Headlines

ಆಚಾರವಿಲ್ಲದ… ನಾಲಿಗೆಯಲ್ಲಿ ನೀಚ ಬುದ್ಧಿಯ ತೋರಿಸಿದ. ಪ್ರಮೋದ್ ನ ‘ಪ್ರಮಾದ.VSSC ಸಿಬ್ಬಂದಿ ಜಿಆರ್ ಪ್ರಮೋದ್ ಗೆ ಕಠಿಣ ಶಿಕ್ಷೆ ಆಗಬೇಕು

ತಿರುವನಂತಪುರ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶದ ಗರಿಮೆಯನ್ನು, ಹಿರಿಮೆಯನ್ನು ವಿಶ್ವ ರಾಷ್ಟ್ರಗಳ ಮುಂದೆ ಬಾನೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಸಂಸ್ಥೆ. ಇಂತಹ ಸಂಸ್ಥೆಗಳ ಸುಪರ್ದಿಯಲ್ಲಿ ಬರುವ ಇನ್ನೊಂದು ಸಂಸ್ಥೆಯೇ (vssc.) ವಿಕ್ರಂ ಸಾರಾಭಾಯಿ ಸ್ಪೆಸ್ ಸೆಂಟರ್. ಕೇಂದ್ರ ಸರಕಾರದ ಆದೀನ ದಲ್ಲಿ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ. ಇಂತಹ ಅಭಿಮಾನದ ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ G R ಪ್ರಮೋದ್ ಎಂಬಾತ ತನ್ನ ಮುಖಪುಟದ ಬ್ಲಾಗಿನಲ್ಲಿ ಭಾರತಾಂಬೆಯ ಕುರಿತು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಲೇಖನ ಮಾಡಿದ್ದು, ನಾಗರಿಕ…

Read More

ಕೇರಳ: ಆರೋಗ್ಯ ಇಲಾಖೆ ಯ ಆನಾರೋಗ್ಯ ದ ಬಗ್ಗೆ ಡಾ. ಯೆರಿಸ್ ಬಿಚ್ಚಿಟ್ಟ ಸತ್ಯ.

ಇದೇನಾ ನಂಬರ್ ಒನ್ ಅಭಿವೃದ್ಧಿ ? ಸಾರ್ವಜನಿಕ ರ ಯಕ್ಷ ಪ್ರಶ್ನೆ. ತಿರುವನನಂತಪುರ : ಕಳೆದ 9 ವರ್ಷದ ನಿರಂತರವಾದ ಎಡರಂಗ ಸರಕಾರದ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂಬ ಉದ್ದಟ್ಟ ತನ ಮೆರೆಯುತ್ತಿರುವ ಸಹಕಾರಕ್ಕೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹೇರಿಸ್ ಚಿರೇಕಲ್ ಬಿಚ್ಚಿಟ್ಟ ಸತ್ಯ ಆರೋಗ್ಯ ಇಲಾಖೆಯ ದುರಾವಸ್ತೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ. ಇಂದು ಚುನಾವಣಾ ಸಮಯದಲ್ಲಿ ಆ ಕ್ಷೇತ್ರವನ್ನು ನನ್ನ ಪ್ರತಿಷ್ಠೆಯ ಕಣವನ್ನಾಗಿ ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿರುವ…

Read More

‘ತರವಾಡು ‘ತುಳು ಸಿನಿಮಾದ ಟೀಸರ್ ಬಿಡುಗಡೆ

ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಉಮೇಶ್ ಪಡುಬಿದ್ರೆ ನಿರ್ಮಾಣ ದ ಶರತ್ ಶೆಟ್ಟಿ ನಿರ್ದೇಶನ ದಲ್ಲಿ ಶೋಭಾ ಶೆಟ್ಟಿ ಬ್ಯಾನರ್ ಹಾಗೂ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾದ ‘ತರವಾಡು ‘ತುಳು ಸಿನಿಮಾದ ಟೀಸರ್ ಜೂನ್ 29ರಂದು ಮದ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಾಯಿತು. ಇನ್ನು ಈ ಚಿತ್ರದಲ್ಲಿ ಶೋಧನ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇನ್ನು ಈ ಟೀಸರ್ ಬಿಡುಗಡೆಗೆ ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ,ಡಿ.ಕೆ ಶೆಟ್ಟಿ, ವಿಠ್ಠಲ್ ಶೆಟ್ಟಿ,ವಿಜಯ ಕುಮಾರ್ ಕೊಡಿಯಾಲಬೈಲು,ಪ್ರಕಾಶ್…

Read More

ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ -ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಸುರತ್ಕಲ್: ಬಂಟರ ಸಂಘ (ರಿ.) ಸುರತ್ಕಲ್ ಇದರ 2025 – 27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ, ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್, ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ…

Read More

“ಬಾಲಿಕಾಶ್ರಮದ ಮಕ್ಕಳ ಜೊತೆ ಒಂದು ಸಂಜೆ “

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ ಜಲಿಗುಡ್ಡೆ ಇದರ ಹಾಗೂ ಬಾಲಿಕಾಶ್ರಮ ಕಂಕನಾಡಿ ಇಲ್ಲಿನ ಮಕ್ಕಳಿಗಾಗಿ“ಬಾಲಿಕಾಶ್ರಮದ ಮಕ್ಕಳ ಜೊತೆ ಒಂದು ಸಂಜೆ ” ಎಂಬ ಸಮಯೋಜಿತ ಕಾರ್ಯಕ್ರಮವನ್ನು ತಾ. 22.6.2025 ನೇ ರವಿವಾರಬಾಲಿಕಾಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಯಿತು. ಪ್ರಾಥಮಿಕ ಶಾಲಾ ಬಾಲಕಿಯರಿಗಾಗಿ ರಾಮಾಯಣ ಮತ್ತು ಮಹಾಭಾರತ ಅಲ್ಲದೆ ಪುರಾಣಗಳ ಬಗ್ಗೆ ಸುಮಾರು 50 ಕ್ಕೂ ಅಧಿಕ ರಸಪ್ರಶ್ಣೆ ಯನ್ನು ಕೇಳಲಾಗಿ ಸಮರ್ಪಕವಾಗಿ ಮಕ್ಕಳು ಪ್ರಶ್ಣಾನುಸಾರ ಉತ್ತರ ನೀಡಿದರು. 60 ಕ್ಕೂ ಹೆಚ್ಚು ಬಾಲಕಿಯರು ಈ ರಸಪ್ರಶ್ಣೆಯಲ್ಲಿ…

Read More

ಸ್ನೋ ಮ್ಯಾನ್ ಐಸ್ ಕ್ರೀಮ್ ಪಾರ್ಲರ್ ನ ಎರಡನೇ ಶಾಖೆ ಶುಭಾರಂಭ

ಅಸ್ತ್ರ ಗ್ರೂಪ್ ಲಂಚುಲಾಲ್ ಇವರ ಮಾಲಕತ್ವದ ಸ್ನೋ ಮ್ಯಾನ್ ಐಸ್ ಕ್ರೀಮ್ ಪಾರ್ಲರ್ ನ ಎರಡನೇ ಶಾಖೆ ನಿನ್ನೆ ದೇರಳಕಟ್ಟೆಯಲ್ಲಿ ಶುಭಾರಂಭಗೊಂಡಿತು. .ಉಧ್ಘಟನಾ ಸಮಾರಂಭದಲ್ಲಿ ಅಸ್ತ್ರ ಗ್ರೂಪ್ ಸಿ.ಇ.ಓ ,ಕ್ಯಾಟ್ಕಾ ಅಧ್ಯಕ್ಷರಾದ ಲಂಚು ಲಾಲ್, ದಾಸ್ ಪ್ರಮೋಟರ್ಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ದಾಸ್ ,ಲಂಚು ಲಾಲ್ ಅವರ ತಾಯಿ ರೇಖಾ,ಧರ್ಮ ಪತ್ನಿ ಭವ್ಯ ಉಪಸ್ಥಿತರಿದ್ದರು, ಲಂಚುಲಾಲ್ ಅವರ ತಾಯಿ ದೀಪ ಬೆಳಗಿಸುವುದರ ಮೂಲಕ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯ ಅತಿಥಿಗಳು, ಸಿನಿಮಾ ತಾರೆಯರು ಉಪಸ್ಥಿತರಿದ್ದರು…

Read More

ಕೇರಳ: ರಾಜಕೀಯ ಪಕ್ಷಗಳ ಮುಂದಿನ ಚಿತ್ತ ಸ್ಥಳೀಯಾಡಳಿತ ಚುನಾವಣೆಯತ್ತ.

ತಿರುವನಂತಪುರಂ : 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ಸ್ಥಳೀಯಾಡಳಿತ ಚುನಾವಣೆಯು ಬಹುತೇಕ ಒಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು,ತ್ರೀ ಸ್ಥರ ಪಂಚಾಯತುಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಎಲ್ಲ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿದೆ. ರಾಜ್ಯದ ಒಟ್ಟು 941 ಗ್ರಾಮ ಪಂಚಾಯತ್ , 152 ಬ್ಲಾಕ್ ಪಂಚಾಯತ್ ,14 ಜಿಲ್ಲಾ ಪಂಚಾಯತ್ ,87 ಮುನ್ಸಿಪಾಲಿಟಿ ಮತ್ತು 6 ಕಾರ್ಪೋರೇಶನ್ ಗೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ನಡೆದ ನಿಲಂಬೂರ್ ಉಪಚುನಾವಣೆಯ ನಂತರ ಎಲ್ಲಾ ರಾಜಕೀಯ ಪಕ್ಷ…

Read More

ಇಹಲೋಕ ತ್ಯಜಿಸಿದ ಬಾಕ್ರಬೈಲಿನ ಮಹಾನ್ ಚೇತನ

ಭಜನೆಯ ಗುರಿಕಾರ…ಕಂಬಳದ ನೇಕಾರ.. ಕೃಷಿಯ ಹರಿಕಾರ…RSS ಹಾಗೂ ಬಿಜೆಪಿ ನೇತಾರ…ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷರು, ಪ್ರಗತಿಪರ ಕೃಷಿಕ, ಸಂಘಟನಾ ಚತುರ… ಎಲ್ಲಾ ಕ್ಷೇತ್ರಗಳ ಸಾಹುಕಾರ… ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಟ್ಟಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಸಂತ ಭಂಡಾರಿ ಕಯ್ಯ (78) ವಿಧಿವಶ . ಸಣ್ಣ ಪ್ರಾಯದಿಂದಲೇ ಎಲ್ಲರೊಂದಿಗೆ ಬೆರೆತು ಮುಂದೆ ಬಾಕ್ರಬೈಲಿನಲ್ಲಿ ಎಲ್ಲರನ್ನೂ ಸಂಘಟಿಸುವ ಜೊತೆಗೆ ಪ್ರಗತಿಪರ ಕೃಷಿಕರಾಗಿ ಹಾಗೂ ಕಂಬಳ ಕೋಣದ ಮಾಲಕರು ಮತ್ತು ಓಟಗಾರ, ಕೂಡ ಪ್ರಸಿದ್ದಿಯನ್ನು ಪಡೆದ ಪ್ರಗತಿಪರ…

Read More

ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಹೊಸ ಸಹಾಯವಾಣಿ ಆರಂಭಿಸಿದ ನಟ ಮಮ್ಮುಟ್ಟಿ .

ತಿರುವನಂತಪುರಂ : ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಮಲಯಾಳಂ ಸ್ಟಾರ್ ‘ಟಾಕ್ ಟು ಮಮ್ಮುಕ್ಕ’ ಎಂಬ ನೂತನ ಸಹಾಯವಾಣಿ ಆರಂಭಿಸಿದ್ದಾರೆ.ಈ ಯೋಜನೆಯು ಕೇರಳ ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಸ್ವ ಸಹಾಯ ಇಲಾಖೆಗಳೊಂದಿಗೆ ಕುಟುಂಬಶ್ರೀ ಮಿಷನ್ ನ ಬೆಂಬಲದೊಂದಿಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ. 2025 ರ ಜೂನ್ 25 ರಂದು ಫೇಸ್ಬುಕ್ ಮೂಲಕ ಈ ಯೋಜನೆಯನ್ನು ಘೋಷಿಸಲಾಯಿತು.ಈ ಯೋಜನೆಯ ಮೂಲಕ ಮಾದಕ ವ್ಯಸನದಿಂದ ಚೇತರಿಸಿಕೊಳ್ಳಲು ಕರೆ ಮಾಡುವವರು 6238877369 ಈ ನಂಬರ್ ಗೆ…

Read More

ವಿಶ್ವ ಮಾದಕ ವಸ್ತು ವಿರೋಧಿ ದಿನ.

ವೈಟ್ನರ್ ಬಳಸದಿರಿ…ಇದು ಹಾನಿಕಾರಕ. ವಿಶ್ವ ಮಾನವ ಕುಲಕ್ಕೆ ಮಾರಕವಾಗಿ ಪರಿಣಮಿಸುವ ಮಾದಕ ವಸ್ತುಗಳನ್ನು ಸಂಪೂರ್ಣ ತಡೆಗಟ್ಟಿ ಮಾದಕ ವ್ಯಸನ ದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ” ನಶಾ ಮುಕ್ತ್ ಭಾರತ್” ಯೋಜನೆಯ ಅಂಗವಾಗಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟಕ್ಕೆ ಕಠಿಣ ನಿರ್ಬಂಧಗಳನ್ನು ಹೇರಬೇಕಾದ ಅಗತ್ಯವಿದೆ. ಇತ್ತೀಚಿನದಿನಗಳಲ್ಲಿ ವಿದ್ಯಾರ್ಥಿಗಳು ಸಹಿತ ನಾವೆಲ್ಲರೂ ಹೆಚ್ಚಾಗಿ ಉಪಯೋಗಿಸುವ ವೈಟ್ನರ್ ಪೀಡ್ ತೀರಾ ಹಾನಿಕಾರಕವಾಗಿದ್ದು ಇದರ ಉಪಯೋಗಕ್ಕೆ ನಿಷೇಧ ಹೇರಬೇಕಾದ ಅಗತ್ಯವಿದೆ. ಅಪ್ಪಿ ತಪ್ಪಿ ಇದನ್ನು ಸೇವಿಸಿದ್ದಲ್ಲಿ ಇದು ಮೆದುಳಿನ…

Read More
error: Content is protected !!