್ರತಿನಿಧಿ ಯಾದ ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲಾ…

Read More

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಆಶ್ರಯದಲ್ಲಿ ನವಜೀವನೋತ್ಸವ – ಅಗೋಸ್ಟ್ -23 ರಂದು

ಕುಂಬಳೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಮತ್ತು ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಆಶ್ರಯದಲ್ಲಿ ನವಜೀವನೋತ್ಸವ ಹಾಗೂ ಕೆಸರ್ದ ಕಂಡದ್ ಕುಸಲ್ದ ಗೊಬ್ಬು ಲು ಅಗೋಸ್ಟ್ -23 ರಂದು ನಡೆಯಲಿದೆ.ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ. ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತೋಡಿ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ…

Read More

ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ರಂದು.

ಉಪ್ಪಳ : ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ 22 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ಭಾನುವಾರದಂದು ಪರಮಪೂಜ್ಯ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ,ಬೆಳಗ್ಗೆ 8 ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮ ಹವನ ಆರಂಭ,ಪೂರ್ವಾಹ್ನ 10 ಕ್ಕೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ,10.45 ಕ್ಕೆ ಪೂರ್ಣಾಹುತಿ ಮಹಾಪೂಜೆ ,ಮಧ್ಯಾಹ್ನ…

Read More

ಮಂಜೇಶ್ವರ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ,:ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಜೇಶ್ವರ : ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ತಲೆಮರೆಸೀಕೊಂಡಿದ್ದಆರೋಪಿ, ಕರ್ನಾಟಕ ಚಿತ್ರದುರ್ಗ ಮೂಲದ ತಿಮ್ಮಯ್ಯ (38)ಎಂಬಾತನನ್ನು ಮಂಜೇಶ್ವರ ಠಾಣಾಧಿಕಾರಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಆರೋಪಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಜಯ ಭಾಸ್ಕರ್ ರೆಡ್ಡಿ ನಿರ್ದೇಶನದಂತೆ ಎ ಎಸ್ಪಿ ನಂದಗೋಪನ್ ಅವರ ಮೇಲ್ನೋಟದ ತನಿಖೆಯಲ್ಲಿ ಮಂಜೇಶ್ವರ ಎಸ್‌ ಏಕೆ. ಆರ್. ಉಮೇಶ್ ನೇತೃತ್ವದಲ್ಲಿ ಬಂಧಿಸಲಾಯಿತು. ಅಪ್ರಾಪ್ತ ಬಾಲಕಿ ಗೆ ದೌರ್ಜನ್ಯ ನೀಡಿದ ಬಳಿಕ ಪೋಕ್ಸೊ ಕೇಸು ಹೊಂದಿದ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು.ಅನಂತರ ಈತನನ್ನು ಪತ್ತೆ…

Read More
error: Content is protected !!