Headlines

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು.ಸಿ ಪಿ ರಾಧಾಕೃಷ್ಣನ್ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥ ?

ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ 9 ರಂದು ನಡೆಸಲು ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ .ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ತನ್ನ ಹುದ್ದೆಗೆ ಇತ್ತೀಚಿಗೆ ಧಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವು ಆಗಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಹಾಗೂ ಲೋಕಸಭೆ ಯ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮನಿರ್ದೇಶನಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು. ಸಂವಿಧಾನದ 68 ನೇ ವಿಧಿ ಕಾಲಂ 2…

Read More

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ (ರಿ) K.G.D 6412ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಮಾಡಿ ಮಾತನಾಡಿದರು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ. ಯುವಶಕ್ತಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ,ಯುವಶಕ್ತಿ ಲೈಬ್ರೆರಿ ಕಾರ್ಯದರ್ಶಿ…

Read More

ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ನಲ್ಲಿ ಸ್ವಾತಂತ್ರ್ಯ ದಿನಾಚರಣೆ.

ಗುವೇದಪಡ್ಪು: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರವೀಂದ್ರ ಬಗಂಬಿಲ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಚಿದಾನಂದ ಶೆಟ್ಟಿ ಗುವೇದಪಡ್ಪು ,ಚಂದ್ರಹಾಸ ಕತ್ತೆರಿಕೋಡಿ ಶುಭ ಹಾರೈಸಿದರು.ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಬೇಟೆಗಾರರ ತಂಡದವರನ್ನು ಬೆದರಿಸಿ ರೈಫಲ್, ಸ್ಕೂಟರ್, ಫೋನ್ ಗಳನ್ನು ದೋಚಿ ಗಂಭೀರ ಹಲ್ಲೆ : ನಾಲ್ಕು ಮಂದಿ ಬಂಧನ

ಮಂಜೇಶ್ವರ : ಕುತ್ತಿಕೋಲ್ ನಿಂದ ಮಂಜೇಶ್ವರಕ್ಕೆ ಪ್ರಾಣಿಗಳ ಬೇಟೆಗಾಗಿ ಬಂದಿಳಿದ ಯುವಕರನ್ನು ಬೆದರಿಸಿ ಅವರಿಂದ ರೈಫಲ್, ಸ್ಕೂಟರ್ ಹಾಗೂ ಮೊಬೈಲ್ ಫೋನ್ ದೋಚಿದ ಪ್ರಕರಣದಲ್ಲಿ, ಕಾಪಾ ಪ್ರಕರಣದ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ರಾಶಿಕ್ ಎಂಬಾತ ಪರಾರಿಯಾಗಿದ್ದಾನೆ. ಹೊಸಂಗಡಿ ಅಂಗಡಿಪದವಿನ ಸೈಫುದ್ದೀನ್ ಆಲಿಯಾಸ್ ಪೂಚ ಸೈಫು (30), ಹಿದಾಯತ್ ನಗರ ಮುಟ್ಟತೋಡಿಯ ಮೊಯಿದಿನ್ ಆಲಿಯಾಸ್ ಚರಮುರು ಮೊಯ್ದು (29), ನ್ಯಾಷನಲ್ ನಗರ ಉಳಿಯತ್ತಡ್ಕದ ಮೊಹಮ್ಮದ್ ಸುಹೈಲ್ (27), ಬಿಲಾಲ್ ನಗರದ…

Read More

ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ 55 ಪವನ್ ಚಿನ್ನ ಹಾಗೂ 4 ಲಕ್ಷ ರೂ. ವಶಕ್ಕೆ

ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಜೇಶ್ವರ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 55 ಪವನ್ (438.77 ಗ್ರಾಂ) ಚಿನ್ನಾಭರಣ ಹಾಗೂ 4 ಲಕ್ಷ ರೂಪಾಯಿ ಹಣಗಳೊಂದಿಗೆ ಇಬ್ಬರನ್ನು ಸೆರೆ ಹಿಡಿಯಲಾಗಿದೆ .ಶನಿವಾರ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆದಿದೆ. ಕೋಝಿಕ್ಕೋಡ್ ನಿವಾಸಿಗಳಾದ ನಾಸರ್ ಹಾಗೂ ಈತನ ಪುತ್ರ ಮಹಮ್ಮದ್ ಫಾಸಿಲ್ ಸೆರೆಗೀಡಾಗಿದ್ದಾರೆ.ಸೆರೆಗೀಡಾದವರನ್ನು ಹಾಗೂ ವಶಪಡಿಸಲಾದ ಹಣ ಹಾಗೂ ಚಿನ್ನವನ್ನು ಜಿ ಎಸ್ ಟಿ…

Read More

ಪೊಯೈ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ.

ಪಾವೂರು :ಪೊಯೈಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮವು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ಕೆದುಂಬಾಡಿ ಇವರ ನೇತೃತ್ವದಲ್ಲಿ ಉದ್ಘಾಟಿಸಲ್ಪಟ್ಟಿತು. ನಂತರ ವಿವಿಧ ಸ್ಪರ್ಧೆಗಳು ನಡೆದವು. ಅದರಲ್ಲಿ ಮುಖ್ಯವಾಗಿ ಪುಟಾಣಿ ಮಕ್ಕಳಿಂದ ಕೃಷ್ಣನ ವೇಷವು ಕಣ್ಮನ ಸೆಳೆಯಿತು. ಸಂಜೆ ಹೊತ್ತಿನಲ್ಲಿ ನಡೆದ ಸಮರೋಪ ಸಮಾರಂಬದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ ಮುಟ್ಲ ವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಶ್ರೀಧರ ಶೆಟ್ಟಿ…

Read More

ಮಾದಕ ಮುಕ್ತ ಸಮಾಜಕ್ಕೆ ಕರೆ, ಸರಕಾರಿ ಪ್ರೌಢಶಾಲೆ ಮೂಡಂಬೈಲಿನಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯೀನಿ ಶ್ರೀಮತಿ ದಯಾವತಿ ಸಾಲಿಯನ್ ಧ್ವಜಾರೋಹಣ ನಡೆಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು . ಬಳಿಕ ಮುಖ್ಯ ಅತಿಥಿಗಳಾದ ಮಂಜೇಶ್ವರ ಜನ ಮೈತ್ರಿ ಪೊಲೀಸ್ ಅಧಿಕಾರಿಯಾದ ಮಧು ಸರ್ ಅವರು ಮಾತನಾಡಿ ನಮ್ಮ ಸಮಾಜ ಮಾದಕ ವಸ್ತುವಿನ ಪಿಡುಗುವಿನಿಂದಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ ಇದನ್ನು ಬಗೆಹರಿಸಲು ನಾವೆಲ್ಲರೂ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಕೈಜೋಡಿಸಬೇಕಾಗಿ ವಿನಂತಿಸಿದರು. ಬಳಿಕ…

Read More

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)K .G .D 6412 ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು.ಶೆಟ್ಟಿ ಧ್ವಜಾರೋಹಣ ಮಾಡಿ ಉದ್ಘಾಟಿಸಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಶುಭಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ಲೈಬ್ರೆರಿ ಕಾರ್ಯದರ್ಶಿ…

Read More

ಶ್ರೀ ಶಾರದಾ ಎ.ಯು.ಪಿ ಶಾಲೆ ಚೇವಾರು. ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆ.

ಶ್ರೀ ಶಾರದಾ ಎ.ಯು.ಪಿ ಶಾಲೆ ಚೇವಾರು ಇಲ್ಲಿ ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆಯು ನೆರವೇರಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ಯಾಮ ಭಟ್ .ಯು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿನಿಯರಾದ ಶ್ರೀ ರಕ್ಷಾ . ಪಿ ಕಾರ್ಯಕ್ರಮವನ್ನು ನಿರೂಪಿಸಿ, ಸಾಕ್ಷ್ಯಾ .ಎ ಸ್ವಾಗತಿಸಿ, ವಂಶಿತಾ .ಯಂ ವಂದಿಸಿದರು.ಶಾಲಾ ಸಂಸ್ಕೃತ ಅಧ್ಯಾಪಿಕೆ ಶ್ರೀಮತಿ ಪ್ರಮೀಳಾ ಡಿ.ಯನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಭಾಷಾ ಕ್ಲಬ್ ನ ವತಿಯಿಂದ ಈ ಕಾರ್ಯಕ್ರಮವು ನೆರವೇರಿತು

Read More

ಅಂಗಡಿಯ ಮುಂಭಾಗದಲ್ಲಿ ಅಪಾರ ಪ್ರಮಾಣದ ರಕ್ತದ ಕಲೆ ಪತ್ತೆ-ಸ್ಥಳೀಯರಲ್ಲಿ ಆತಂಕ

ಮಂಜೇಶ್ವರ: ಶನಿವಾರ ಬೆಳಿಗ್ಗೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿ ಪದವು ಎಂಬಲ್ಲಿನ ಒಂದು ಅಂಗಡಿಯ ಮುಂಭಾಗದಲ್ಲಿ ಅಪಾರ ಪ್ರಮಾಣದ ರಕ್ತದ ಕಲೆ ಪತ್ತೆಯಾದ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಕುತೂಹಲವನ್ನು ಮೂಡಿಸಿದೆ. ಅದೇ ರೀತಿಯಾಗಿ, ಸಮೀಪದಲ್ಲಿನ ಮನೆಯೊಂದರ ಮುಂದೆಯೂ ಇದೇ ರೀತಿಯ ರಕ್ತದ ಗುರುತುಗಳು ಕಾಣಿಸಿಕೊಂಡಿವೆ. ಸ್ಥಳೀಯ ನಿವಾಸಿಗಳ ಪ್ರಕಾರ, ಇಂತಹ ಅಪರೂಪದ ದೃಶ್ಯ ಅವರು ಈವರೆಗೆ ಕಂಡಿರಲಿಲ್ಲ. “ಬೆಳಗ್ಗೆ ಅಂಗಡಿಗೆ ಹೋಗುತ್ತಿದ್ದಾಗ ರಕ್ತದ ಗುರುತುಗಳು ಕಂಡು ಬೆಚ್ಚಿಬಿದ್ದೆವು. ನೈಜವಾಗಿ ಏನು ನಡೆದಿದೆ ಎಂಬುದು ಇನ್ನೂ…

Read More
error: Content is protected !!