ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 7 ವರ್ಷಗಳ ಬಳಿಕ ಬಾಲಗಣಪತಿಗೆ ಮೂಡಪ್ಪ ದರ್ಶನ …

ಪುತ್ತೂರು:ಇತಿಹಾಸ ಪ್ರಸಿದ್ದ ಸೀಮಾಧಿಪತಿ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿತ್ಯ ಆರಾಧಿಸಲ್ಪಡುವ ಮಹಾಗಣಪತಿಗೆ ಲೋಕಕಲ್ಯಾಣಾರ್ಥವಾಗಿ 108 ಕಾಯಿ ಗಣಪತಿ ಹೋಮ, ಮಹಾರಂಗ ಪೂಜೆ, ಮೂಡಪ್ಪ ಸೇವೆ ಏಳು ವರ್ಷಗಳ ಬಳಿಕ ಜ.6ರಂದು ನಡೆಯಿತು.ದೇವಳದ ತಂತ್ರಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಸದಸ್ಯರ ಉಪಸ್ಥಿತಿಯಲ್ಲಿ ಬೆಳಗ್ಗಿನಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿ, ಸಂಜೆಮಹಾರಂಗಪೂಜೆಯಾಗಿ ರಾತ್ರಿ ಮೂಡಪ್ಪ ಸೇವೆ ನಡೆಯಿತು. ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ…

Read More

ಅಬುಧಾಬಿಯಲ್ಲಿ ಭೀಕರ ರಸ್ತೆ ಅಪಘಾತ.ಒಂದೇ ತಾಯಿಯ ನಾಲ್ಕು ಮಕ್ಕಳು ಮೃತ್ಯು .ಪೋಷಕರ ಸ್ಥಿತಿ ಗಂಭೀರ

ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್‌ನಲ್ಲಿ ಕೆಲವು ಸಮಯ ಕಳೆದ ಕೇರಳ ಮೂಲದ ಕುಟುಂಬವು ದುಬೈಗೆ ಹಿಂತಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪುಟ್ಟ ಮಕ್ಕಳ ದುರ್ಮರಣ ಸಂಭವಿಸಿದ್ದು, ಪೋಷಕರು ಮತ್ತು ಸೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರು ಎಲ್ಲರೂ 14 ವರ್ಷದೊಳಗಿನ ಮಕ್ಕಳು, ಮತ್ತು ಒಂದೇ ಕುಟುಂಬದವರು. ಮೃತ ಮಕ್ಕಳನ್ನು ಅಶಾಝ್ (14 ವರ್ಷ), ಅಮರ್ (12 ವರ್ಷ), ಅಜಾಮ್ (7 ವರ್ಷ) ಮತ್ತು ಅಯ್ಯಾಶ್ (5 ವರ್ಷ) ಎಂದು ಗುರುತಿಸಲಾಗಿದೆ. ಮನೆ ಕೆಲಸದಾಕೆ ಬುಶ್ರಾ…

Read More

ತಲಪಾಡಿಯಲ್ಲಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಕೇಸು ದಾಖಲಾದ ಬಳಿಕ ಪ್ರಯಾಣಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಮನೋವ್ಯಥೆಯಿಂದ ಬಸ್‌ಗೆ ಕಲ್ಲೆಸೆದು ಪೊಲೀಸರು ಕೇಸು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಯಾಣಿಕನಾದ ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಎಂಬಾತನು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಬಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್ ಕಲ್ಲೆಸೆದಿದ್ದು,…

Read More

ಜನವರಿ 9 ರಿಂದ 11ರ ತನಕ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್” ಸಂಭ್ರಮ … !

ಮಂಗಳೂರು:”ದೇಶದ ಅತ್ಯಂತ ವೈವಿಧ್ಯಮಯ ಕ್ರೀಡಾ, ಅಥ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲೊಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯಾಥಾನ್, ಮಂಗಳೂರು ಬೀಚ್ ಮ್ಯಾರಥಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್‌ ಜನವರಿ 9ರಿಂದ ಜನವರಿ 11ರವರೆಗೆ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಂಗಳೂರು ಟ್ರಯಾಥಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ 2026 ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ. ಈ ಬಾರಿ ದೇಶ ವಿದೇಶಗಳಿಂದ 5000ಕ್ಕಿಂತ…

Read More

ಜನವರಿ 9ರಿಂದ 11ರ ತನಕ ಕದ್ರಿ ಪಾರ್ಕ್‌ನಲ್ಲಿ ರಾಷ್ಟ್ರ ಮಟ್ಟದ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ ಉತ್ಸವ … !

ಮಂಗಳೂರು:ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನವು ಜ.9, 10, 11ರಂದು ಹಮ್ಮಿಕೊಂಡ ರಾಷ್ಟ್ರ ಮಟ್ಟದ ಚಿತ್ರ-ಶಿಲ್ಪ- ಸಾಂಸ್ಕೃತಿಕ ಮೇಳ ‘ಕಲಾ ಪರ್ಬ’ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಅವರು ಕದ್ರಿ ಪಾರ್ಕ್ ನಲ್ಲಿ ಕರೆದ ಪತ್ರಿಕಾಗೊಸ್ಟಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು , ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜ.9ರಂದು ಸಂಜೆ 5:30ಕ್ಕೆ ಕಲಾ…

Read More

ವಿದ್ಯುತ್ ತಂತಿ ತುಂಡಾಗಿ 900 ಅಡಿಕೆ ಗಿಡಗಳು ಸುಟ್ಟು ಭಸ್ಮ

ಪುತ್ತೂರು: ಕುರಿಯ ಗ್ರಾಮದ ಬೂದಿಯಾರು ಎಂಬಲ್ಲಿ ಮಂಗಳವಾರ ವಿದ್ಯುತ್ ತಂತಿ ತುಂಡಾಗಿ ತೋಟದ ಮೇಲೆ ಬಿದ್ದ ಪರಿಣಾಮ 900 ಕ್ಕೂ ಹೆಚ್ಚು ಅಡಿಕೆ ಸಸಿಗಳು ಸುಟ್ಟು ಭಸ್ಮವಾಗಿವೆ.ತೋಟ ಬೂದಿಯಾರು ನಿವಾಸಿ ಗಣೇಶ್ ರೈ ಅವರಿಗೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆ ನೆಟ್ಟಿದ್ದ ಸಸಿಗಳು ಚೆನ್ನಾಗಿ ಬೆಳೆದಿದ್ದವು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಮಂಗಳವಾರ ಮಧ್ಯಾಹ್ನ ವಿದ್ಯುತ್ ತಂತಿ ಹಠಾತ್ತನೆ ತುಂಡಾಯಿತು. ಬಿದ್ದ ತಂತಿಯಿಂದ ಬೆಂಕಿ ಹೊತ್ತಿಕೊಂಡಿತು, ಅದು ಬೇಗನೆ ತೋಟದಾದ್ಯಂತ ಹರಡಿ, ಸಸಿಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿತು.ಘಟನೆಯಲ್ಲಿ ಹೊಲದಲ್ಲಿ…

Read More

ಪಲ್ಟಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ನಲ್ಲೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿ ಹೊತ್ತು ಮರಕ್ಕೆ ಡಿಕ್ಕಿ ಹೊಡೆದು ಕಂದಕದಲ್ಲಿ ಬಿದ್ದಿದೆ. ಪರಿಣಾಮವಾಗಿ ಕಾರು ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಇಬ್ಬರು ಸವಾರರು ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ ಕಾರಿನ ನಂಬರ್ಪ್ಲೇಟ್ ಕೂಡ ಬೆಂಕಿಯಲ್ಲಿ ಸುಟ್ಟುಹೋಗಿದ್ದು, ಇದೇ ಕಾರಣದಿಂದ ಕಾರು ಮತ್ತು ಅದರ ಸವಾರರ ಗುರುತು ಪತ್ತೆ ಹಚ್ಚಲು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಪ್ರಾಥಮಿಕ ತನಿಖೆಗೋಸ್ಕರ, ಮೃತರು ಸಿದ್ದಾಪುರ ಮೂಲದವರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಂಬಂಧಿಕರಿಗೆ ಮಾಹಿತಿ…

Read More

ಆಶಾಜ್ಯೋತಿ ಸಂಸ್ಥೆಯಿಂದ ಜನವರಿ 11ರಂದು ದಿವ್ಯಾಂಗರಿಗಾಗಿ ಮಂಗಳೂರಿನಲ್ಲಿ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ….. !

ಮಂಗಳೂರು: ಸೇವಾ ಭಾರತಿ(ರಿ ) ಮಂಗಳೂರು ಇದರ ಘಟಕವಾಗಿರುವ ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿ ಆಯೋಜಿಸಿಕೊಂಡು ಬರುತಿದ್ದು ಈ ಭಾರಿ ಕಾರ್ಯಕ್ರಮವನ್ನು ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ ನ ಸಹಭಾಗಿತ್ವದಲ್ಲಿ ಜನವರಿ 11 ರಂದು ಬೆಳಿಗ್ಗೆ 8.30ರಿಂದ ಸಂಜೆ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ(ರಿ ) ಮಂಗಳೂರು ಇದರ ಕಾರ್ಯದರ್ಶಿಗಳಾದ ಹೆಚ್ ನಾಗರಾಜ್ ಭಟ್ ನಗರದ ಚೇತನ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು…

Read More

ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮವು ಜನವರಿ 3 ಹಾಗೂ 4 ರಂದು ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಅದ್ದೂರಿಯಾಗಿ ನೆರವೇರಿತು. ಪರಮ ಪೂಜ್ಯ ಯುಗಲ ಮುನಿ ಮಹಾರಾಜರ ಆಶೀರ್ವಾದದೊಂದಿಗೆ ಶ್ರವಣಬೆಳಗೊಳ ಹಾಗೂ ಮೂಡುಬಿದಿರೆ ಮಠದ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಭವ್ಯ ಉಪಸ್ಥಿತಿಯಲ್ಲಿ, ಪೂಜ್ಯ ರಾಜರ್ಷಿ ಡಿ ವೀರೇಂದ್ರ ಹೆಗ್ಗಡೆಯವರ ಭಾಗವಹಿಸುವಿಕೆಯಲ್ಲಿ ಜರುಗಿದ ಈ ಹಬ್ಬ…

Read More

ಕೇರಳ ರಾಜ್ಯ ವಿಧಾನ ಸಭಾ ಚುನಾವಣೆಗೆ ಪೂರ್ವ ಸಿದ್ಧತೆ ,ಕೇಂದ್ರ ಚುನಾವಣಾ ಆಯೋಗ ತಂಡ ರಾಜ್ಯಕ್ಕೆ

ಕಾಸರಗೋಡು : ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇವಲ ಕೆಲವು ವಾರಗಳು ಬಾಕಿ ಇದ್ದು, ಅದರ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಜನವರಿಯಲ್ಲಿ ರಾಜ್ಯಕ್ಕೆ ಭೇಟಿಕೊಡುವುದಾಗಿ ಘೋಷಿಸಲಾಗಿದೆ. 2021ನೇ ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಾದರಿಯನ್ನು ಅನುಸರಿಸಿ, ಈ ಬಾರಿಯೂ ಏಕ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಪರಿಗಣನೆ ಮಾಡುತ್ತಿದೆ. 2021 ಏಪ್ರಿಲ್ 4ರಂದು ಕೇರಳದಲ್ಲಿ ಒಟ್ಟು 140 ಕ್ಷೇತ್ರಗಳಿಗಾಗಿಯೂ ಏಕ ಹಂತದಲ್ಲಿ ಚುನಾವಣೆಯು ನಡೆಯಿತು…

Read More
error: Content is protected !!