ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ ….. !

ಮಂಗಳೂರು:ಕರಾವಳಿ ಶ್ರದ್ದಾ ಭಕ್ತಿಯ ತಾಣ ಇಲ್ಲಿ ಹಬ್ಬ ಆಚರಣೆಗಳನ್ನು ತುಂಬಾನೇ ವಿಜೃಂಣೆಯಿಂದ ಆಚರಿಸಿಕೊಂಡು ಬರಲಾಗುತ್ತದೆ .ಅದರಂತೆ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದ ವೈಕುಂಠ ಏಕಾದಶಿಯನ್ನು ವಿವಿಧ ವೈಧಿಕ ಆಚರಣೆಗಳಿಂದ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ . ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಶ್ರೀ ಸನ್ನಿಧಿಯಲ್ಲಿ ನಡೆಯುತ್ತಾ ಇದೆ . ರಾಜ್ಯ – ಅಂತರರಾಜ್ಯ ದಿಂದ ವೆಂಕಟರಮಣ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಬಹು ದೂರದಿಂದ ಭಕ್ತರು ಆಗಮಿಸುತ್ತಾ ಇದ್ದಾರೆ . ಕ್ಷೇತ್ರಕ್ಕೆ ಭೇಟಿ…

Read More

ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬಂದಿಗೆ ಹಲ್ಲೆ .ಹಲ್ಲೆ ನಡೆಸಿದ ಆರೋಪಿ ವಶಕ್ಕೆ … !

ಬಂಟ್ವಾಳ:ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಆರೋಪಿಗಳಾದ ಲಾರಿ ಚಾಲಕ ಹಾಗೂ ಕ್ಲೀನರ್ ಟೋಲ್ ಗೇಟ್ ಗೆ ಹಾನಿ ಮಾಡಿ ಸಿಬಂದಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಘಟನೆಯಲ್ಲಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್(23) ಹಾಗೂ ಕ್ಲೀನರ್ ತೇಜಸ್(26) ಪ್ರಕರಣದ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟೋಲ್ ಮೇಲ್ವಿಚಾರಕ ಕಾಸರಗೋಡಿನ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. ಪೊಲೀಸರಿಗೆ ದೂರು ನೀಡಿದ್ದಾರೆ.ಆರೋಪಿಗಳು ಸೋಮವಾರ ಮುಂಜಾನೆ ಟಾಟಾ ಲಾರಿಯಲ್ಲಿ ಟೋಲ್ ಬಳಿ ವಿರುದ್ಧ…

Read More

ಆತ್ಮಹತ್ಯೆ ಮಾಡಿಕೊಂಡ ನಟಿ ನಂದಿನಿ ಡೈರಿಯಲ್ಲಿ ಅಡಗಿದೆ ಸಾವಿನ ಕಾರಣ …. !

ಬೆಂಗಳೂರು: ಜನಪ್ರಿಯ ಕನ್ನಡ ಹಾಗೂ ತಮಿಳು ಟಿವಿ ಧಾರಾವಾಹಿಗಳ ನಟಿ ನಂದಿನಿ ಸಿಎಂ (26) ಅವರ ಬದುಕು ಸ್ತಬ್ದವಾಗಿದೆ . ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ವಾಸಸ್ಥಳದಲ್ಲಿ ಶವವಾಗಿ ಪತ್ತೆಹಚ್ಚಲ್ಪಟ್ಟಿದ್ದು, ಜನರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ / ಡೈರಿ ಪತ್ತೆಯಾಗಿದ್ದು, ಇದರಲ್ಲಿ ನಂದಿನಿ ಸಾವಿನ ಹಿಂದಿನ ಕಾರಣವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ತಮ್ಮ ವೈಯಕ್ತಿಕ ಒತ್ತಡ, ಕುಟುಂಬ ಒತ್ತಡ…

Read More

ಕಾಂಗ್ರೇಸ್ ಸರ್ಕಾರದ ಆಡಳಿತ ವೈಫಲ್ಯ ಎತ್ತಿ ಕಟ್ಟುತ್ತಿದೆ ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ :

ಮಂಗಳೂರು: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಕಾಂಗ್ರೆಸ್ ಆಡಳಿತ ತಿರಸ್ಕರಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಎರಡೂ ಪಟ್ಟಣ ಪಂಚಾಯತ್‌ಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರುವುದು ಜನರ ಭಾವನೆಗಳು ಬಿಜೆಪಿ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು. ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅದೃಷ್ಟ ಪಕ್ಷಕ್ಕೆ ಸಿಕ್ಕಿದೆ ಮತ್ತು ಅಲ್ಪಸಂಖ್ಯಾತ ಮತದಾರರು ಸಹ…

Read More

ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಕಾಸರಗೋಡು: ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18 ರಂದು ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ಮಡಿಕೇರಿಯ ದೀಪಕ್ ಪೊನ್ನಪ್ಪ ರೀಗೆ ಕನ್ನಡ ಭವನದ “ಸಮಾಜ ಸೇವಾ ರತ್ನ ಪ್ರಶಸ್ತಿ 2026 “

ಕಾಸರಗೋಡು: ಧಾರ್ಮಿಕ, ಸಮಾಜ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಗೈದು ಜನಮನ್ನಣೆ ಗಳಿಸಿದ ಇವರನ್ನು ಕಾಸರಗೋಡು ಕನ್ನಡ ಭವನದ “ರಜತ ಸಂಭ್ರಮ ಪ್ರಯುಕ್ತ 18.01.2026.ಭಾನುವಾರ ಕನ್ನಡ ಭವನ ನುಳ್ಳಿಪ್ಪಾಡಿ ಕಾಸರಗೋಡಿನ “ಶ್ರೀ ಶ್ರೀಕೃಷ್ಣ ದೇವರಾಯ “ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮದಲ್ಲಿ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿಯಾದ “ಸಮಾಜ ಸೇವಾ ರತ್ನ ಪ್ರಶಸ್ತಿ “2026.ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ…

Read More

ಕರಾವಳಿ ಜಾನಪದ ಕ್ರೀಡೆ ಕಂಬಳದಲ್ಲಿ ನೂತನ ವಿಶ್ವ ದಾಖಲೆ… ! , ಕಂಬಳದ ಮಿಂಚಿನ ಓಟಗಾರ ಶ್ರೀನಿವಾಸ ಗೌಡರ ದಾಖಲೆಯನ್ನು ಕಂಬಳ ಗದ್ದೆಯಲ್ಲಿ ಹೆಡೆಮುರಿ ಕಟ್ಟಿದ ಮಾಸ್ತಿಕಟ್ಟೆ ಸ್ವರೂಪ್ …. !

ಮಂಗಳೂರು: ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡು ಕರೆ ಮಂಗಳೂರು ಕಂಬಳ ನೂತನ ದಾಖಲೆಗೆ ಸಾಕ್ಷಿಯಾಗಿದೆ . ಈ ಹಿಂದೆ ಕಂಬಳದಲ್ಲಿ ದಾಖಲಾಗಿದ್ದ ಶ್ರೀನಿವಾಸ ಗೌಡರ ದಾಖಲೆಯನ್ನು ಸ್ವರೂಪ್ ಪುಡಿ ಮಾಡಿ ಕಂಬಳ ಲೋಕದ ನೂತನ ಉಸೇನ್ ಬೋಲ್ಟ್ ಎನ್ನುವ ಗರಿಮೆಗೆ ಪಾತ್ರರಾಗಿದ್ದಾರೆ. ಶನಿವಾರ ಆರಂಭವಾದ ಮಂಗಳೂರು ಕಂಬಳ ಭಾನುವಾರ ಸಮಾರೋಪಗೊಂಡಿದ್ದು ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕಂಬಳ…

Read More

ವೇಡನ್ ಸಂಗೀತ ಕಾರ್ಯಕ್ರಮದಲ್ಲಿ ನೂಕು ನುಗ್ಗಲು , ಕಾರ್ಯಕ್ರಮ ವೀಕ್ಷಿಸಿ ಹೊರಡುವಾಗ ರೈಲು ಡಿಕ್ಕಿ ಹೊಡೆದು 19 ವರ್ಷದ ಯುವಕ ಧಾರುಣ ಸಾವು….. !

ಕಾಸರಗೋಡು:ಬೇಕಲ್ ಬೀಚ್ ಫೆಸ್ಟ್‌ನಲ್ಲಿ ನಡೆದ ಗದ್ದಲದ ನಂತರ ಸ್ಥಗಿತಗೊಂಡಿದ್ದ ರ‍್ಯಾಪರ್ ವೇಡನ್ ನ ಸಂಗೀತ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ 19 ವರ್ಷದ ಯುವಕ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ. ಮೃತನನ್ನು ಪೊಯಿನಾಚಿಯ ಶಿವಾನಂದನ್ ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕಾಸರಗೋಡಿನ ಬೇಕಲ್ ಬೀಚ್ ಫೆಸ್ಟ್‌ನ ಅಂಗವಾಗಿ ರ‍್ಯಾಪರ್ ವೇಡನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ತಮ್ಮ ನೆಚ್ಚಿನ ಗಾಯಕನನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು . ಆದರೆ ನಿಗದಿಗಿಂತ ಹೆಚ್ಚಿನ…

Read More

ಪೇಜಾವರ ವಿಶ್ವೇಶತೀರ್ಥ ನಮನ -2025 ಕಾರ್ಯಕ್ರಮ

ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಪೇಜಾವರ ಹರಿಪಾದ ಹರಿಪಾದಗೈದಿರುವ ಪೇಜಾವರ ಶ್ರೀಗಳ ಷಷ್ಠಮ ಸಂಸ್ಕರಣಾರ್ಥ ಪೇಜಾವರ ವಿಶ್ವೇಶತೀರ್ಥ ನಮನ ೨೦೨೫ ಕಾರ್ಯಕ್ರಮವು ಗುರು ವಂದನೆ , ಪ್ರಶಸ್ತಿ ಪ್ರದಾನ , ಕೃಷ್ಣ ಗಾಯನ ಕಾರ್ಯಕ್ರಮದೊಂದಿಗೆ ಪೇಜಾವರ ವಿಶ್ವೇಶತೀರ್ಥ ವೇದಿಕೆ , ವಾದಿರಾಜ ಮಂಟಪ ಕದ್ರಿಯ ಮಂಜುಪ್ರಸಾದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು , ಮೂಡಬಿದರೆ ಜೈನ ಮಠದ ಶ್ರೀ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಉಪಸ್ಥಿಯಲ್ಲಿ…

Read More

ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ :ಕಿಶೋರ್ ಆಳ್ವ

ಮಂಗಳೂರು : ಪುರಾತನ ಹಿನ್ನೆಲೆ ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ, ಸಮುದಾಯ ಹಾಗೂ ಖಾಸಗಿ ರಂಗ ಜೊತೆಯಾಗಿ ಕೈಜೋಡಿಸಬೇಕಾಗಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಹೇಳಿದರು. ಅವರು ಮಂಗಳೂರಿನ ತುಳು ಭವನದಲ್ಲಿ ‘ಎಸ್ .ಯು. ಪಣಿಯಾಡಿ ತುಳುನಾಡ ಚಾವಡಿ’ಯಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರಿನ ಛಾಯಾಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ತುಳು ಭಾಷೆ ಹಾಗೂ…

Read More
error: Content is protected !!