ಸಿಪಿಐ (ಎಂ) ಮಂಜೇಶ್ವರ ಲೋಕಲ್ ಸಮಿತಿ ನೇತೃತ್ವದಲ್ಲಿ ಯುದ್ಧ ವಿರೋಧಿ ರಾಲಿ.
ಇರಾನ್ ಇಸ್ರೇಲ್ ಯುದ್ಧ ವಿರುದ್ಧ ರಾಲಿ ಸಿಪಿಐ(ಎಂ) ಮಂಜೇಶ್ವರ ಲೋಕಲ್ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಜರಗಿತು. ಇಸ್ರೇಲ್ ನಿರಂತರವಾಗಿ ನೆರೆ ರಾಷ್ಟ್ರಗಳನ್ನು ವಿನಾ ಕಾರಣ ಆಕ್ರಮಿಸುವ ಸಂದರ್ಭದಲ್ಲಿ ಯುದ್ಧ ಬೇಡವೇ ಬೇಡ ಎಂಬ ಘೋಷಣೆಯೊಂದಿಗೆ ಸಿಪಿಐ(ಎಂ) ಮಂಜೇಶ್ವರ ಲೋಕಲ್ ವತಿಯಿಂದ ಪ್ರತಿಭಟನಾ ಸಭೆ ಹಾಗೂ ರಾಲಿ ನಡೆಸಲಾಯಿತು. ಪ್ರತಿಭಟನಾ ರಾಲಿಯನ್ನು ಸಿಪಿಐ(ಎಂ) ಮಂಜೇಶ್ವರ ಏರಿಯಾ ಸಮಿತಿ ಸದಸ್ಯರೂ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬೇಬಿ ಶೆಟ್ಟಿ ಉದ್ಘಾಟಿಸಿದರು. ಗಂಗಾಧರ ದುರ್ಗಿಪಳ್ಳ ಅಧ್ಯಕ್ಷತೆ ವಹಿಸಿದರು. ಸಿಪಿಐ(ಎಂ) ಮಂಜೇಶ್ವರ ಏರಿಯಾ…
