ಕಣ್ಣೂರು: ಚಿನ್ನದ ಅಂಗಡಿಗೆ ನಕಲಿ ಬಳೆ ಮಾರಾಟ ಮಾಡಲು ಬಂದ ಇಬ್ಬರು ಬಂಧನ

ಕಾಸರಗೋಡು/​ ಕಣ್ಣೂರು: ಕಣ್ಣೂರಿನ ಚಕ್ಕರಕಲ್ಲಿನ ಚಿನ್ನದ ಅಂಗಡಿಯೊಂದಕ್ಕೆ ನಕಲಿ ಚಿನ್ನದ ಬಳೆಗಳನ್ನು ಮಾರಾಟ ಮಾಡಲು ಬಂದ ಇಬ್ಬರನ್ನು ಚಕ್ಕರಕಲ್ ಪೊಲೀಸರು ಬಂಧಿಸಿದ್ದಾರೆ.

​ಮುಳಪ್ಪಿಲಂಗಾಡ್ ಮೊಯ್ದು ಪಾಲಂನ ಅಷಿಯಾನ ಹೌಸ್‌ನ ಅಬ್ದುಲ್ ರಾಸಿಕ್ ಪುತಿಯಪುರ (42) ಮತ್ತು ಪಿ.ಕೆ. ಮೊಹಮ್ಮದ್ ರೈಹಾನ್ (32) ಬಂಧಿತ ಆರೋಪಿಗಳು.

ಚಕ್ಕರಕಲ್ಲಿನ ಕೆ. ಮಹೇಶ್ ಅವರಿಗೆ ಸೇರಿದ ಚಿನ್ನದ ಅಂಗಡಿಗೆ ಈ ಇಬ್ಬರು ಆರೋಪಿಗಳು ಬಂದಿದ್ದರು. ಅವರು ‘916 ಬಿಐಎಸ್’ ಎಂದು ಮುದ್ರಿಸಿರುವ 13.160 ಗ್ರಾಂ ತೂಕದ ಬಳೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ.

ಅಂಗಡಿಯವರು ಪರಿಶೀಲಿಸಿದಾಗ ಅವು ನಕಲಿ ಚಿನ್ನ ಎಂದು ಖಚಿತಪಟ್ಟಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಚಕ್ಕರಕಲ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!