ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವು..!!

ವಿಟ್ಲ: ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ಚಾಲಕ ಸತೀಶ್ (33) ಮೃತ ವ್ಯಕ್ತಿ.ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಬಳಿಕಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸೀಮಂತದ ಸಂಭ್ರದಲ್ಲಿ ಕುಟುಂಬದಲ್ಲಿ ಈಗ ಆಕ್ರಂದನ ಮುಗಿಲು…

Read More

ಸದ್ಬಳಕೆ ಆಗದ 1 ಕೋಟಿ 30 ಲಕ್ಷ ರೂಪಾಯಿ ಅನುದಾನ ನೆನೆಗುದಿಗೆ ಬಿದ್ದ ಸುರುಮಾ ತೋಡು ಶುದ್ದೀಕರಣ

ಮಂಜೇಶ್ವರ, ಮೇ 23: ಮಂಜೇಶ್ವರ ಗ್ರಾಮ ಪಂಚಾಯತಿಯ 3ನೇ ವಾರ್ಡಿನ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಸುರುಮ ತೋಡನ್ನು ಶುದ್ಧೀಕರಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟ ಉದ್ದೇಶಿತ ಕಾರ್ಯಗಳು ಇಲ್ಲಿಯವರೆಗೆ ಆರಂಭವಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಈ ನಿರ್ಲಕ್ಷ್ಯದ ಪರಿಣಾಮವಾಗಿ, ತೋಡಿನಲ್ಲಿ ತುಂಬಿ ಕೊಂಡಿರುವ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಕೃಷಿಕರ ಹೊಲಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗುತ್ತಿದೆ. ಸ್ಥಳೀಯ ರೈತರು ಹಾಗೂ ಪರಿಸರವಾಸಿಗಳು ನೀಡಿರುವ ಮಾಹಿತಿಯಂತೆ, ತೋಡಿನ ನವೀಕರಣಕ್ಕಾಗಿ ಸರಕಾರದಿಂದ ಸುಮಾರು ಒಂದು ಕೋಟಿ…

Read More

2026 ರ ವಿಧಾನ ಸಭಾ ಚುನಾವಣೆ ಯ ದಿಕ್ಸೂಚಿಯಾದ ತ್ರಿಸ್ತರ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಈಗಾಗಲೇ ವಾರ್ಡ್ ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದ್ದು 941 ಪಂಚಾಯತಿಗಳ ವಾರ್ಡ್ ವಿಭಜನೆ ಮಾಡಿ ಇದೀಗ ವಾರ್ಡ್ ಗಳ ಸಂಖ್ಯೆ 15962 ರಿಂದ 17337 ಕ್ಕೆ ಹೆಚ್ಚಳಗೊಂಡಿದೆ. ಅಂದರೆ…

Read More

ಎಗ್ ಕುರ್ಮಾ

ಬೇಕಾಗುವ ಪದಾರ್ಥಗಳು… ಮಾಡುವ ವಿಧಾನ… 6 ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಡಿ.ತೆಂಗಿನಕಾಯಿ, ಗೋಡಂಬಿ, ಹಸಿಮೆಣಸಿನಕಾಯಿ, ಜೀರಿಗೆ, ಸೋಂಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಪಲಾವ್ ಎಲೆ, ನಕ್ಷತ್ರ ಮೊಗ್ಗು, ಲವಂಗ, ಜೀರಿಗೆ, ಏಲಕ್ಕಿ, ಚಕ್ಕೆ 1 ನಿಮಿಷ ಸೌಟ್‌ನಿಂದ ಆಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ. ಈಗ ಈರುಳ್ಳಿ, ಹಸಿಮೆಣಸಿನ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ…

Read More

ಮಂಗಳೂರು ವಿಶ್ವವಿದ್ಯಾಲಯ ಯಕ್ಷ ಮಂಗಳ ಪ್ರಶಸ್ತಿಗೆ ಡಾ. ರಮಾನಂದ ಬನಾರಿ, ಪ್ರೊಫೆಸರ್ ಎಂಎಲ್ ಸಾಮಗ, ಸಿದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ. ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಗ್ರಂಥಕ್ಕೆ ಅತ್ಯುತ್ತಮ ಕೃತಿ ಪ್ರಶಸ್ತಿ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2023 24 ನೇ ಸಾಲಿನ ಯಕ್ಷಮಂಗಲ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥದಾರಿ ಲೇಖಕ, ಸಾಹಿತಿ ರಮಾನಂದ ಬನಾರಿ, ಹಿರಿಯ ಯಕ್ಷಗಾನ ಕಲಾವಿದ ವಿದ್ವಾಂಸ ಪ್ರೊಫೆಸರ್ ಎಂಎಲ್ ಸಾಮಗ, ಹಿರಿಯ ಬಣ್ಣದ ವೇಷ ದಾರಿ ಸದಾಶಿವ ಶೆಟ್ಟಿ ಸಿದ್ದಕಟ್ಟೆ ಅವರು ಆಯ್ಕೆಯಾಗಿದ್ದಾರೆ ಹಿರಿಯ ಜಾನಪದ ವಿದ್ವಾಂಸರಾದ ಪ್ರೂ. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರೊ. ಪಾದೆ ಕಲ್ಲು…

Read More

ಚೆರ್ಕಳ ಬೇವಿಂಜೆಯಲ್ಲಿ ಚಲಿಸುತ್ತಿದ್ದ ಕಾರು ಅಗ್ನಿಗೆ ಆಹುತಿ : ಕಾರಿನಲ್ಲಿದ್ದ ಐವರು ಅಪಾಯದಿಂದ ಪಾರು

ಕಾಸರಗೋಡು: ಇಲ್ಲಿನ ಚೆರ್ಕಳ ಬೇವಿಂಜೆ ಗುಡ್ಡೆಯಲ್ಲಿ ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಹೊತ್ತಿ ಉರಿದಿದೆ.ಕಾರಿನಲ್ಲಿದ್ದ ಐವರ ತಂಡ ಅದೃಷ್ಟವಶಾತ್ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನ್ಯೂ ಮುಂಬೈಯಿಂದ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೋಪುರಂಗೆ ಬರುತ್ತಿದ್ದ ಸಿಎನ್ ಜಿ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಇವರು ಮುಂಬೈಯಿಂದಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಚೆರ್ಕಳ ದಾಟುತ್ತಿದ್ದಂತೆಯೇ ಕಾರಿನಿಂದ ಹೊಗೆ ಏಳುವುದನ್ನು ಗಮನಿಸಿದ ಚಾಲಕ ಇಕ್ಬಾಲ್ ಅಹಮ್ಮದ್ ಕುಟ್ಟಿ ಬೇವಿಂಜೆಯಲ್ಲಿ ಕಾರು ನಿಲ್ಲಿಸಿ ಅದರಲ್ಲಿ…

Read More

ಗಡಿಯಲ್ಲಿ ಸೈನಿಕರಿದ್ದಾರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ದೇಶಪ್ರೇಮಿಗಳು ನಾಶ ಮಾಡಬೇಕು – ಮಾಜಿ ಸೈನಿಕ ವಿಜಯ್ ಕುಮಾರ್.

ಹೊಸಂಗಡಿ – ಪಾಕಿಸ್ತಾನವನ್ನು ನಾಶ ಮಾಡಲು ಭಾರತಕ್ಕೆ ಒಂದು ದಿನವೂ ಬೇಡ ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹ ಮಾಡಬೇಕಾದದ್ದು ದೇಶಪ್ರೇಮಿಗಳ ಕರ್ತವ್ಯ ಎಂದು ನಿವೃತ್ತ ಕಮಂಡರ್ ವಿಜಯ ಕುಮಾರ್ ಕಣ್ವತೀರ್ಥ ಹೇಳಿದರು ಹೊಸಂಗಡಿಯಲ್ಲಿ ಬಿಜೆಪಿ ಮಂಡಲ ಸಮಿತಿ ಹಮ್ಮಿಕೊಂಡ ಭಾರತ್ ಶೌರ್ಯ ತಿರಂಗ ಯಾತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿ ಮಾಜಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ರೈ ಉದ್ಘಾಟಿಸಿದರು, ಆಧುನಿಕ ಜಗತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಬಲಿಷ್ಠ ಸೈನಿಕ ಶಕ್ತಿಯನ್ನು…

Read More

ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ U-19 ತಂಡ ಪ್ರಕಟ

ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಅಂಡರ್ -19 ತಂಡದ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 17 ವರ್ಷದ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಆಯ್ಕೆ ಆಗಿದ್ದಾರೆ. ಜತೆಗೆ IPL 2025ರಲ್ಲಿ ಸಂಚಲನ ಸೃಷ್ಟಿಸಿದ ರಾಜಸ್ಥಾನ್ ರಾಯಲ್ಸ್ (RR) ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೂನ್ 24 ರಿಂದ ಜುಲೈ 23 ರವರೆಗೆ ಇಂಗ್ಲೆಂಡ್ ಪ್ರವಾಸ ನಡೆಯಲಿದೆ. ಇದರಲ್ಲಿ 50 ಓವರ್‌ಗಳ ಅಭ್ಯಾಸ ಪಂದ್ಯ, ಐದು ಯೂತ್ ODI ಸರಣಿ…

Read More

ಮುಂಬೈ ಇಂಡಿಯನ್ಸ್ ಫಿಕ್ಸಿಂಗ್ ಮಾಡಿ ಗೆದ್ರಾ?

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಫಿಟಲ್ಸ್ ತಂಡವು 18.2 ಓವರ್​ಗಳಲ್ಲಿ 121 ರನ್​ಗಳಿಸಿ ಆಲೌಟ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನ 63ನೇ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಅದು ಕೂಡ ಮುಂಬೈ ಇಂಡಿಯನ್ಸ್​ ವಿರುದ್ಧ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಂಪೈರ್​ ಮುಂಬೈ…

Read More

ಆ್ಯಂಟಿಕ್ ಆಭರಣ ಕಪ್ಪಾಗಿದ್ಯಾ? ಅದಕ್ಯಾಕೆ ಚಿಂತೆ…!

ಆ್ಯಂಟಿಕ್ ಆಭರಣ ಸ್ವಲ್ಪ ಸಮಯದ ನಂತರ ಕಪ್ಪಾಗಲಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಅವುಗಳ ಹೊಳಪನ್ನು ಮರುಪಡೆಯಲು ಈ ರೀತಿ ಶುಚಿಗೊಳಿಸುವುದು ಉತ್ತಮ.ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಆ್ಯಂಟಿಕ್ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಆರ್ಟಿಫಿಶಿಯಲ್ ಆಭರಣಗಳು ಒಂದೆರಡು ಬಾರಿ ಧರಿಸಿದ ನಂತರ ಅವು ಕಪ್ಪಾಗಲಾರಂಭಿಸುತ್ತದೆ.ಅವುಗಳ ಹೊಳಪು ಕಡಿಮೆಯಾಗಲಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ. ನೀವು ಎಷ್ಟೇ ಬಾರಿ ಬಳಸಿದರೂ ನಿಮ್ಮ ಆರ್ಟಿಫಿಶಿಯಲ್ ಆಭರಣಗಳು ಇನ್ನೂ ಹೊಸದರಂತೆ ಇರಬೇಕಾದರೆ ಈ ಟಿಪ್ಸ್ ನಿಮಗಾಗಿ. ಕಪ್ಪು ಬಣ್ಣಕ್ಕೆ ತಿರುಗುತ್ತದೆ…

Read More
error: Content is protected !!